| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಈ ಬಾರಿಯೂ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ, ತನ್ನ ಮತಬ್ಯಾಂಕ್​ ವಿಸ್ತರಣೆ ಮಾಡಿಕೊಳ್ಳಲು ಆರು ಸೂತ್ರಗಳ ಸೂಕ್ಷ್ಮ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.ಬಿಜೆಪಿಗೆ ರಾಜ್ಯದಲ್ಲಿ ತನ್ನದೇ ಗಟ್ಟಿಯಾದ ಸರಿಸುಮಾರು ಶೇ.30 ರಷ್ಟು ಮತಬ್ಯಾಂಕ್​ ಇದೆ. ಸ್ವಂತ ಬಲದಿಂದ ಅಧಿಕಾರ ಹಿಡಿಯಲು ಇದನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಕಾಯೋರ್ನ್ಮುಖವಾಗಿದೆ. ಅವಕಾಶವಿರುವಲ್ಲೆಲ್ಲ ಮತಗಳನ್ನು ಸೆಳೆಯಬೇಕೆಂದು ವರಿಷ್ಠರು ರಾಜ್ಯ ಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದ್ದರಿಂದಲೇ ಬಿಜೆಪಿ ತನ್ನ ಕಾರ್ಯತಂತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಸೂಕ್ಷ$್ಮ ನೆಲೆಯಲ್ಲಿ ಮತಗಳ ಹುಡುಕಾಟ ನಡೆಸಿದೆ.
ಕ್ಷೇತ್ರಗಳ ವಿಂಗಡನೆ:ಬಿಜೆಪಿ ವರಿಷ್ಠರು ರಾಜ್ಯದ 224 ಕ್ಷೇತ್ರಗಳನ್ನು ಎ,ಬಿ,ಸಿ ಮತ್ತು ಡಿ ಎಂದು ನಾಲ್ಕು ಭಾಗ ಮಾಡಿದ್ದಾರೆ. ಅದರಲ್ಲಿ ಗೆಲುವು ಅತ್ಯಂತ ಕಷ್ಟವೆಂಬ ಡಿ ಗುಂಪಿನಲ್ಲಿ 75 ಕ್ಷೇತ್ರಗಳಿವೆ ಎಂಬ ಅಂದಾಜು ಮಾಡಲಾಗಿದೆ. ಈ ಕ್ಷೇತ್ರಗಳು ಹಳೆಯ ಮೈಸೂರು ಭಾಗ ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತಿತರ ಭಾಗದಲ್ಲಿಯೂ ಇವೆ. ಉಳಿದ 149 ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕು, ಆನಂತರ 75 ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಂಡರೆ ಮಾತ್ರ ಅಧಿಕಾರ ಸೂತ್ರ ಹಿಡಿಯಬಹುದು. ಆದ್ದರಿಂದಲೇ ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಮತಬ್ಯಾಂಕ್​ ಒಗ್ಗೂಡಿಸುವ ಸೂಕ್ಷ$್ಮ ಕಾರ್ಯತಂತ್ರವನ್ನು ಬಿಜೆಪಿ ರೂಪಿಸುತ್ತಿದೆ. ಒಂದೊಂದು ಮತವೂ ತಪ್ಪದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ಬಿಜೆಪಿ ತಳಮಟ್ಟದಲ್ಲಿ ಮಾಡುತ್ತಿದೆ. ಹಳ್ಳಿಗಳ ಕಡೆ ಇನ್ನೂ ಬಲವಾಗಿ ಬೇರು ಬಿಟ್ಟಿಲ್ಲ. ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಆದ್ಯತೆ ಹಳ್ಳಿಗಳಿಗೆ ನೀಡಲಾಗುತ್ತಿದೆ.
ಪಕ್ಷದ ನಾಯಕರು 150 ಸ್ಥಾನಗಳನ್ನು ಗೆಲ್ಲಬೇಕೆಂದು ಗುರಿ ಹೊಂದಿದ್ದಾರೆ. ಆ ರೀತಿಯ ಗುರಿ ಇದ್ದಲ್ಲಿ ಮ್ಯಾಜಿಕ್​ ಸಂಖ್ಯೆಯನ್ನು ದಾಟಬಹುದು ಎಂಬುದು ಉದ್ದೇಶವಾಗಿದೆ. ರಾಜ್ಯದ ಮುಖಂಡರಿಂದಲೇ ಕನಿಷ್ಠ 100 ಸೀಟು ಗೆಲ್ಲುವಂತಾಗಬೇಕು. ಉಳಿದ 20 ರಿಂದ 25 ಸೀಟುಗಳ ಗಡಿಯನ್ನು ಕೇಂದ್ರದ ವರಿಷ್ಠರು ಬಂದು ದಾಟಿಸಲಿದ್ದಾರೆ. ಪಕ್ಷದ ಮುಖಂಡರು ಯಾವುದೇ ಪ್ರಯೋಗಗಳಿಲ್ಲದೇ ಬೇರೆ ಬೇರೆ ಕಾರ್ಯತಂತ್ರ ಮಾಡುತ್ತಿದ್ದು, ಅದರಲ್ಲಿ ಮತಬ್ಯಾಂಕ್​ ವೃದ್ಧಿಯೂ ಒಂದಾಗಿದೆ.
ನಿರ್ವಹಣಾ ಸಮಿತಿ ರಚನೆ:ಚುನಾವಣೆಗೆ ಅತ್ಯಂತ ಪ್ರಮುಖವಾಗಿರುವ ಚುನಾವಣಾ ನಿರ್ವಹಣಾ ಸಮಿತಿಯನ್ನು ಒಂದು ವಾರದಲ್ಲಿ ಪ್ರಕಟಿಸುವ ನಿರೀೆ ಇದೆ. ಈ ಸಮಿತಿಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಉಪ ಸಮಿತಿಗಳಿರುತ್ತವೆ. ವರಿಷ್ಠರ ಹಿಡಿತದಲ್ಲಿ ಈ ಸಮಿತಿ ಸಂಪನ್ಮೂಲ ಸಂಗ್ರಹ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನೋಡಿಕೊಳ್ಳಲಿದೆ. ಪ್ರಚಾರ, ಮಾಧ್ಯಮ ನಿರ್ವಹಣೆ ಸಹ ಇದರ ಜವಾಬ್ದಾರಿಯಾಗಿರುತ್ತದೆ. ವಿಧಾನ ಪರಿಷತ್​ ಸದಸ್ಯರು, ಸಂಸದರು, ಪಕ್ಷದ ಪದಾಧಿಕಾರಿಗಳನ್ನು ಇದರಲ್ಲಿ ಸೇರಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಪ್ರಚಾರ ಸಮಿತಿಯ ಮೂಲಕ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.
ಪ್ರಯೋಗಗಳಿಲ್ಲ:ಗುಜರಾತ್​ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿ ಅನೇಕ ಪ್ರಯೋಗಗಳನ್ನು ಮಾಡಿತ್ತು. ಗುಜರಾತ್​ನಲ್ಲಿ 40ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್​ ನೀಡಿರಲಿಲ್ಲ. ಕೆಲವರ ಕ್ಷೇತ್ರ ಬದಲಾಯಿಸಲಾಗಿತ್ತು. ಆದರೆ, ಲಭ್ಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಅಂತಹ ಯಾವುದೇ ಪ್ರಯೋಗ ಮಾಡುತ್ತಿಲ್ಲ. ಹಾಲಿ ಶಾಸಕರ ಪೈಕಿ ಯಡಿಯೂರಪ್ಪ ತಾವು ಸ್ಪರ್ಧಿಸುವುದಿಲ್ಲವೆಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಹಾಲಿ ಶಾಸಕರಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಟಿಕೆಟ್​ ಸಿಗುವುದು ಖಾತರಿ ಇದೆ ಎಂದು ಮೂಲಗಳು ಖಚಿತಪಡಿಸುತ್ತವೆ.
ಸೂಕ್ಷ್ಮ ತಂತ್ರಕ್ಕೆ ಮೊರೆ ಹೋಗಿರುವ ಕಮಲ ಪಡೆ ಕಾರ್ಯಕರ್ತರನ್ನು ಕರೆ ತರುವುದು: ಇತ್ತೀಚಿನ ಕೆಲವು ಟನೆಗಳಿಂದ ಸಂದ ಹಾಗೂ ಪಕ್ಷದ ಕಾರ್ಯಕರ್ತರು ರಾಜಕೀಯವಾಗಿ ಬೇಸತ್ತಿದ್ದಾರೆಎಂಬ ಮಾಹಿತಿ ಬಂದಿದೆ. ಇದು ಪಕ್ಷದ ಮುಖಂಡರ ತಲೆ ಬಿಸಿಗೆ ಕಾರಣವಾಗಿದೆ. ವಿಮುಖರಾಗುತ್ತಿರುವ ಕಾರ್ಯಕರ್ತರನ್ನು ವಾಪಸ್​ ತರುವುದು ಪ್ರಮುಖ ತಂತ್ರವಾಗಿದೆ.
ಸೆಳೆಯುವುದು:ಪಕ್ಷದ ಹಾಗೂ ಸಂದ ಪ್ರಚಾರಕ ಮತ್ತು ಕಾರ್ಯ ಕರ್ತರ ಸ್ನೇಹಿತರು ಹಾಗೂ ಬೇರೆ ಬೇರೆ ಪಕ್ಷ ಮತ್ತು ಸಿದ್ಧಾಂತದ ಒಲವಿದ್ದವರನ್ನು ಪಕ್ಷದ ಕಡೆ ಸೆಳೆಯುವುದು. ಆ ಮೂಲಕ ಕನಿಷ್ಠ ಶೇಕಡ 1&2 ಎರಡರಷ್ಟು ಮತಗಳನ್ನು ಸೆಳೆಯುವುದು ಇನ್ನೊಂದು ರಣತಂತ್ರವಾಗಿದೆ.
ಮನೆ ಮನೆ ಸಂಪರ್ಕ:ವಿಸ್ತಾರಕ ಮತ್ತು ಪೇಜ್​ ಪ್ರಮುಖ್​ ಹಾಗೂ ಇತರರು ಮನೆ ಮನೆ ಸಂಪರ್ಕ ಮಾಡಲಿದ್ದಾರೆ. ಬೇರೆ ಪಕ್ಷದ ಒಲವಿರುವ ಮನೆಗಳಲ್ಲಿನ ಮತಗಳಲ್ಲಿ ಕನಿಷ್ಠ ಪ್ರಮಾಣದ ಮತಗಳನ್ನಾದರೂ ಬಿಜೆಪಿಗೆ ಆಕರ್ಷಿಸುವ ಉದ್ದೇಶವೂ ಇದೆ.
ಭಾವನಾತ್ಮಕ ವಿಚಾರಗಳು:ಕರ್ನಾಟಕದಲ್ಲಿ ಧಾರ್ಮಿಕ ಭಾವನೆ ಕಾರ್ಯಕ್ರಮಗಳಿಗಿಂತ ತಳ ಸಮುದಾಯಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ಪಕ್ಷದತ್ತ ಹೆಚ್ಚಿನ ಪ್ರಮಾಣದಲ್ಲಿ ಕರೆತರುವ ಕೆಲಸವನ್ನು ಮಾಡಲು ನಿರ್ಧರಿಸಲಾಗಿದೆ.
ಸಕ್ರಿಯ ಭಾಗವಹಿಸುವಿಕೆ:ಅಲ್ಪಸಂಖ್ಯಾತರು ಸೇರಿ ಬೇರೆ ಬೇರೆ ಧರ್ಮದ ಕಾರ್ಯಕ್ರಮಗಳಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಬಿಜೆಪಿಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತದೆ.
ಶಾಲಾ& ಕಾಲೇಜು ಗುರಿ:ಶಾಲೆ, ಕಾಲೇಜು ಹಳೆಯ ವಿದ್ಯಾರ್ಥಿ ಸಂಟನೆಗಳ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕರ್ತರೇ ಬೇರೆ ಹೆಸರಿನಲ್ಲಿ ಸಂಟನೆ ಮಾಡು ವುದು. ಅಲ್ಲಿ ಯುವ ಸಮುದಾಯವವನ್ನು ವಿಚಾರಧಾರೆಗಳ ಮೂಲಕ ಆಕರ್ಷಿಸುವುದು ಅತ್ಯಂತ ಪ್ರಮುಖ ಕಾಯತಂತ್ರವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
