ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನಾಮಬಲ, ವರ್ಚಸ್ಸು ಬಳಸಿಕೊಂಡು ಹಳೇ ಮೈಸೂರು ಭಾಗವನ್ನು ಭದ್ರಪಡಿಸಿಕೊಳ್ಳಲು ಆಡಳಿತ ಬಿಜೆಪಿ ಉತ್ಸುಕವಾಗಿದೆ. ಬಹುದಿನಗಳ ನಂತರ ಮೋದಿ ರಾಜ್ಯ ಪ್ರವಾಸ ನಿಗದಿಯಾಗಿದ್ದು, ಜೂ.20, 21ರಂದು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡುತ್ತಿರುವ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡಿರುವ ಯೋಜನೆಗಳ ಲೋಕಾರ್ಪಣೆ ಮಾಡಲಿದ್ದಾರೆ. ಸಂಭಾವ್ಯ ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯಿತಿ ಇದಾದ ನಂತರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳ ವರ್ಷದಲ್ಲಿ ಮೋದಿ ಆಗಮನ ಕಮಲಪಡೆಯಲ್ಲಿ ಹೊಸ ಹುರುಪು ತುಂಬಿದೆ. ಬೆಂಗಳೂರು ಮಹಾನಗರವನ್ನು ಕೇಸರಿಮಯಗೊಳಿಸಿ, ಅದ್ಧೂರಿಯಾಗಿ ಸಾರ್ವಜನಿಕ ಸಮಾರಂಭ ಸಂಘಟಿಸುವ ಮೂಲಕ ಸ್ಪಷ್ಟ ಸಂದೇಶ ರವಾನಿಸಲು ಸನ್ನದ್ಧವಾಗಿದೆ.
ವರದಿ ಒಪ್ಪಿಸಿದ ಸಚಿವರು:ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಪೂರ್ವಭಾವಿ ಸಿದ್ಧತೆ ಕುರಿತು ಸಚಿವರು ವರದಿ ಒಪ್ಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್, ಇನ್ನಿತರ ಸಚಿವರು, ಪದಾಧಿಕಾರಿಗಳು ರೂಪರೇಷೆ ಬಗ್ಗೆ ರ್ಚಚಿಸಿ ಮಾಹಿತಿ ಹಂಚಿಕೊಂಡರು.
18ಕ್ಕೆ ಸಿದ್ಧತೆ ಪೂರ್ಣ:ಮೋದಿಯವರ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಜೂ.18ರೊಳಗೆ ಎಲ್ಲ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಸಿಎಂ, ಪಕ್ಷದ ರಾಜ್ಯ ನಾಯಕರು ಸಲಹೆ ನೀಡಿದರು. ಸಚಿವರ ಜತೆ ಶಾಸಕರಿಗೂ ಜವಾಬ್ದಾರಿ ಹಂಚಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆಯಿಂದ ಹಿಡಿದು ಪ್ರತಿಹಂತದ ಪ್ರಚಾರ ವ್ಯವಸ್ಥೆಗೆ ಮೂರು ಹಂತದ ಸಮಿತಿಗಳನ್ನು ರಚಿಸಿ ನಿರ್ವಹಿಸಲು ಸೂಚಿಸಲಾಯಿತು. ಬೆಂಗಳೂರಿನ ಎಲ್ಲ ವಾರ್ಡ್​ಗಳು, ರಸ್ತೆಗಳು, ವೃತ್ತಗಳಿಗೆ ಅಲಂಕಾರ, ಬಂಟಿಂಗ್ಸ್ ಸೇರಿ ಎಲ್ಲಿ ನೋಡಿದರಲ್ಲಿ ಕಮಲ ಚಿಹ್ನೆ, ಬಾವುಟ ರಾರಾಜಿಸಬೇಕು. ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ನಡೆಯುವ ಸ್ಥಳ, ವೇದಿಕೆ ಹೊರತುಪಪಡಿಸಿ ಉಳಿದೆಲ್ಲೆಡೆ ಕೇಸರಿಮಯಗೊಳಿಸಬೇಕು. ಮೋದಿ ಬೆಂಗಳೂರಿಗೆ ಬಂದಿಳಿದು ವಾಪಸ್ ಮೈಸೂರಿಗೆ ಹೋಗುವ ತನಕ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟು, ಹೆಚ್ಚಿನ ಜನರ ಜಮಾವಣೆ, ಶಿಸ್ತು ಹಾಗೂ ಉತ್ಸಾಹಭರಿತ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.
ಕೊಡುಗೆ ಫೋಕಸ್:ಬೆಂಗಳೂರಿಗೆ ಬಹುದೊಡ್ಡ ಕೊಡುಗೆ ನೀಡಲೆಂದು ಮೋದಿ ಬರುತ್ತಿದ್ದಾರೆ. ಈ ಅಂಶಗಳಿಗೆ ಹೆಚ್ಚಿನ ಫೋಕಸ್ ನೀಡಬೇಕು. 15,000 ಕೋಟಿ ರೂ. ವೆಚ್ಚದ ಬೆಂಗಳೂರು ಸಬ್​ಅರ್ಬನ್ ರೈಲ್ವೆ ಮಾರ್ಗ ನಿರ್ವಣಕ್ಕೆ ಅಡಿಗಲ್ಲು ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ಅನುದಾನದ ಬಗ್ಗೆ ವ್ಯಾಪಕ ಪ್ರಚಾರದ ವೇಳೆ ಬಳಸಿಕೊಂಡು ಜನರಿಗೆ ಸರಿಯಾದ ಮಾಹಿತಿ ನೀಡಲು ಪ್ರಮುಖರ ಸಭೆ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಬಹಳ ದಿನಗಳ ನಂತರ ರಾಜ್ಯಕ್ಕೆ ಬರುತ್ತಿದ್ದು, ಚುನಾವಣಾ ವರ್ಷವಿದು. ಸಮಾರಂಭಕ್ಕೆ ಸರ್ಕಾರ ವ್ಯವಸ್ಥೆ ಮಾಡಲಿದ್ದು, ದೊಡ್ಡ ಪ್ರಮಾಣದಲ್ಲಿ ಜನರನ್ನು ಕರೆತರುವುದು ಎಲ್ಲರ ಜವಾಬ್ದಾರಿಯಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಅಭಿಯಾನ ನಡೆಸಿದ್ರೂ ಸ್ಪಂದಿಸದ ಜನಪ್ರತಿನಿಧಿಗಳು; ಸ್ವಂತ ಖರ್ಚಲ್ಲೇ ಮೊಬೈಲ್​ ಟಾಯ್ಲೆಟ್ ಒದಗಿಸಿದ ಎಸ್​ಐ

ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 9 =
Remember me
