ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದಕ್ಕಿಂತಲೂ ದೆಹಲಿ ಹಿರಿತಲೆಗಳ ಪ್ರಶಂಸೆಗೆ ಪಾತ್ರವಾಗಿರುವುದು ರಾಜ್ಯ ಬಿಜೆಪಿ ನಾಯಕರನ್ನು ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಜತೆಗೆ ರಾಜ್ಯದ ಕಮಲಪಡೆಗೆ ಹೊಸ ಹುರುಪು ತುಂಬಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಆದಿಯಾಗಿ ಬಿಜೆಪಿ ರಾಷ್ಟ್ರ ನಾಯಕರು ಮೆಚ್ಚುಗೆ ಸುರಿಮಳೆಗರೆದದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ನಾಯಕರ ಜತೆಗೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಸುವಂತೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಎಸ್​ವೈಗೆ ವಿಶೇಷ ಅಭಿನಂದನೆ ಎಂದಿರುವುದು, ಆಪ್ತರಲ್ಲಿ ಒಬ್ಬರಾದ ಲೆಹರ್ ಸಿಂಗ್ ಜಯಭೇರಿ ಪಕ್ಷದ ಗಮನಸೆಳೆದಿದೆ. ಕಾಂಗ್ರೆಸ್-ಜೆಡಿಎಸ್ ಕಿತ್ತಾಟ ಏನೇ ಇರಲಿ. ಈ ಚುನಾವಣೆ ಫಲಿತಾಂಶ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ಪಕ್ಷದ ನಾಯಕರು ವ್ಯಾಖ್ಯಾನಿಸಿದ್ದಾರೆ.
ಮುಂದಿನ ತಯಾರಿ:ವಿಧಾನ ಪರಿಷತ್​ನ ನಾಲ್ಕು ಕ್ಷೇತ್ರಗಳ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡವರ ಪೈಕಿ ಬಹುತೇಕರು ಭಾನುವಾರದಿಂದ ಮುಕ್ತರಾಗಲಿದ್ದು, ಬೇರೆ ಕೆಲಸಗಳತ್ತ ಗಮನಹರಿಸಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಆಗಸ್ಟ್ ಒಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕಿದ್ದು, ಅಗತ್ಯ ತಯಾರಿ ನಡೆದಿದೆ. ಮುಖ್ಯಮಂತ್ರಿ ಸಮಕ್ಷಮ ಬೆಂಗಳೂರಿನ ಸಚಿವರು-ಶಾಸಕರು ಮೊದಲ ಸುತ್ತಿನ ಸಭೆ ನಡೆಸಿದ್ದು, ಚುನಾವಣೆ ಮುಗಿಯುವ ತನಕ ಪ್ರತಿ ದಿನಗಳಿಗೊಮ್ಮೆ ಈ ಸಭೆಗಳು ನಡೆಯಲಿವೆ. ವಾರ್ಡ್​ವುಟ್ಟದಲ್ಲಿ ವಿವಿಧ ಸಂಘಟನಾ ಚಟುವಟಿಕೆಗಳು ಶುರುವಾಗಿವೆ. ಅಭ್ಯರ್ಥಿಗಳ ಆಯ್ಕೆ ಹಿಮ್ಮಾಹಿತಿ ಪಡೆಯುವ ತಂಡಗಳು ರಚನೆಯಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಿಬಿಎಂಪಿಯೊಂದಿಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ನಡೆದಿದೆ. ಒಟ್ಟಾರೆ ರಾಜ್ಯಸಭೆ ಚುನಾವಣೆ ಗೆಲುವಿನ ಹುರುಪು ಬಳಕೆಗೆ ವೇದಿಕೆ ಸನ್ನದ್ಧವಾಗಿದೆ.
ಬೂತ್​ಗಳ ಸಶಕ್ತೀಕರಣ:ಬೂತ್​ವುಟ್ಟದ ಕಮಿಟಿಗಳು ಸಂಘಟನಾ ಬಲದ ಬೇರುಗಳಾಗಿವೆ. ಗುರಿ ಸಾಧಿಸಬೇಕೆಂಬ ಏಕೈಕ ಕಾರಣಕ್ಕೆ ಈ ಕಮಿಟಿಗಳು ರಚನೆಯಾಗಿದ್ದಲ್ಲ. ಈ ಬೂತ್​ಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಪಕ್ಷಕ್ಕೆ ಕಷ್ಟವೆನಿಸುವ ಬೂತ್​ಗಳನ್ನು ಸಿ ವರ್ಗಕ್ಕೆ ಸೇರಿಸಿ ದುರ್ಬಲವೆಂದು ಗುರುತಿಸಲಾಗಿದೆ. ಸಿ ವರ್ಗದ ಬೂತ್​ಗಳ ಸಶಕ್ತೀಕರಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರಭಾವಿ ನಾಯಕರು ಭೇಟಿ ಕೊಟ್ಟು ಆಯಾ ಬೂತ್​ನ ಜನರೊಂದಿಗೆ ವಿಚಾರ-ವಿನಿಮಯ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಂತರದ ಹಂತದಲ್ಲಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಆಯಾ ಸಮುದಾಯದ ಮುಖಂಡರು ಭೇಟಿ ನೀಡಿ ಮನವೊಲಿಸುವ ಕಾರ್ಯತಂತ್ರ ಹೆಣೆಯಲಾಗಿದೆ. ಬೂತ್​ಗಳ ಸಶಕ್ತೀಕರಣ ಚಟುವಟಿಕೆಗಳಿಗೆ ಮಾಜಿ ಸಿಎಂ ಬಿಎಸ್​ವೈ ಹಿರಿಯ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸಂಚಾಲಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವಲೋಕನ:ಬೂತ್, ಮಂಡಲ, ಜಿಲ್ಲಾಮಟ್ಟದಲ್ಲಿ ರಚಿತ ವಿವಿಧ ಸಮಿತಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಅವುಗಳ ಅನುಷ್ಠಾನದ ಬಗ್ಗೆ ಜಿಲ್ಲಾ ನಂತರ ರಾಜ್ಯ ಮಟ್ಟದಲ್ಲಿ ಅವಲೋಕನವಾಗಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಲೆಂದು ವಿವಿಧ ಕಾರ್ಯಕ್ರಮಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಈ ಕಾರ್ಯಕ್ರಮಗಳ ವರದಿ ತರಿಸಿಕೊಳ್ಳಲಾಗುತ್ತದೆ. ರಾಜ್ಯಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯ, ಕ್ರಮಗಳು ಪರಾಮರ್ಶೆಯಾಗುತ್ತವೆ. ಮುಂದಿನ ರಾಜ್ಯಕಾರಿಣಿ ಸಭೆ ಜುಲೈನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಿದ್ದು, ಅದಕ್ಕೂ ಪೂರ್ವ ಕಾರ್ಯಯೋಜನೆ ಸಿದ್ಧಗೊಳಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.
ಮೈಸೂರು:ರಾಜಕೀಯ ಜಂಜಾಟವನ್ನು ಮರೆತು ಶನಿವಾರ ನಗರದ ಕಲಾಮಂದಿರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ವೀಕ್ಷಿಸಿದರು. ನಾಟಕ ವೀಕ್ಷಿಸಿ ಹೊರ ಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾಟಕ ವೀಕ್ಷಿಸುವಂತೆ ವಕೀಲರ ಸಂಘದವರು ಆಹ್ವಾನ ನೀಡಿದ್ದರು. ಹಾಗಾಗಿ ಸ್ವಲ್ಪ ಹೊತ್ತು ಕುರುಕ್ಷೇತ್ರ ನಾಟಕ ವೀಕ್ಷಿಸಿದೆ. ನಾನು ಕಾನೂನು ವಿದ್ಯಾರ್ಥಿಯಾಗಿದ್ದ ಸಂದರ್ಭ ಸಾಮಾಜಿಕ ನಾಟಕ ಮಾಡಿದ್ದೆ ಎಂದು ನೆನಪಿಸಿಕೊಂಡರು
ಬಿಜೆಪಿ ಗೆಲ್ಲಲು ಜೆಡಿಎಸ್ ಕಾರಣ:ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಜೆಡಿಎಸ್ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು. ಬಿಜೆಪಿ ಗೆಲುವಿಗೆ ನಾನು ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಆಪಾದಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಲು ಅವರು ಕಾರಣ ಅಲ್ವಾ? ಮೊದಲು ನಾವು ಅಭ್ಯರ್ಥಿ ಹಾಕಿದ್ದು, ನಂತರ ಅವರು (ಜೆಡಿಎಸ್) ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಸಭೆಗೆ ಎಚ್.ಡಿ.ದೇವೇಗೌಡ ಸ್ಪರ್ಧಿಸಿದಾಗ ನಾವು ಅಭ್ಯರ್ಥಿ ಹಾಕಿದ್ವಾ? ಇಲ್ಲ ತಾನೇ? ಅದೇ ರೀತಿ ಅವರು ಸಹ ಈ ಬಾರಿ ಅಭ್ಯರ್ಥಿ ಹಾಕಬಾರದಿತ್ತು. ಜೆಡಿಎಸ್​ನವರು ಮುಖ್ಯಮಂತ್ರಿ ಆಗೋಕೆ ನಾವು ಬೆಂಬಲ ನೀಡಲಿಲ್ಲವೇ? ಬಿಜೆಪಿ ಗೆಲ್ಲಬಾರದಿತ್ತು ಎಂಬುದು ಅವರ ನಿಲುವಾಗಿದ್ದರೆ ಅವರು ಈ ಬಾರಿ ಅಭ್ಯರ್ಥಿಯನ್ನು ಹಾಕಬಾರದಿತ್ತು. ಹಾಗಾಗಿ ಬಿಜೆಪಿ ಗೆಲುವಿಗೆ ಜೆಡಿಎಸ್ ನೇರ ಕಾರಣ ಎಂದರು.
ಬೆಂಗಳೂರು:ರಾಜ್ಯಸಭಾ ಚುನಾವಣೆಯಲ್ಲಿ ಬೇರಾವುದೇ ಪಕ್ಷದಲ್ಲಿ ಅಡ್ಡ ಮತದಾನವಾಗಿಲ್ಲ. ಆದರೆ, ಜೆಡಿಎಸ್​ನ ಇಬ್ಬರು ಶಾಸಕರು ಅಡ್ಡಮತದಾನ ಮಾಡಿದ್ದು ವರಿಷ್ಠರನ್ನು ತಲ್ಲಣಗೊಳಿಸಿದೆ. 2016ರ ಕಹಿ ಅನುಭವ ಮತ್ತೊಮ್ಮೆ ಮರುಕಳಿಸಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೆಂಡಾಮಂಡಲರನ್ನಾಗಿಸಿದೆ. ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಅವರ ಕ್ಷೇತ್ರದಲ್ಲಿ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕಿ ಪಾಠ ಕಲಿಸಲೂ ಜೆಡಿಎಸ್ ಸಂಕಲ್ಪ ಮಾಡಿದೆ.
ಕಾಂಗ್ರೆಸ್ ವಿರುದ್ಧ ಸೆಡ್ಡು:ಇನ್ನೊಂದೆಡೆ ಕಾಂಗ್ರೆಸ್, ತನ್ನ ಅಭ್ಯರ್ಥಿ ಸೋಲಿನ ಬುತ್ತಿಯನ್ನು ಜೆಡಿಎಸ್ ತಲೆಗೆ ಕಟ್ಟಲು ನೋಡುತ್ತಿದೆ. ಜಾತ್ಯತೀತ ಸಿದ್ಧಾಂತವನ್ನು ಮರೆತ ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಬೆಂಬಲಿಸಲಿಲ್ಲ ಎಂಬ ಅಪವಾದ ಹೊರಿಸಲು ಸನ್ನದ್ಧವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಹುಲೆಬ್ಬಿಸಿ ಪಕ್ಷದ ಶಕ್ತಿ ಕ್ಷೀಣಿಸುವಂತೆ ಮಾಡಲಾಗಿತ್ತು. ಈಗಲೂ ನಾವು ಮೊದಲು ಅಭ್ಯರ್ಥಿ ಕಣಕ್ಕಿಳಿಸಿದ್ದೆವು. ನಮ್ಮ ಜತೆ ರ್ಚಚಿಸದೆ ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿತು. ಅಲ್ಪಸಂಖ್ಯಾತರ ನಿಜವಾದ ವಿರೋಧ ಜೆಡಿಎಸ್ ಎಂದು ಈಗಾಗಲೆ ಕಾಂಗ್ರೆಸ್ ನಾಯಕರು ಆರೋಪಗಳ ಸುರಿಮಳೆಗರೆಯುತ್ತಿದ್ದಾರೆ.
ಸೋಲಿನ ಆತ್ಮಾವಲೋಕನ ಶೀಘ್ರ:ಜೆಡಿಎಸ್ ರಾಜ್ಯಸಭೆ ಚುನಾವಣೆಯ ಸೋಲು ಮತ್ತು ಇಬ್ಬರು ಶಾಸಕರ ಅಡ್ಡಮತದಾನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದೆ. ಜೆಡಿಎಸ್ ಅಭ್ಯರ್ಥಿ ಸೋಲಿನ ಸೂತ್ರಧಾರ ಸಿದ್ದರಾಮಯ್ಯರನ್ನು ಹಣಿಯಲು ಮುಂಬರುವ ಚುನಾವಣೆಯಲ್ಲಿ ತಂತ್ರ ರೂಪಿಸಲು ಸಜ್ಜಾಗಿದೆ.
ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

ಅಡ್ಡ ಮತದಾನ ಮಾಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
