ಕೋಲಾರ:ದೇಶ ಹಾಗೂ ರಾಜ್ಯದಲ್ಲಿ ಕರೊನಾ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಸಾವಿನ ಪ್ರಕರಣಗಳೂ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಇವೆ.
ಸೋಂಕು ವ್ಯಾಪಿಸುತ್ತಿರುವ ಹಾಗೂ ಅದರಿಂದ ಉಂಟಾಗುತ್ತಿರುವ ಗಂಭೀರ ಪರಿಸ್ಥಿತಿಯ ಬೇಡಿಕೆಗೆ ತಕ್ಕಂತೆ ಹಾಸಿಗೆ, ಐಸಿಯು, ಆಕ್ಸಿಜನ್ ಸಿಗದ್ದರಿಂದ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಮತ್ತೊಂದೆಡೆ ಕರೊನಾಗೆ ಬಲಿಯಾಗುತ್ತಿರುವವರ ಪೈಕಿ ಜನಪ್ರತಿನಿಧಿಗಳೂ ಇದ್ದು, ಆ ಪಟ್ಟಿಗೆ ಇಂದು ಮತ್ತೊಬ್ಬರ ಸೇರ್ಪಡೆ ಆದಂತಾಗಿದೆ. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೊಬ್ಬರು ಕರೊನಾದಿಂದಾಗಿ ಇಂದು ಮೃತಪಟ್ಟಿದ್ದಾರೆ.
ಕೋಲಾರ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಲಕ್ಷ್ಮಯ್ಯ (55) ಮೃತಪಟ್ಟವರು. ಒಂದು ವಾರದ ಹಿಂದೆ ಇವರಲ್ಲಿ ಸೋಂಕು ದೃಢಪಟ್ಟಿತ್ತು. ಅಲ್ಲದೆ ಸೋಂಕಿನ ಕಾರಣದಿಂದಾಗಿ ಉಸಿರಾಟದ ಸಮಸ್ಯೆಗೂ ಒಳಗಾಗಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್​ ಮಾಡಿ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
