ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ಬಿಜೆಪಿಯಲ್ಲಿ ಮತ್ತೆ ತೀವ್ರವಾಗಿರುವ ಬಣಗಾರಿಕೆ, ಭಿನ್ನಮತ ಚಟುವಟಿಕೆಗಳ ಕಾರ್ಯ- ಕಾರಣ ತಿಳಿಯುವ ಕಾರ್ಯಾಚರಣೆ ಶುರುವಾಗಿದೆ. ಇದರ ಭಾಗವಾಗಿ ಬುಧವಾರ ಎರಡು ಪ್ರಮುಖ ಬೆಳವಣಿಗೆಗಳಾಗಿವೆ ಎಂದು ರ್ತಸಲಾಗುತ್ತಿದೆ. ‘ಕೇಶವ ಕೃಪಾ’ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬುಧವಾರ ಭೇಟಿ ಮಾಡಿ ಸಮಾಲೋಚಿಸಿದ್ದಾರೆ.
ರಾಜ್ಯ ರಾಜಕೀಯ ವಿದ್ಯಮಾನ, ಪಕ್ಷದ ರಾಜ್ಯ ಸಂಘಟನೆ ಕಾರ್ಯವೈಖರಿ ಮೇಲೆ ನಿಗಾ ಜತೆಗೆ ವರಿಷ್ಠರ ಸಂದೇಶ ರಾಜ್ಯ ನಾಯಕತ್ವಕ್ಕೆ ತಲುಪಿಸುವುದು ಮುಕುಂದ ಅವರ ಜವಾಬ್ದಾರಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಕುಂದ ಮತ್ತು ವಿಜಯೇಂದ್ರ ನೇರ ಮಾತುಕತೆ ಪಕ್ಷದೊಳಗೆ ಕುತೂಹಲ ಹುಟ್ಟುಹಾಕಿದೆ. ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ, ಕೆಲವು ನಾಯಕರು ಮತ್ತೊಮ್ಮೆ ಅಸಮಾಧಾನ ಹೊರ ಹಾಕಿರುವುದಕ್ಕೂ ‘ಕೇಶವ ಕೃಪಾ’ದ ಮಾತುಕತೆಗೂ ತಳುಕು ಹಾಕಲಾಗುತ್ತಿದೆ. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಸಭೆಯಲ್ಲಿ ಅರವಿಂದ ಲಿಂಬಾವಳಿ, ಪ್ರತಾಪಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಸಿದ್ಧೇಶ್ವರ್ ಸಹಿತ ಹಲವು ಮುಖಂಡರು ಭಾಗವಹಿಸಿದ್ದರು. ವಾಲ್ಮೀಕಿ ನಿಗಮ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಸೆ.17ರಂದು ಶುರುವಾಗಲಿದೆ ಎಂಬುದನ್ನು ಮಾಜಿ ಸಂಸದ ಪ್ರತಾಪ್​ಸಿಂಹ ಖಚಿತಪಡಿಸಿದ್ದಾರೆ. ಯತ್ನಾಳ್ ನೇತೃತ್ವದ ಈ ಪಾದಯಾತ್ರೆಗೆ ವರಿಷ್ಠರ ಅನುಮತಿ ಸಿಗುತ್ತದೆ, ಪಕ್ಷದ ರಾಜ್ಯಾಧ್ಯಕ್ಷ ಸೇರಿ ಎಲ್ಲರೂ ಭಾಗವಹಿಸಲಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.
ಗಂಭೀರ ಪರಿಗಣನೆ: ಮೈಸೂರು ಚಲೋ ಯಶಸ್ವಿಯಾಗಿದೆ. ಉತ್ತಮ ಜನಾಭಿಪ್ರಾಯ ರೂಪಿಸುವ ಹೊತ್ತಲ್ಲಿ ಪ್ರತ್ಯೇಕ ಸಭೆ, ಗುಂಪುಗಾರಿಕೆಯು ಸಲ್ಲದ ಬೆಳವಣಿಗೆ ಎಂದು ಕೇಂದ್ರದ ಕೆಲ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ದೆಹಲಿ ನಾಯಕರು ಮೌನವಹಿಸಿದ್ದಾರೆ ಎಂಬ ಆಕ್ಷೇಪದ ನಡುವೆ ‘ಸಂಘ’ದವರು ಕ್ಷೇತ್ರ ಕಾರ್ಯಕ್ಕೆ ಧುಮುಕಿದ್ದು, ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದೇ ಅರ್ಥವೆಂದು ಮೂಲಗಳು ವಿಶ್ಲೇಷಿಸತೊಡಗಿವೆ. ಮುಕುಂದ ಜತೆಗೆ ವಿಜಯೇಂದ್ರ ಮಾತುಕತೆ ನಡೆಸಿ ಹೋದ ಬಳಿಕ ‘ಕೇಶವ ಕೃಪಾ’ಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಬಿ.ಎಲ್.ಸಂತೋಷ್ ಆಗಮಿಸಿದ್ದು, ಮುಕುಂದ ಜತೆಗೆ ಮಾತುಕತೆ ನಡೆಯಿತೇ? ಎನ್ನುವುದು ಗೊತ್ತಾಗಿಲ್ಲ.
ದೆಹಲಿ ನಾಯಕರು ಡಿಸೈಡ್:ಚನ್ನಪಟ್ಟಣ ಟಿಕೆಟ್ ವಿಚಾರದ ದಿನೇದಿನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ದೆಹಲಿ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಶೀಘ್ರದಲ್ಲೇ ನಿರ್ಧಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ಚಿಹ್ನೆಯಿಂದಲೇ ಸ್ಪರ್ಧಿಸಲು ಪಟ್ಟು ಹಿಡಿದಿದ್ದಾರೆ. ಜೆಡಿಎಸ್​ನಿಂದ ಪುತ್ರ ನಿಖಿಲ್​ನನ್ನು ಕಣಕ್ಕಿಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಕಚೇರಿಯಲ್ಲಿ ಠಿಕಾಣಿ:ಸುದೀರ್ಘ ಅವಧಿಯಿಂದ ಪಕ್ಷದ ಕಚೇರಿಗೆ ದೂರ ಅಂತರ ಕಾಯ್ದುಕೊಂಡಿದ್ದ ಸಂತೋಷ್ ಬುಧವಾರ ಭೇಟಿ ನೀಡಿದ್ದಲ್ಲದೆ, ನಾಲ್ಕೈದು ತಾಸು ಬಿಡಾರ ಹೂಡಿರುವುದು ಗಮನಾರ್ಹ. ಪಕ್ಷದ ಕಚೇರಿಯಲ್ಲಿದ್ದ ಕೆಲವು ರಾಜ್ಯ ಪದಾಧಿಕಾರಿಗಳು, ಮಾಜಿ-ಹಾಲಿ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಮೈಸೂರು ಚಲೋ ಪಾದಯಾತ್ರೆ, ಸಂಘಟನಾತ್ಮಕ ಚಟುವಟಿಕೆಗಳು, ರಾಜ್ಯ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಮತ್ತಿತರ ವಿಷಯಗಳು ಪ್ರಸ್ತಾಪವಾದವು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಭೇಟಿಯಾಗಿ ಕುಶಲೋಪರಿ ವಿಚಾರಿಸಿ, ಶಿಕಾರಿಪುರಕ್ಕೆ ಹೋಗುವುದಾಗಿ ತಿಳಿಸಿ ತೆರಳಿದ್ದಾರೆ. ಇದಕ್ಕೂ ಮುನ್ನ ಬೇರೊಂದು ಸ್ಥಳದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಅವರನ್ನು ಕರೆಸಿಕೊಂಡ ಬಿ.ಎಲ್.ಸಂತೋಷ್ ಮಾತುಕತೆ ನಡೆಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ನೇಮಕದ ಚಿಂತನೆ:ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ.ರಾಜೇಶ್ ಅವರನ್ನು ವಿಮುಕ್ತ ಮಾಡಿದ ಬಳಿಕ ಅನೇಕ ತಿಂಗಳಿಂದ ಆ ಹುದ್ದೆ ಭರ್ತಿಯಾಗಿಲ್ಲ. ಈ ನಡುವೆ ಪಕ್ಷದ ವರಿಷ್ಠರ ಸೂಚನೆಯಂತೆ 10 ವಿಭಾಗಗಳ ಸಂಘಟನಾ ಕಾರ್ಯದರ್ಶಿಗಳನ್ನು ರಾಜ್ಯ ಸಮಿತಿ ಬಿಡುಗಡೆಗೊಳಿಸಿದೆ. ವಿಭಾಗ ಸಂಘಟನಾ ಕಾರ್ಯದರ್ಶಿಗಳೂ ಸಹಿತ ಸಂಘದ ನೆಲೆಯವರಾಗಿದ್ದಾರೆ. ರಾಜ್ಯ ಮತ್ತು ವಿಭಾಗಮಟ್ಟದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಹೊಸಬರ ನೇಮಕಕ್ಕೆ ಗಂಭೀರ ಚಿಂತನೆ ನಡೆದಿದೆ.
17ರಂದು ದೆಹಲಿಗೆ ಬಿವೈವಿ :ಆ.17ರಂದು ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನ ಮತ್ತು ಮೈಸೂರು ಚಲೋ ಪಾದಯಾತ್ರೆ ಕುರಿತು ರ್ಚಚಿಸುವ ಸಾಧ್ಯತೆಗಳಿವೆ. ಇದೇ ವೇಳೆ ಕೂಡಲಸಂಗಮದಿಂದ ಬಳ್ಳಾರಿ ಪಾದಯಾತ್ರೆ ಬಗ್ಗೆ ಪ್ರಸ್ತಾಪವಾಗಬಹುದು. ವರಿಷ್ಠರನ್ನು ಭೇಟಿ ಮಾಡಲು ವಿಜಯೇಂದ್ರ ತಾವಾಗಿ ತೆರಳುತ್ತಿದ್ದಾರೆಯೋ ಅಥವಾ ಬುಲಾವ್ ಮೇರೆಗೋ? ಎನ್ನುವುದು ದೃಢಪಟ್ಟಿಲ್ಲವೆಂದು ಮೂಲಗಳು ಹೇಳಿವೆ.
ದಿಲ್ಲಿಯ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ಪ್ರಧಾನಿ ಮೋದಿಯಿಂದ ರಾಷ್ಟ್ರಧ್ವಜಾರೋಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
