ಬೆಂಗಳೂರು:ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಮಾಡಿರುವ ಕೆಲಸವಲ್ಲದೆ, ಒಂದು ಪಕ್ಷವಾಗಿ ಏನೇನು ಕಾರ್ಯ ಕೈಗೊಳ್ಳಲಾಗಿದೆ ಎನ್ನುವುದರ ಕುರಿತು ವಿವರವಾದ ವರದಿ ನೀಡುವಂತೆ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದ್ದು, ಬಿಜೆಪಿ, ರಿಪೋರ್ಟ್ ಕಾರ್ಡ್ ರೆಡಿ ಮಾಡಿದೆ. ನೊಂದವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಬಿಜೆಪಿ ರಾಜ್ಯ ಘಟಕ, ಮಾ.29ರಿಂದ ಈವರೆಗೆ 20,14 ಜನರಿಗೆ ಆಹಾರ ಪೊಟ್ಟಣ, 5.96 ಲಕ್ಷ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದೆ ಎಂದು ಪಕ್ಷದ ಅಧ್ಯಕ್ಷ ನಳೀನ್​ಕುಮಾರ್ ಕಟೀಲ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಕರೊನಾ ಲಾಕ್​ಡೌನ್ ಘೋಷಿಸಿದ ಬಳಿಕ ಬಿಜೆಪಿ 5 ಅಂಶಗಳಲ್ಲಿ ಸೇವಾ ಕಾರ್ಯ ಪ್ರಾರಂಭಿಸಿತು. ಪ್ರತಿ ದಿನ 2.14 ಲಕ್ಷ ಜನರಿಗೆ ಆಹಾರ ಪೊಟ್ಟಣ, ಒಂದು ವಾರಕ್ಕೆ ಆಗುವಷ್ಟು ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, 1 ಲೀಟರ್ ಎಣ್ಣೆ, ಉಪು್ಪ ಮತ್ತು ಬೇಳೆ ವಿತರಿಸಲಾಗಿದೆ. 7 ಸಾವಿರ ಬೂತ್​ಗಳಲ್ಲಿ ಮಾಸ್ಕ್ ತಯಾರಿಸಲಾಗಿದ್ದು, 15.15 ಲಕ್ಷ ಜನರಿಗೆ ವಿತರಣೆ ಮಾಡಲಾಗಿದೆ. ಸಹಾಯವಾಣಿ ಮೂಲಕ 1.24 ಲಕ್ಷ ಜನರ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಪಿಎಂ ಕೇರ್ಸ್ ಸಹಾಯ ನಿಧಿ ಸಂಗ್ರಹಕ್ಕೆ 1.16 ಲಕ್ಷ ಕಾರ್ಯಕರ್ತರು, ರಾಜ್ಯದ ಸೇವಾ ಕಾರ್ಯಕ್ಕೆ 1.68 ಲಕ್ಷ ಕಾರ್ಯಕರ್ತರು ಸಕ್ರಿಯವಾಗಿದ್ದು, ಮನೆಗಳಿಂದಲೇ ದೂರವಾಣಿ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆರವು:ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಬಡವರು, ವೃದ್ಧರು ಸೇರಿ ಅಸ ಹಾಯಕರಿಗೆ ಉಚಿತವಾಗಿ ಔಷಧ ನೀಡುವ ಮೂಲಕ ಸೇವೆ ಮಾಡಿದ್ದಾರೆ ಎಂದಿದ್ದಾರೆ.
ಸಹಾಯವಾಣಿ:ಕೋವಿಡ್ 19ಕ್ಕೆ ಸಂಬಂದಿಸಿದಂತೆ 311 ಮಂಡಲ, 37 ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಬೆಂಗಳೂರು ಕೇಂದ್ರವಾಗಿ ರಾಜ್ಯ ಸಹಾಯವಾಣಿ ಕೆಲಸ ಮಾಡುತ್ತಿದೆ (080-68324040 ಮೊಬೈಲ್:8722557733) ಎಂದು ನಳಿನ್​ಕುಮಾರ್ ಕಟೀಲ್ ತಿಳಿಸಿದ್ದಾರೆ.
ಫ್ಯಾಕ್ಟರಿಯಲ್ಲಿ ಬಾಳೆಎಲೆ ಊಟ ಕಡ್ಡಾಯ; ಮಾಜಿ ಪತ್ರಕರ್ತೆಯೊಬ್ಬರ ಸಲಹೆ ಜಾರಿಗೊಳಿಸಿದ ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
