ಬೆಂಗಳೂರು:ಮುಂದಿನ ವಿಧಾನಸಭಾ ಚುನಾವಣೆಗೆ ಭರದ ಸಿದ್ದತೆ ನಡೆಸಿರುವ ಆಡಳಿತಾರೂಢ ಬಿಜೆಪಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ರಚನೆ ಮಾಡಬೇಕೆಂಬ ತೀರ್ವನಕ್ಕೆ ವರಿಷ್ಠರು ಬಂದಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಇದೇ ಪದಾಧಿಕಾರಿಗಳನ್ನು ನಂಬಿಕೊಂಡರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವೆಂಬ ಮಾಹಿತಿ ವರಿಷ್ಠರಿಗೆ ಲಭ್ಯವಾಗಿದೆ. ಹಿರಿಯ ಉಪಾಧ್ಯಕ್ಷರೊಬ್ಬರು ಭೇಟಿಗೆ ಬರುವ ಕಾರ್ಯಕರ್ತರನ್ನು ಕಚೇರಿ ಒಳಗೆ ಸೇರಿಸುತ್ತಿಲ್ಲ. ಕಾರ್ಯಕರ್ತರನ್ನು ಬೀದಿಯಲ್ಲಿ ನಿಲ್ಲಿಸಿ, ಅಲ್ಲಿಗೆ ಬಂದು ಮಾತನಾಡಿ ಕಳುಹಿಸುತ್ತಿದ್ದಾರೆ. ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ಅಸಮಾಧಾನಗಳನ್ನು ಚಿವುಟಿ ಹಾಕುವುದು ವರಿಷ್ಠರ ಉದ್ದೇಶವಾಗಿದೆ. ಇತ್ತೀಚಿಗೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಬದಲಾವಣೆ ಮಾಡಲಾಗಿದೆ. ಉಳಿದ ಪದಾಧಿಕಾರಿಗಳ ವಿಚಾರದಲ್ಲಿ ಸಧ್ಯಕ್ಕೆ ದೊಡ್ಡ ಬದಲಾವಣೆಗೆ ಕೈ ಹಾಕಿದರೆ, ಚುನಾವಣೆ ಸಂದರ್ಭದಲ್ಲಿ ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ.
ಪಕ್ಷದಲ್ಲಿ ಕೋರ್ ಕಮಿಟಿ ಇದೆ. ಆದರೆ ಸಮಿತಿಯಲ್ಲಿ ಆಯ್ದ ಕೆಲವರಿಗೆ ಮಾತ್ರ ಅವಕಾಶ ಇದೆ. ಕೋರ್ ಕಮಿಟಿಯಲ್ಲಿ ಇರುವವರನ್ನು ಬಿಟ್ಟು ಉಳಿದ ಕೆಲವರು ಚುನಾವಣೆಗಳನ್ನು ನಡೆಸುವುದರಲ್ಲಿ ಸಿದ್ಧ ಹಸ್ತರಿದ್ದಾರೆ. ಅಂತಹವರನ್ನು ಸೇರಿಸಿಕೊಂಡು ಚುನಾವಣಾ ನಿರ್ವಹಣಾ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಸಮಿತಿ ರಚನೆ ಮಾಡಲಾಗಿತ್ತು. ಚುನಾವಣಾ ನಿರ್ವಹಣಾ ಸಮಿತಿಯನ್ನು ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ರಚನೆ ಮಾಡಲಾಗುತ್ತದೆ. ಕೋರ್ ಕಮಿಟಿಯ ಕೆಲ ಸದಸ್ಯರು, ಹಿರಿಯ ಮುಖಂಡರು, ಕೆಲ ಸಚಿವರು, ಶಾಸಕರು ಸದಸ್ಯರಾಗಿರುತ್ತಾರೆ.
ಕೆಲಸವೇನು?:ಚುನಾವಣೆಗೆ ಸಂಬಂಧಿಸಿದ ಪೂರ್ತಿ ಜವಾಬ್ದಾರಿಯನ್ನು ಈ ಸಮಿತಿ ನಿರ್ವಹಣೆ ಮಾಡಲಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೋರ್ ಕಮಿಟಿಗೆ ಶಿಫಾರಸು ಮಾಡುತ್ತದೆ. ರಾಷ್ಟ್ರೀಯ ಮುಖಂಡರ ಪ್ರಚಾರ ಸೇರಿ ಚುನಾವಣಾ ಕಣದಲ್ಲಿ ಏನೇನು ತಂತ್ರಗಳನ್ನು ಅನುಸರಿಸಬೇಕು ಎಂಬುದರ ಮಾಹಿತಿಯನ್ನು ನೀಡಲಿದೆ. ಈಗಾಗಲೆ ಸಾಮಾಜಿಕ ಜಾಲತಾಣ, ವಾರ್ ರೂಂ, ಅಂಕಿ-ಅಂಶ ವಿಶ್ಲೇಷಣೆ ಸೇರಿ ಒಂಬತ್ತು ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳ ಸಮನ್ವಯದಲ್ಲಿ ಚುನಾವಣಾ ಸಮಿತಿ ಕಾರ್ಯ ನಿರ್ವಹಿಸಲಿದೆ. ಕ್ಷೇತ್ರವಾರು ಕಣ್ಣಿಟ್ಟು ಸಮಿತಿ ತನ್ನ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಮೂಲಗಳು ಹೇಳಿವೆ.
ಸಂಘಟನಾ ಕಾರ್ಯದರ್ಶಿ:ಸಂಘದ ಕರ್ತವ್ಯದಿಂದ ರಾಜಕೀಯ ಕ್ಷೇತ್ರಕ್ಕೆ ನೇಮಕವಾಗಿರುವ ಜಿ.ವಿ.ರಾಜೇಶ್ ಅವರನ್ನು ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ. ಅರುಣ್​ಕುಮಾರ್ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ರಾಜೇಶ್ ನೇಮಕ ಮಾಡಲಾಗಿತ್ತು.
ಕೆ.ಆರ್.ಪೇಟೆ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವರ್ಚಸ್ಸನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಕೆ.ಆರ್.ಪೇಟೆ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಸಚಿವರು ಬಿಎಸ್​ವೈ ಅವರನ್ನು ಕೊಂಡಾಡಿದರು. ಭಾಷಣದಲ್ಲಿ ಬಿಎಸ್​ವೈ ಅವರನ್ನು ಹಾಡಿ ಹೊಗಳಿಸಿದ ಸಿಎಂ, ಕೆ.ಆರ್.ಪೇಟೆ ಮಾದರಿ ತಾಲೂಕು ಮಾಡುವಂತೆ ಯಡಿಯೂರಪ್ಪ ಸಂದೇಶ ಇದೆ. ಬಿಎಸ್​ವೈ ಇಡೀ ರಾಜ್ಯದ ಆಸ್ತಿ. ಆದರೆ, ಅವರ ಹೃದಯ ಕೆ.ಆರ್.ಪೇಟೆಯ ಬೂಕನಕೆರೆಯಲ್ಲಿದೆ. ಇಂತಹ ಆಸ್ತಿಯನ್ನು ಉಳಿಸಿಕೊಂಡು ರಾಜ್ಯದ ಮತ್ತಷ್ಟು ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಈ ಮಹದಾಸೆ ಮುಖ್ಯಮಂತ್ರಿಯಾಗಿ ನನ್ನಲಿದೆ. ಇದು ನಮ್ಮ ನಾಯಕರ ಜನ್ಮ ಭೂಮಿ. ಇಲ್ಲಿ ಯಾವುದಕ್ಕೂ ಕೊರತೆಯಾಗಬಾರದು. ಸ್ವಾರ್ಥಕ್ಕಾಗಿ ಅಧಿಕಾರ ಉಳಿಸಿಕೊಳ್ಳಲು ರಾಜಕಾರಣ ಮಾಡಿದವರನ್ನು ನಾವು ನೋಡಿದ್ದೇವೆ. ಇದು ಜನಪರ ಆಡಳಿತ, ಜನಪರ ರಾಜಕಾರಣ. ಬಿಎಸ್​ವೈ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ ಎಂದರು.
ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬ ಸಿದ್ದರಾಮೋತ್ಸವ ಬಗ್ಗೆ ಅತಿಯಾದ ಟೀಕೆ, ವ್ಯಂಗ್ಯ, ಲೇವಡಿ ಮಾಡದಿರುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಮುಖಂಡರಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾಜದ ಕೆಲ ವರ್ಗಗಳಲ್ಲಿ ಈಗ ಭಾವನಾತ್ಮಕ ವಿಚಾರವಾಗಿ ಪರಿವರ್ತನೆಯಾಗಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡದಿದ್ದರೆ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ. ಆದ್ದರಿಂದ ಟೀಕೆಗಳು, ಅಭಿಪ್ರಾಯಗಳು ಯಾವುದೇ ಸಮುದಾಯದ ಭಾವನೆಗಳನ್ನು ಕೆರಳಿಸದಂತೆ ಇರಲಿ ಎಂದು ಮುಖಂಡರಿಗೆ ಮಾಹಿತಿ ರವಾನಿಸಿದ್ದಾರೆಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ರಾಜ್ಯದಲ್ಲಿ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸಮುದಾಯದ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಇಂತಹ ಸಂದರ್ಭದಲ್ಲಿ ಸಮುದಾಯವನ್ನು ನಮ್ಮ ಪಕ್ಷದತ್ತ ಸ್ವಲ್ಪ ಮಟ್ಟಿಗಾದರೂ ಸೆಳೆಯಬೇಕಾಗಿದೆ. ಅತಿ ರಂಜಿತ ಟೀಕೆಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದ್ದರಿಂದ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಹೇಳಿದ್ದಾರೆನ್ನಲಾಗಿದೆ. ಈ ರೀತಿ ಹೇಳಿದ ಮಾತ್ರಕ್ಕೆ ಟೀಕೆ-ಟಿಪ್ಪಣಿ ಮಾಡಬಾರದೆಂದು ಇಲ್ಲ, ಮಾತುಗಳು ಸಮುದಾಯವನ್ನು ಗುರಿಯಾಗಿಸುವಂತೆ ಇರಬಾರದು. ವ್ಯಕ್ತಿಯ ಬಗೆಗೂ ಅತಿಯಾದ ಲೇವಡಿ ಮಾಡಬಾರದು ಎಂದು ತಿಳಿ ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು:ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕಾಲಕಾಲಕ್ಕೆ ಪಕ್ಷ ತೀರ್ಮಾನ ಗಳನ್ನು ಮಾಡುತ್ತ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಸೂಕ್ತ ಸಮಯದಲ್ಲಿ ನಿರ್ಣಯ ಮಾಡಲಿದೆ ಎಂದು ಸಚಿವ ವಿ.ಸುನೀಲ್​ಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಪಾರ್ಟಿ ಒಂದು ಜಾತಿ ಸಮುದಾಯ ಅಥವಾ ವ್ಯಕ್ತಿ, ಕುಟುಂಬಕ್ಕೆ ಸೀಮಿತವಾದ ಪಾರ್ಟಿ ಅಲ್ಲ ಎಂದರು.
ಕಾಂಗ್ರೆಸ್ ವಿರೋಧವೇಕೆ?:ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ನಡೆಸುವುದಕ್ಕೆ ವಿರೋಧ ಮಾಡುತ್ತ ಇರೋರೆಲ್ಲರೂ ಈ ಹಿಂದೆ ಒಂದಲ್ಲ ಒಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ. ಭಾರತ ಹಾಗೂ ಜನರ ಭಾವನೆ ಮುರಿದಿದ್ದ ಕಾಂಗ್ರೆಸ್ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಹೊರಟಿದೆ ಎಂದು ಭಾರತ್ ಜೋಡೊ ಯಾತ್ರೆಗೆ ವ್ಯಂಗ್ಯವಾಡಿದರು.
ನಾವು ಸಿದ್ಧಾಂತದ ಪಕ್ಷದವರು. ನಮಗೆ ಜಾತಿಯ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು. ಒಕ್ಕಲಿಗರು ಸಿಎಂ ಆಗ್ತಾರೆ ಎನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾರ್ವಿುಕವಾಗಿ ಉತ್ತರಿಸಿದ ಅವರು, ಪಕ್ಷದೊಳಗೆ ಜಾತಿ ರಾಜಕೀಯಕ್ಕೆ ಬೆಂಬಲ ಇಲ್ಲ. ನಮ್ಮಲ್ಲೂ ಒಕ್ಕಲಿಗ ನಾಯಕರು ಇದ್ದಾರೆ. ಆದರೆ ಇವರ ರೀತಿಯಲ್ಲಿ ಕಿತ್ತಾಡಿಕೊಂಡಿಲ್ಲ ಎಂದರು. ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ಕಾನೂನಿಗೆ ಗೌರವ ಕೊಡಲ್ಲ ಎಂದರೆ ಹೇಗೆ? ಕಾನೂನಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ತಾನೇ? ಎಂದು ಕೇಳಿದರು.
ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

ಪ್ರೇಯಸಿಯ ರುಂಡ ಕಡಿದ ಪ್ರೇಮಿ; ಕೊಲೆಗಾರನನ್ನು ತನಗೊಪ್ಪಿಸಿ ಎಂದು ಸ್ಟೇಷನ್​ ಮುಂದೆ ರೊಚ್ಚಿಗೆದ್ದ ಅಣ್ಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
