ತುಮಕೂರು:ತೀವ್ರ ಕುತೂಹಲ ಕೆರಳಿಸಿದ್ದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ರೀತಿ ವಿಜಯ ದಾಖಲಿಸಿದ್ದು, ಶಿರಾ ರಾಜಕೀಯ ಚರಿತ್ರೆಯಲ್ಲೇ ಮೊದಲ ಬಾರಿ ಕಮಲ ಅರಳಿದೆ. ಪಕ್ಷದ ಅಭ್ಯರ್ಥಿ ಡಾ.ರಾಜೇಶ್​ಗೌಡ ಇತಿಹಾಸ ನಿರ್ವಿುಸಿದ್ದಾರೆ.
ಮತ ಎಣಿಕೆ ಆರಂಭವಾದಾಗಿನಿಂದಲೂ ಪ್ರತಿ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಕೊನೆಯಲ್ಲಿ ಗೆಲುವಿನ ಪತಾಕೆ ಹಾರಿಸಿತು. ಹಿರಿಯ ರಾಜಕಾರಣಿ ಟಿ.ಬಿ.ಜಯಚಂದ್ರ ಒಂದು ಸುತ್ತಿನಲ್ಲೂ ಮುನ್ನಡೆ ಪಡೆಯಲು ಸಾಧ್ಯವಾಗಲೇ ಇಲ್ಲ.
14, 15 ಹಾಗೂ 16ನೇ ಸುತ್ತಿನಲ್ಲಿ ಶಿರಾ ನಗರದ ಬೂತ್​ಗಳ ಎಣಿಕೆ ವೇಳೆ ಮಾತ್ರ ಡಾ.ರಾಕೇಶ್​ಗೌಡ ಮುನ್ನಡೆಯ ಅಂತರ 8 ಸಾವಿರದಿಂದ 3 ಸಾವಿರಕ್ಕೆ ಕುಸಿದಿದ್ದು ಬಿಟ್ಟರೆ ಉಳಿದಂತೆ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಯವಾಗುತ್ತಲೇ ಸಾಗಿತ್ತು. ವಿಜಯ ಖಚಿತವಾದ ಕೂಡಲೇ ಎಣಿಕೆ ಕೇಂದ್ರದಲ್ಲಿ ಬಳಿ ಡಾ.ರಾಜೇಶ್​ಗೌಡ ಕಾಣಿಸಿಕೊಂಡರು. ಜೆಡಿಎಸ್ ಸೋಲು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಯಾದರೂ ಗೆಲ್ಲಲಿ ಬಿಜೆಪಿ ಗೆಲ್ಲಬಾರದು ಎಂದು ಜೆಡಿಎಸ್ ಏಜೆಂಟ್​ಗಳು ಎಣಿಕೆ ಕೇಂದ್ರದಲ್ಲಿ ಮಾತನಾಡಿಕೊಂಡಿದ್ದು ಕೇಳಿಸಿತು. ಎಣಿಕೆ ಪ್ರಕ್ರಿಯೆ ಮಧ್ಯಾಹ್ನ 3.30ಕ್ಕೆ ಪೂರ್ಣವಾಯಿತು.
ಕೇಂದ್ರದ ಮುಂದೆ ಕಾದು ಕುಳಿತಿದ್ದ ಬಿಜೆಪಿ ಕಾರ್ಯಕರ್ತರು ಜಯ ಖಚಿತವಾದ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೊದಲ ಬಾರಿ ಬಿಜೆಪಿ ಗೆದ್ದಿರುವ ಕಾರಣಕ್ಕೆ ಸಣ್ಣ ಅನುಮಾನದಿಂದಲೇ ಶಿರಾದಿಂದಲೂ ಬಿಜೆಪಿ ಕಾರ್ಯಕರ್ತರು ತಡವಾಗಿ ಎಣಿಕೆ ಕೇಂದ್ರದ ಬಳಿ ಕಾಣಿಸಿಕೊಳ್ಳಲಾರಂಭಿಸಿದರು. ಗೆಲುವಿನ ರೂವಾರಿ ಬಿ.ವೈ.ವಿಜಯೇಂದ್ರ ಆಗಮಿಸಿದ ಕೂಡಲೇ ಕಾರ್ಯಕರ್ತರು ಅವರನ್ನು ಹೊತ್ತುಕೊಂಡು ಕುಣಿದಾಡಿದರು,
ಶಿರಾ ನಗರದಲ್ಲಿ ಜಯಣ್ಣ ಪ್ರಾಬಲ್ಯ
ಕ್ಷೇತ್ರದೆಲ್ಲೆಡೆ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್​ಗೌಡ ಪರವಾದ ಸುನಾಮಿ ಕಂಡುಬಂದರೆ ಶಿರಾ ನಗರದ ಕೆಲವು ಬೂತ್​ಗಳಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಂಡಿದ್ದು ಫಲಿತಾಂಶದಲ್ಲಿ ಸ್ವಲ್ಪ ಏರಿಳಿತಕ್ಕೆ ಕಾರಣವಾಗಿತ್ತು. 14ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯ ಮುನ್ನಡೆ ದಿಢೀರ್ 5,000 ಕಡಿಮೆಯಾದಾಗ ಬಿಜೆಪಿ ಮುಖಂಡರ ಮುಖದಲ್ಲಿಯೂ ಆತಂಕದ ಗೆರೆಗಳು ಕಾಣಿಸಿಕೊಂಡವು, ನಂತರದ ಸುತ್ತಿನಲ್ಲಿ ಬಿಜೆಪಿ ಈ ಹಿನ್ನಡೆಯನ್ನು ಸರಿದೂಗಿಸಿಕೊಂಡು ವಿಜಯದೆಡೆಗೆ ಹೆಜ್ಜೆಹಾಕಿತು.
ಮದಲೂರು ಕೆರೆ, ಕಾಡುಗೊಲ್ಲ ನಿಗಮ
ಎಂಎಲ್ಸಿ ಎನ್.ರವಿಕುಮಾರ್ ನೇತೃತ್ವದ ತಂಡ ಪ್ರತಿ ಬೂತ್​ಗಳಲ್ಲಿ ಸಮಿತಿ ಸಭೆಗಳು, ಪಕ್ಷದ ಸಭೆಗಳನ್ನು ನಿರಂತರವಾಗಿ ನಡೆಸಿತು. ವ್ಯಾಟ್ಸ್ ಆಪ್ ಗುಂಪುಗಳ ರಚನೆ ಸೇರಿ ಜಾಲತಾಣಗಳ ಬಳಕೆ ಮಾಡಿಕೊಳ್ಳಲಾಯಿತು.ಜನರನ್ನು ಸೆಳೆಯಲು ಮದಲೂರು ಕೆರೆಗೆ ಹೇಮೆ ನೀರು ಹರಿಸುವ ಭರವಸೆ ಕೊಡಲಾಯಿತು. ಮದಲೂರಿನಲ್ಲಿ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ವಿಜಯ ಸಂಕಲ್ಪ ಸಮಾವೇಶ ಆಯೋಜಿಸಲಾಯಿತು. ಚುನಾವಣೆ ಘೊಷಣೆಗೂ ಮುನ್ನ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಘೊಷಿಸಲಾಯಿತು. ಈ ಭರವಸೆಗಳು ದೊಡ್ಡ ಮತಬ್ಯಾಂಕ್ ಬಿಜೆಪಿಯತ್ತ ವಾಲುವಂತೆ ಮಾಡಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
