ಬೆಂಗಳೂರು:ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್(Congress)ಮತ್ತು ಬಿಜೆಪಿ(bjp)ನಡುವೆ ಆರೋಪಗಳ ಜಟಾಪಟಿ ನಡೆಯುತ್ತಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್(Tweet)ಮಾಡಿ ವ್ಯಂಗ್ಯವಾಡಿದೆ.
ಇದನ್ನೂ ಓದಿ:ಇಷ್ಟೊಂದು ಮಳೆಯಾಗುತ್ತಿದ್ದರೂ ಟ್ಯಾಂಕರ್​ನಲ್ಲಿ ಗಿಡಗಳಿಗೆ ನೀರುಣಿಸಬೇಕಾ?
“ಬಿಜೆಪಿ ಪ್ರತಿಭಟಿಸುತ್ತಿರುವುದು ಯಾವ ಕಾರಣಕ್ಕೆ? ಎಂಬುದು ಅವರಿಗೇ ಸ್ಪಷ್ಟತೆ ಇದ್ದಂತಿಲ್ಲ! ಪ್ರತಿಭಟಿಸುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ. ಕನ್ನಡಿಗರಿಗೆ ಅಕ್ಕಿ ನೀಡದೆ ವಂಚಿಸಿದ್ದಕ್ಕೆ, ನೆರೆ ಪರಿಹಾರ ನೀಡದೆ ದ್ರೋಹವೆಸಗಿದ್ದಕ್ಕೆ, ಕರ್ನಾಟಕದ ಸಂಕಷ್ಟಕ್ಕೆ ಸ್ಪಂದಿಸದಿರುವುದಕ್ಕೆ” ಎಂದು ಟ್ವೀಟ್ ಮಾಡಿದೆ.
“ಬಿಜೆಪಿಯವರು ಮೋದಿ ವಿರುದ್ಧ ಪ್ರತಿಭಟಿಸಲಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ಆಶೀರ್ವಾದ ಕಳೆದುಕೊಳ್ಳುವಿರಿ ಎಂದು ಕನ್ನಡಿಗರಿಗೆ ಬೆದರಿಕೆ ಹಾಕಿದ್ದ ಬಿಜೆಪಿ ಈಗ ಅಂದು ಹೇಳಿದಂತೆಯೇ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದೆ. ಕೇಂದ್ರ ಸರ್ಕಾರದ ಧೋರಣೆಯು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!
“ರಾಜ್ಯಗಳಿಂದಲೇ ಸಂಗ್ರಹಿಸಿದ ಅಕ್ಕಿಯನ್ನು ರಾಜ್ಯಗಳಿಗೆ ಕೊಡುವುದಿಲ್ಲ ಎಂದರೆ ಏನರ್ಥ?” ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
