ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ ವರಿಷ್ಠರು, ಅಖಾಡಕ್ಕೆ ಅಣಿಯಾಗಲೆಂದು ಪಕ್ಷದ ರಾಜ್ಯ ಪ್ರಚಾರ ಹಾಗೂ ನಿರ್ವಹಣಾ ಸಮಿತಿಗಳನ್ನು ರಚಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಪಕ್ಷದ ಮಾಸ್ಟರ್ ಮೈಂಡ್, ಕೇಂದ್ರ ಗೃಹ ಅಮಿತ್ ಷಾ ಹೇಳಿದಂತೆಯೇ ಕಾರ್ಯರೂಪಕ್ಕೆ ಬಂದಿದೆ.
ಗಮನಾರ್ಹ ವಿಷಯವೆಂದರೆ ಪ್ರಚಾರ ಸಮಿತಿಗೆ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಷಾ ಹೇಳಿದ್ದೇ ಜಾರಿಯಾಗುತ್ತದೆ ಎಂಬುದನ್ನು ಪ್ರಕಟಿತ ಪಟ್ಟಿ ಸಾಬೀತುಪಡಿಸುತ್ತದೆ.
ಇದನ್ನೂ ಓದಿ:ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜುನಾಥ್ ಆಗ್ರಹ
ಪ್ರಚಾರ ಸಮಿತಿಗೆ ಸಿಎಂ ಬೊಮ್ಮಾಯಿ‌ ಅಧ್ಯಕ್ಷರಾಗಿದ್ದು, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಸಚಿವರು, ಸಂಸದ ಹಾಗೂ ಶಾಸಕರನ್ನು ಒಳಗೊಂಡ 25 ಸದಸ್ಯ ಬಲದ ಪ್ರಚಾರ ಸಮಿತಿ ರಚನೆಯಾಗಿದೆ.
ಪಕ್ಷದ ನಡೆಯು ಕುತೂಹಲಕಾರಿ ತಿರುವು ನೀಡಿರುವುದೇ ನಿರ್ವಹಣಾ ಸಮಿತಿ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸಮಿತಿಗೆ ಸಂಚಾಲಕರಾಗಿರುವುದು ಕುತೂಹಲಕ್ಕೆ ಕಾರಣ.
ಕೇಂದ್ರದ ಮತ್ತೊಬ್ಬ ಸಚಿವ ಭಗವಂತ ಖೂಬಾ, ರಾಜ್ಯದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇನ್ನಿತರ ಪದಾಧಿಕಾರಿಗಳು ಸೇರಿ 14 ಸದಸ್ಯ ಬಲ ಹೊಂದಿದೆ. ಪಕ್ಷದ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಎರಡೂ ಸಮಿತಿಗಳಿಗೆ ಸದಸ್ಯರಾಗಿರುವುದು ಗಮನಾರ್ಹ.
ತನಿಖಾ ತಂಡದ ಮುಂದೆ ಕೊನೆಗೂ ಕಳಚಿಬಿತ್ತು ಗ್ಲಾಮರಸ್​ ಕೃಷಿ ಅಧಿಕಾರಿಯ ಮುಖವಾಡ!

ಲೈಸೆನ್ಸ್​ ಇಲ್ಲದೇ ಕೋರ್ಟ್​ನಲ್ಲಿ ವಾದ ಮಾಡಿದ್ದಕ್ಕೆ ರೋಬೋಟ್ ಮೇಲೆ ಕೇಸ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 15 =
Remember me
