ಬೆಂಗಳೂರು:ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸುವ ಮೂಲಕ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗಕ್ಕೆ ಮುಂದಾದ ಬಿಜೆಪಿ ಸರಿಯಾಗಿ ಕೈ ಸುಟ್ಟಿಕೊಂಡಿದ್ದು ಈ ಪೈಕಿ 12 ಸಚಿವರು, 56 ಹೊಸಮುಖ, 62 ಹಾಲಿ ಶಾಸಕರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾನೆ.
ಟಿಕೆಟ್​ ಹಂಚಿಕೆ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದ ಬಿಜೆಪಿ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದ್ದು ಈ ಕುರಿತು ರಾಜ್ಯ ನಾಯಕರು ಪರಮಾರ್ಶೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಶಾಸಕ ಹಾಗೂ ಸಚಿವರೆಂದು ಗುರುತಿಸಿಕೊಂಡಿದ್ದವರಿಗೂ ಸಹ ಜನ ಸೋಲಿನ ರುಚಿ ತೋರಿಸಿದ್ದು ಈ ಪೈಕಿ ಗೆದ್ದ ಹಾಗೂ ಸೋತವರ ಮಾಹಿತಿ ಹೀಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್​ ಬೊಮ್ಮಾಯಿ ರಾಜೀನಾಮೆ
ಮಾಜಿ ಸಿಎಂ ಬಿಎಸ್​ವೈ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರೆಂದು ಗುರುತಿಸಿಕೊಂಡಿದವರಿಗೆ ಜನತೆ ಸೋಲಿಸುವ ಮೂಲಕ ಶಾಕ್​ ನೀಡಿದ್ದಾರೆ.
ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್​, ಶಂಕರ್​ ಪಾಟೀಲ್​ ಮುನೇನಕೊಪ್ಪ, ಹಾಲಪ್ಪ ಆಚಾರ್​​, ಶ್ರೀರಾಮುಲು, ಡಾ.ಕೆ. ಸುಧಾಕರ್​, ವಿ.ಸೋಮಣ್ಣ(ಸ್ಪರ್ಧಿಸಿದ ಎರಡು ಕಡೆ ಸೋಲು), ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್​, ಎಂ.ಟಿ.ಬಿ ನಾಗರಾಜ್​ ಸೋತ ಪ್ರಮುಖ ಸಚಿವರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯೂ ಈ ಭಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 75 ಹೊಸ ಮುಖಗಳಿಗೆ ಮಣೆ ಹಾಕಿದ್ದು ಈ ಪೈಕಿ 19 ಮಂದಿ ಗೆದ್ದು ಬೀಗಿದ್ದು 57 ಮಂದಿಗೆ ಜನಮನ್ನಣೆ ದೊರೆತ್ತಿಲ್ಲ.
ಈ ಪೈಕಿ ಬಿ.ವೈ. ವಿಜಯೇಂದ್ರ, ಮಂಜುಳಾ ಲಿಂಬಾವಳಿ, ಮಹೇಶ್​ ಟೆಂಗಿನಕಾಯಿ, ನಿಖಿಲ್​ ಕತ್ತಿ, ವಿಠಲ್​ ಹಲಗೇಕರ್​, ಗುರುರಾಜ್​ ಗಂಟಿಹೊಳೆ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಯಶ್​ಪಾಲ್​ ಸುವರ್ಣ, ಭಾಗೀರಥಿ ಮುರುಳ್ಯ, ಹುಲ್ಲಳ್ಳಿ ಸುರೇಶ್​, ಸಿಮೆಂಟ್​ ಮಂಜು, ಟಿ.ಎ. ಶ್ರೀವತ್ಸ, ಧೀರಜ್​ ಮುನಿರಾಜು, ಜಗದೀಶ್​ ಗುಡಗಂಟಿ, ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಚಂದ್ರು ಲಮಾಣಿ ಹಾಗೂ ಚೆನ್ನಬಸಪ್ಪ ಗೆದ್ದು ಬೀಗಿದ ಹೊಸ ಮುಖಗಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
