|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯುವ ಶಪಥ ಮಾಡಿರುವ ಬಿಜೆಪಿ ಅದಕ್ಕಾಗಿ ಒಂದು ವರ್ಷದ ಕಾರ್ಯಯೋಜನೆಯ ನೀಲಿ ನಕ್ಷೆ ಸಿದ್ಧಪಡಿಸಿದ್ದು, ಏಪ್ರಿಲ್ ಮೂರನೇ ವಾರದಿಂದ ಎಲ್ಲ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡಲಿದೆ. ರಾಜ್ಯದಲ್ಲಿ ಎರಡು ಬಾರಿ ಸರ್ಕಾರ ರಚನೆ ಮಾಡಿದ್ದರೂ ಬಹುಮತ ಸಿಕ್ಕಿರಲಿಲ್ಲ. ಆಪರೇಷನ್ ಕಮಲ ಮೂಲಕವೇ ಅಧಿಕಾರ ಹಿಡಿಯಲಾಗಿತ್ತು. ಆದರೀಗ, ಬಹುಮತ ಪಡೆಯಲೇಬೇಕೆಂದು ಯೋಜನೆ ರೂಪಿಸಿದೆ. ಒಂದು ವರ್ಷದ ಅವಧಿಯಲ್ಲಿ ಏನೇನು ಮಾಡಬೇಕೆಂದು ಯೋಜನೆ ರೂಪಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಹೊಸಪೇಟೆ ಯಲ್ಲಿ ಏ.16 ಮತ್ತು 17ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ನಂತರ ಪಕ್ಷದ ಚಟುವಟಿಕೆಗಳು ಇನ್ನಷ್ಟು ಬಿರುಸು ಪಡೆದುಕೊಳ್ಳಲಿವೆ. ಒಂದು ವರ್ಷಗಳ ಕಾಲ ಏನೇನು ಮಾಡಬೇಕೆಂಬ ಬಗ್ಗೆ ನಡ್ಡಾ ಮಾರ್ಗದರ್ಶನ ಮಾಡಲಿದ್ದಾರೆ. ಕಾರ್ಯಕಾರಿಣಿಗೂ ಮುನ್ನ ಮೂರು ತಂಡದಲ್ಲಿ ಪ್ರವಾಸ ಮಾಡಲಿದ್ದು, ಒಂದು ಹಂತದ ವೇದಿಕೆ ಸಜ್ಜುಗೊಳಿಸಲಾಗುತ್ತದೆ. ರಾಜ್ಯ ವಿಧಾನಸಭೆಗೆ 2023ರ ಏಪ್ರಿಲ್​ನಲ್ಲಿ ಚುನಾವಣೆ ನಡೆಯಲಿದೆ. ಅಂದರೆ ಇನ್ನು ಒಂದು ವರ್ಷವಿದ್ದು, ಪಕ್ಷ ಈಗ ಸಂಪೂರ್ಣ ಚುನಾವಣಾ ಮೂಡ್​ಗೆ ಜಾರಿದೆ. ಅದಕ್ಕಾಗಿಯೇ ವರ್ಷದ ಕಾರ್ಯಯೋಜನೆ ಸಿದ್ಧಪಡಿಸಿದೆ.
ವಿಸ್ತಾರಕ ಪುನಾರಂಭ:ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ, ಕ್ಷೇತ್ರವಾರು ಚುನಾವಣಾ ಕಾರ್ಯಸೂಚಿ ನಿಗದಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಜಾರಿಗೆ ತಂದಿರುವ ವಿಸ್ತಾರಕ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕಾರ್ಯಕರ್ತರ ತಂಡ ಕ್ಷೇತ್ರವಾರು ಒಂದು ವಾರ ಪ್ರವಾಸ ಮಾಡಿ ಚುನಾವಣೆ ಎದುರಿಸುವ ಬಗ್ಗೆ ಮಾರ್ಗದರ್ಶನ ಮಾಡಲಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ ವಿಸ್ತಾರಕರನ್ನು ನಿಯೋಜಿಸುವ ಕಾರ್ಯ ಏಪ್ರಿಲ್ ಮೂರನೇ ವಾರದಲ್ಲಿ ನಡೆಯಲಿದೆ. ದೊಡ್ಡ ಕ್ಷೇತ್ರಗಳಿಗೆ ಇಬ್ಬರು ಇರುತ್ತಾರೆ. ಒಟ್ಟಾರೆ 300 ಜನ ವಿಸ್ತಾರಕರನ್ನು ನೇಮಕ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಪ್ರತಿ ಬೂತನ್ನು ತಲುಪುವ ಕೆಲಸ ಮಾಡಲಿದ್ದಾರೆ. ಬೂತ್ ಪ್ರಮುಖ್, ಪೇಜ್ ಪ್ರಮುಖರ ಜತೆ ಬಿಜೆಪಿಯ ತತ್ವ ಸಿದ್ಧಾಂತ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ, ಹಿಂದುತ್ವದ ವಿಚಾರಗಳು, ಕಾಂಗ್ರೆಸ್ ಹೇಗೆ ಹಿಂದು ವಿರೋಧಿ ಎಂಬುದನ್ನು ಮನೆ ಮನೆಗೆ ತಲುಪಿಸುವ ಕೆಲಸದ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.
ಪ್ರತಿ ಬೂತ್​ನಲ್ಲಿ ನೇಮಕವಾಗಿರುವ ಪೇಜ್ ಪ್ರಮುಖರು ಮನೆಮನೆಗೆ ಬಿಜೆಪಿ ಎಂಬ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕು. ಪ್ರತಿ ಮನೆಗೂ ವಾರಕ್ಕೆ ಕನಿಷ್ಠ ಒಮ್ಮೆ ಭೇಟಿ ನೀಡಬೇಕು. ಪಕ್ಷ ವಿರೋಧಿಗಳನ್ನು ಸಹ ಬಿಜೆಪಿ ಕಡೆ ಸೆಳೆಯುವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬ ಕಾರ್ಯವನ್ನು ಅರಂಭಿಸಲಾಗುತ್ತದೆ.
ವಾರ್ ರೂಂಗಳು ಆರಂಭ:ದಿನನಿತ್ಯದ ಚಟುವಟಿಕೆಗಳಿಗೆ ವಾರ್ ರೂಂ ಅತ್ಯಂತ ಪರಿಣಾಮಕಾರಿ. ರಾಜ್ಯ ಮಟ್ಟದಲ್ಲಿ ಒಂದು ವಾರ್ ರೂಂ ಇದ್ದರೆ, ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ವಾರ್ ರೂಂಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇವುಗಳು ಸಹ ಏಪ್ರಿಲ್ ಕೊನೆಯ ವೇಳೆಗೆ ಆರಂಭವಾಗಲಿವೆ. ಪ್ರತಿ ನಿತ್ಯ ಆಗುಹೋಗುಗಳನ್ನು ವಾರ್ ರೂಂಗಳ ಮೂಲಕ ನಿಯಂತ್ರಿಸಲಾಗುತ್ತದೆ.
ಸಚಿವರ ಪ್ರವಾಸ:ಜಿಲ್ಲಾ ಉಸ್ತುವಾರಿ ಸಚಿವರು ಇನ್ನುಮುಂದೆ ನಿರಂತರವಾಗಿ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕು. ಸಂಘಟನೆಯಲ್ಲಿ ಲೋಪಗಳಿದ್ದರೆ ಕೂಡಲೇ ಸರಿಪಡಿಸಬೇಕು. ಕಾರ್ಯಕರ್ತರು, ಮುಖಂಡರು, ಶಾಸಕರು, ಕಳೆದ ಬಾರಿ ಸೋತು ಮತ್ತೆ ಅಭ್ಯರ್ಥಿಗಳಾಗುವವರ ನಡುವೆ ಸೇತುವೆ ರೀತಿಯಲ್ಲಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಅವರಿಗೂ ಪ್ರವಾಸ ಮಾಡುವಂತೆ ಸೂಚನೆ ನೀಡಲಾಗಿದೆ. ಸಚಿವರು, ಶಾಸಕರು ಬೆಂಗಳೂರಿಗೆ ಬರುವುದಕ್ಕಿಂತ ಜಿಲ್ಲೆಯಲ್ಲಿಯೇ ಹೆಚ್ಚು ಇರುವಂತೆ ಕಾರ್ಯಕ್ರಮ ರೂಪಿಸಲಾಗಿದೆ.
ಮೋರ್ಚಾಗಳ ಜವಾಬ್ದಾರಿ:ಆಯಾ ವರ್ಗದ ಮತದಾರರನ್ನು ಸೆಳೆಯುವ ಮೂಲಕ ಸೋಷಿಯಲ್ ಇಂಜಿನಿಯರಿಂಗ್​ನ ಕೆಲಸವನ್ನು ಈ ಮೋರ್ಚಾಗಳು ಮಾಡಲಿವೆ. ಪ್ರತಿ ಮೋರ್ಚಾಗಳು ಜಿಲ್ಲಾ ಮಟ್ಟದಲ್ಲಿ ಸಣ್ಣ ಸಣ್ಣ ಸಮಾವೇಶಗಳನ್ನು ನಡೆಸುವಂತೆ ಕಾರ್ಯಯೋಜನೆ ಸಿದ್ಧವಾಗಿದೆ. ರಾಜ್ಯ ಮಟ್ಟದ ಮೋರ್ಚಾಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಸಂಘಟನೆ ಮಾಡಲಿವೆ. ಆ ಸಮಾವೇಶಗಳಿಗೆ ರಾಷ್ಟ್ರೀಯ ನಾಯಕರನ್ನು ಕರೆಸಲಾಗುತ್ತದೆ. ಆದರೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಣ್ಣ ಸಣ್ಣ ಸಮಾವೇಶಗಳಿಗೆ ರಾಜ್ಯ ಮುಖಂಡರು ಭೇಟಿ ಮಾಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ನಿತ್ಯ ಪ್ರತಿ ಜಿಲ್ಲೆಯಲ್ಲಿಯೂ ಪಕ್ಷದ ಚಟುವಟಿಕೆಗಳು ನಡೆಯಬೇಕು ಹಾಗೂ ಜನರಿಗೆ ತಲುಪಬೇಕು ಎಂಬುದು ಪಕ್ಷ ರೂಪಿಸಿರುವ ಯೋಜನೆಯಾಗಿದೆ.
ಯುವಕರು, ಮಹಿಳೆಯರು ಟಾರ್ಗೆಟ್:ಯುವಕರು ಹಾಗೂ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಕಡೆ ಸೆಳೆಯುವಂತೆ ಕಾರ್ಯಕ್ರಮಗಳನ್ನು ರೂಪಿಸುವಂತೆ ಎರಡು ಮೋರ್ಚಾಗಳಿಗೆ ಬಿಜೆಪಿ ಟಾರ್ಗೆಟ್ ನಿಗದಿ ಮಾಡಲಾಗಿದೆ. ಇದರ ಜತೆಗೆ ಪಕ್ಷದಿಂದ ದೂರ ಇರುವ ಸಮುದಾಯ ಸೆಳೆಯುವುದು ಕುರಿತು ಮುಖಂಡರಿಗೆ ಜವಾಬ್ದಾರಿ ನೀಡಲಾಗುತ್ತದೆ.
ಬೆಂಗಳೂರು:ಸಾರ್ವತ್ರಿಕ ಚುನಾವಣೆ 2023ರ ಮಾರ್ಚ್​ನಲ್ಲಾದರೂ ನಡೆಯಲಿ, ಅವಧಿ ಪೂರ್ವದಲ್ಲಾದರೂ ಬರಲಿ, ನಾವಂತೂ ಸಿದ್ಧವಿರೋಣ, ಈಗಿನಿಂದಲೇ ಗಮನಕೊಟ್ಟರೆ ಕೊನೇ ಕ್ಷಣದ ಅವಘಡ ತಪ್ಪಿಸಿಕೊಳ್ಳ ಬಹುದೆಂದು ನಿರ್ಣಯಿಸಿರುವ ಕಾಂಗ್ರೆಸ್, ಮೊದಲ ಹಂತದಲ್ಲಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದೆ. 150 ಸ್ಥಾನಗಳನ್ನು ಗೆಲ್ಲಬೇಕೆಂಬ ಟಾರ್ಗೆಟ್ ನಿಗದಿ ಮಾಡಿಕೊಂಡಿದ್ದು, ಇದಕ್ಕೆ ಪೂರಕವಾಗಿ ದೆಹಲಿ ನಾಯಕ ರಾಹುಲ್ ಗಾಂಧಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ರಾಜ್ಯ ನಾಯಕರು ಒಟ್ಟಾಗಿ ಕುಳಿತು ಯೋಜನೆ ಸಿದ್ಧಪಡಿಸಿ ದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆ ವಿಚಾರ ವಿನಿಮಯ ನಡೆಸಿರುವ ರಾಹುಲ್, ಕೆಲವು ಸೂಚನೆ ನೀಡಿದ್ದಾರೆ. ಇದೇ ವೇಳೆ ಪಕ್ಷದ ಕಡೆಯಿಂದ ರೋಡ್​ವ್ಯಾಪ್ ಏನೆಂಬುದನ್ನು ಪ್ರಸ್ತುತಪಡಿಸಿದ್ದು, ಅದಕ್ಕೆ ರಾಹುಲ್ ಒಪ್ಪಿಗೆ ನೀಡಿದ್ದಾರೆ.

ಮುಂಬರುವ ಚುನಾವಣೆಯನ್ನು ಅಲ್ಪ ಅಂತರದಿಂದ ಗೆಲ್ಲಬಾರದು, ಕನಿಷ್ಠ ಪಕ್ಷ 150 ಸ್ಥಾನವನ್ನು ಗೆಲ್ಲುವ ಗುರಿ ಇಟ್ಟುಕೊಂಡು ಸಾಗಬೇಕು. ಒಟ್ಟಾಗಿ, ಸರಿಯಾದ ವಿಚಾರ ಇಟ್ಟುಕೊಂಡು ಹೋರಾಟ ಮಾಡಿದರೆ ಇದು ಕಷ್ಟವಲ್ಲ.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ (ಪಕ್ಷದ ಮುಖಂಡರಿಗೆ ಹೇಳಿದ್ದು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
