ಮಂಡ್ಯ:ಇದು ಮೂಡಲ ಬಾಗಿಲು ಹನುಮಪ್ಪನಿಗೂ, ಮುಲ್ಲಾ ಸಾಬ್ ನಡುವಿನ ಚುನಾವಣೆ. ಟಿಪ್ಪು ಮತ್ತು ಒಡೆಯರ್ ನಡುವಿನ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶ ಸಿ.ಟಿ.ರವಿ ಹೇಳಿದರು.
ಮಂಡ್ಯ ವಿವಿ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಜನಸಂಪರ್ಕ ಯಾತ್ರೆಯಲ್ಲಿ ಭಾಷಣ ಮಾಡಿದ ಸಿ.ಟಿ.ರವಿ, ಮೂಡಲ ಬಾಗಿಲು ಆಂಜನೇಯನಿಗೂ ನ್ಯಾಯ ಕೊಡುವ ಸರ್ಕಾರ ನಮ್ಮ ಸರ್ಕಾರ. ನೀವು ಕೊಡುವ ವೋಟ್ ಮುಂದಿನ ಜನ್ಮದಲ್ಲಿ ಏನೋ ಹಾಕ್ತೀನಿ ಅಂದವರಿಗೆ ಅಲ್ಲ. ಮೂಡಲ ಬಾಗಿಲು ಆಂಜನೇಯನಿಗೆ ನ್ಯಾಯ ಕೊಡೋಕೆ‌. ಈ ಚುನಾವಣೆ ಟಿಪ್ಪುV/S ಒಡೆಯರ್ ನಡುವಿನ ಚುನಾವಣೆ. ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು ಅಲ್ಲ, ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ. ಕೆಲವರು ಟಿಪ್ಪು ನಮ್ಮಪ್ಪನಿಗಿಂತ ಹೆಚ್ಚು ಅಂತಾರಲ್ಲ, ಮೈಶುಗರ್ ಕಾರ್ಖಾನೆ, ಸಿಲ್ಕ್ ಕಾರ್ಖಾನೆ ಮಾಡಿದ್ದು ಯಾರು‌? ಅದನ್ನ ಟಿಪ್ಪು ಮತ್ತು ಅವರಪ್ಪ ಮಾಡಿದ್ದಲ್ಲ. ನಮ್ಮ ಪಾಲಿನ ಭಾಗ್ಯದಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದು ಎಂದರು.
ಉರಿಗೌಡ, ದೊಡ್ಡ ನಂಜೇಗೌಡರ ರಕ್ತ ನಮ್ಮ ಮೈಯಲ್ಲಿ ಹರಿಯುತ್ತಿದೆ. ಟಿಪ್ಪು ಮತ್ತು ಅವರಪ್ಪನ ರಕ್ತ ನಮ್ಮ ದೇಹದಲ್ಲಿ ಅಲ್ಲ. ನಿಜವಾದ ಹುಲಿ ಉರೀಗೌಡ, ದೊಡ್ಡ ನಂಜೇಗೌಡ. ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆ ನಿರ್ಮಾಣ ಆಗಬೇಕು ಎಂದ ಸಿ.ಟಿ.ರವಿ, ಕೆಲವರು ಟಿಪ್ಪುವನ್ನು ಕನ್ನಡ ಪ್ರೇಮಿ ಅಂತಾರೆ. ಇತಿಹಾಸ ಮರೆತವನು ಇತಿಹಾಸವ ಸೃಷ್ಟಿಸಲಾರ. ಮೂಡಿಲ ಬಾಗಿಲು ಆಂಜನೇಯನಿಗೆ ನ್ಯಾಯ ಕೊಡಬೇಕಿದೆ ಎಂದು ಪುನರುಚ್ಛರಿಸಿದರು.
ಮಂಡ್ಯ ಬಿಟ್ಟು ಇಂಡಿಯಾ ಇಲ್ಲ, ಇಂಡಿಯಾ ಬಿಟ್ಟು ಮಂಡ್ಯನೂ ಇಲ್ಲ. ನೀವು ಕೊಡುವ ಕಾಲದಲ್ಲಿ ನಂಬಿಕೆ ಇಟ್ಟು ಬೆನ್ನಿಗೆ ನಿಂತ್ರಿ. ರಾಜಕೀಯ ಮರು ಹುಟ್ಟನ್ನು ಕೊಟ್ರಿ. ಮಂಡ್ಯ ಯಾರ ಜಹಗೀರ್ ಅಲ್ಲ. ಮಂಡ್ಯದ ಜನ ಸ್ವಾಭಿಮಾನಿ ಜನ ಅನ್ನೋ ಸಂದೇಶ ಕೊಡಬೇಕಿದೆ. ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಲ್ಲ ಅನ್ನೋ ಸಂದೇಶವನ್ನ ಮಂಡ್ಯ ಜನತೆ ಕೊಡಬೇಕು ಎನ್ನುತ್ತಾ ಪರೋಕ್ಷವಾಗಿ ಜೆಡಿಎಸ್​ ಮತ್ತು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಲಿಗೆ ಸಬ್ಸಿಡಿ ಕೊಟ್ಟದ್ದು, ಕಿಸಾನ್ ಸಮ್ಮಾನ್ ಯೋಜನೆ ಕೊಟ್ಟದ್ದು ಬಿಜೆಪಿ ಸರ್ಕಾರ. ನಮ್ಮನ್ನ ಕೆಲವರು ಜಾತಿವಾದಿ ಅಂತಾರೆ. ಆಯುಷ್ಮಾನ್ ಕಾರ್ಡ್ ಕೊಟ್ಟಾಗ ನಾವು ಜಾತಿ ನೋಡಲಿಲ್ಲ. ಸುಮ್ಮನೇ ಮತ ಕೊಡಿ ಅಂತಾ ಕೇಳೋಕೆ ಬಂದಿಲ್ಲ. ನ್ಯಾಯ ಕೇಳೋಕೆ ಬಂದಿದ್ದೇನೆ. ವಿದ್ಯುತ್ ಸಂಪರ್ಕ, ಗ್ಯಾಸ್, ಶೌಚಗೃಹ ಕೊಟ್ಟದ್ದು ನಾವು. ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ ಮಾಡಿದ್ದು ಬಿಜೆಪಿ. ಸುಮ್ಮನೇ ನ್ಯಾಯ ಕೊಡಿ ಅಂತಾ ಕೇಳುತ್ತಿಲ್ಲ, ನಮ್ಮ ಸಾಧನೆ ಮುಂದಿಟ್ಟು, ನಾವು ಕೊಟ್ಟ ಕೊಡುಗೆಯನ್ನ ಮುಂದಿಟ್ಟು ನ್ಯಾಯ ಕೇಳ್ತಿದ್ದೇನೆ. ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಿಸಿದ್ದು ನಾವು. ಒಕ್ಕಲಿಗರು, ಹಿಂದುಳಿದವರ ಪರ ನಾವಿದ್ದೇವೆ. ಈ ಬಾರಿ ಚುನಾವಣೆ ಮೂಡಲ ಬಾಗಿಲು ಹನುಮಪ್ಪನಿಗೂ, ಮಂಡ್ಯ ಸಾಬ್ ನಡುವಿನ ಚುನಾವಣೆ ಎಂದು ಪುನರುಚ್ಛರಿಸಿದರು.
HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

ಮಂಡ್ಯದಲ್ಲಿ ಮೆಗಾ ಡೇರಿ ಉದ್ಘಾಟನೆ: ಪ್ರತಿ ಪಂಚಾಯಿತಿಯಲ್ಲೂ ಡೇರಿ ಸ್ಥಾಪನೆಗೆ ಯೋಜನೆ ಎಂದ ಅಮಿತ್​ ಶಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
