ಗುಬ್ಬಿ:ಮೊಟ್ಟಮೊದಲ ಬಾರಿ ಪಟ್ಟಣ ಪಂಚಾಯಿತಿ ಇತಿಹಾಸದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಬಹುಮತ ಇಲ್ಲದಿದ್ದರೂ ಮೀಸಲು ಆಧಾರದಲ್ಲಿ ಬಿಜೆಪಿಯ ಜಿ.ಎನ್.ಅಣ್ಣಪ್ಪಸ್ವಾಮಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪಪಂ ಅಧಿಕಾರ ಕಸಿಯುವ ಮೂಲಕ ಮಾಜಿ ಸಚಿವ, ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಬಿಜೆಪಿ ಪೆಟ್ಟುನೀಡಿದೆ.
ಜೆಡಿಎಸ್ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಕೆ.ಮಹಾಲಕ್ಷ್ಮೀ ಆಯ್ಕೆಯಾದರು. ಎಸ್‌ಟಿ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಹೊರತಾಗಿ ಬೇರೆಯಾವ ಸದಸ್ಯರು ಇಲ್ಲದಿದ್ದ ಕಾರಣಕ್ಕೆ ಅವಿರೋಧ ಆಯ್ಕೆ ನಡೆಯಿತು. ಆದರೆ, ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಾಣಿಸಿ, ಮತದಾನ ನಡೆಯಿತು.
ಒಟ್ಟು 19 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 11 ಜೆಡಿಎಸ್, 6 ಬಿಜೆಪಿ, ಕಾಂಗ್ರೆಸ್ 6 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದರು. ಮೀಸಲಾತಿ ಲಾಜಿಕ್ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ನಿರಾಯಾಸವಾಗಿ ಪಡೆದ ಬಿಜೆಪಿ, ಉಪಾಧ್ಯಕ್ಷ ಸ್ಥಾನ ಪಡೆಯಲು ವಿವಿಧ ರಾಜಕೀಯ ಕಸರತ್ತು ನಡೆಸಿತು. ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಗಮನಿಸಿದ್ದ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿತಾದರೂ, ಈ ತಂತ್ರ ಕೈಕೊಟ್ಟಿತು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಮಹಾಲಕ್ಷ್ಮೀ, ಬೆಜೆಪಿ ಬೆಂಬಲದ ಜತೆ ಕಾಂಗ್ರೆಸ್‌ನ ಆಯೀಷಾ ತಸ್ಲೇನಾ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸವಿತಾ ಎಸ್.ಗೌಡ ನಾಮಪತ್ರ ಸಲ್ಲಿಸಿದ್ದು ಕಣವನ್ನು ರಂಗೇರಿಸಿತ್ತು. ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಕೂಡ ಮತದಾನದಲ್ಲಿ ಭಾಗವಹಿಸಿದ್ದರು.
11 ಮತಗಳು ಪಡೆದ ಕೆ.ಮಹಾಲಕ್ಷ್ಮೀ ಉಪಾಧ್ಯಕ್ಷರಾಗಿ ಚುನಾಯಿತರಾದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆಯೀಷಾ ತಸ್ಲೇನಾ ಸಂಸದರ ಮತ ಸೇರಿ 9 ಮತ ಪಡೆದು ಪರಾಜಯಗೊಂಡರು. ಬಂಡಾಯವಾಗಿದ್ದ ಸವಿತಾ.ಎಸ್.ಗೌಡ ಕೇವಲ ಒಂದು ಮತ ಮಾತ್ರ ಹಾಕಿಕೊಂಡು ಸೋಲು ಕಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
