ಬೆಂಗಳೂರು:ಚಂದ್ರಯಾನ 3 ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲು ಬಿಜೆಪಿ ನಿರ್ಧರಿಸಿದೆ.ನಗರಕ್ಕೆ ಬೆಳಿಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸುಮಾರು 10 ಸಾವಿರ ಜನರು ಸೇರಲಿದ್ದಾರೆ.ಇನ್ನು ಪೀಣ್ಯದ ಇಸ್ರೋ ಕೇಂದ್ರದ ಬಳಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ರಸ್ತೆ ಬದಿಯಲ್ಲಿ ಮೋದಿ ಅವರಿಗೆ ಸ್ವಾಗತ ಕೋರಲಿದ್ದಾರೆ.ಚಂದ್ರಯಾನ ಇಸ್ರೋ ಸಾಧನೆಗೆ ಇಡೀ ದೇಶವೇ ಸಂಭ್ರಮಪಡಬೇಕಿರುವುದರಿಂದ ಪ್ರದಾನಿ ಕಾರ್ಯಕ್ರಮವನ್ನು ಬಿಜೆಪಿಗೆ ಮಾತ್ರ ಸೀಮಿತ ಮಾಡಬಾರದು ಎಂದು ನಿರ್ಧರಿಸಲಾಗಿದೆ.ಎಚ್‌ಎಲ್ ಮತ್ತು ಇಸ್ರೋ ಕೇಂದ್ರದ ಬಳಿ ಭಾಗವಹಿಸುವ ಎಲ್ಲರೂ ಕೈಯಲ್ಲಿ ದೇಶದ ತ್ರಿವರ್ಣ ಬಾವುಟ ಹಿಡಿದು ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.ಬಿಜೆಪಿಯ ನಾಯಕರು ಎಚ್‌ಎಲ್ ಮತ್ತು ಇಸ್ರೋ ಕೇಂದ್ರದ ಬಳಿ ಭೇಟಿ ನೀಡಿ ಪರಿಶೀಲಿಸಿದರು. ಯಾರ‌್ಯಾರು ಯಾವ ಜವಬ್ದಾರಿಯನ್ನು ನಿಭಾಯಿಸಬೇಕು ಎಂಬ ಸೂಚನೆಯನ್ನು ನೀಡಲಾಯಿತು. ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಕಾರ್ಯಕ್ರಮ ನಿಭಾಯಿಸಲು ತೀರ್ಮಾನಿಸಲಾಗಿದೆ.
ರ‌್ಯಾಲಿ ಬದಲಿಗೆ ಸಂಭ್ರಮಸಂಭ್ರಮಪಡುವ ಹೊತ್ತಿನಲ್ಲಿ ರೋಡ್ ಶೋ ಅಥವಾ ರ‌್ಯಾಲಿ ಮಾಡದೆ ಇರಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿಗಳ ರೋಡ್ ಶೋ ಕಾರ್ಯಕ್ರಮ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಪ್ರಧಾನಿಯನ್ನು ಸ್ವಾಗತ ಮಾಡುವ ಮತ್ತು ಚಂದ್ರಯಾನ 3 ಸಂಭ್ರಮಿಸಲು ತ್ರಿವರ್ಣದ್ವಜ ಬಾವುಟ ಹಿಡಿದು ಬರಲು ನಿರ್ಣಯಿಸಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
