| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇರುವ ಪರಮಾಧಿಕಾರಗಳ ಮೇಲೆ ಬಿಜೆಪಿ ವರಿಷ್ಠರು ಸವಾರಿ ಮಾಡುತ್ತಿದ್ದಾರೆಯೇ? ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ ಯಾರಿಗಾದರೂ ಇಂತಹ ಅನುಮಾನ ಬಂದೇ ಬರುತ್ತವೆ. ವರಿಷ್ಠರ ವಲಯದಲ್ಲಿ ಯಡಿಯೂರಪ್ಪ ವಿರೋಧಿ ಬಣ ಹೆಚ್ಚೆಚ್ಚು ಪ್ರಭಾವಶಾಲಿ ಆಗುತ್ತಿದ್ದಂತೆ ಅಧಿಕಾರ ಚಲಾಯಿಸುವುದು ಹೆಚ್ಚಿರುವುದು ಆಡಳಿತಯಂತ್ರದ ಮೇಲೆ ಪರಿಣಾಮ ಬೀರಲಾರಂಭಿಸಿದೆ.
ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಒಂದೂವರೆ ವರ್ಷ ಕಳೆಯುವುದರೊಳಗೆ ಅನುಭವಿಸಿರುವ ಮಾನಸಿಕ ತುಮುಲವನ್ನು ಬಹುತೇಕ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಅನುಭವಿಸಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲಬೇಕಾಗಿದೆ. ಹೈಕಮಾಂಡ್ ಹಾಗೂ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಕ್ಕದೆ ಸೀಮಿತ ಸಂಪನ್ಮೂಲದಲ್ಲಿ ರಾಜ್ಯಾಭಿವೃದ್ಧಿಯ ಕನಸು ನನಸು ಮಾಡಿಕೊಳ್ಳಬೇಕಾದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿನ ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಹಿಂಸೆ ಅನುಭವಿಸಿರಲಿಲ್ಲ ಎಂಬುದು ರಾಜಕೀಯ ವಲಯದಲ್ಲಿ ನಡೆದಿರುವ ಚರ್ಚೆಯಾಗಿದೆ.
ಎಲ್ಲೆಲ್ಲಿ ಕಡಿವಾಣ:ಮುಖ್ಯಮಂತ್ರಿಗೆ ತನ್ನದೇ ಆದ ಅಧಿಕಾರ ಇರುತ್ತದೆ. ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ, ಆಡಳಿತಾತ್ಮಕ ವಿಚಾರಗಳಲ್ಲಿ ಸಿಎಂ ಅವರದ್ದು ಪರಮಾಧಿಕಾರ. ಆದರೀಗ. ಇದು ಕೇವಲ ಚರ್ಚೆಗೆ ಸೀಮಿತವಾಗಿದೆ. ಪರಮಾಧಿಕಾರ ಬಿಟ್ಟುಕೊಡಲು ಹೈಕಮಾಂಡ್ ಸಿದ್ದವಿಲ್ಲ ಎಂಬುದು ನಡವಳಿಕೆಗಳಲ್ಲಿಯೇ ವ್ಯಕ್ತವಾಗುತ್ತಿದೆ.
ಮುಖ್ಯಮಂತ್ರಿ ಮೂರು ಬಾರಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅವಕಾಶವನ್ನೇ ನೀಡುತ್ತಿಲ್ಲ. ನಿಗಮ- ಮಂಡಳಿಗಳ ನೇಮಕಕ್ಕೂ ಅನುಮತಿ ಸಿಗದ ಕಾರಣ ಯಡಿಯೂರಪ್ಪ ತಮ್ಮ ಅಧಿಕಾರ ಬಳಸಿದ್ದರು. ಆದ್ದರಿಂದಲೇ ಅವರಿಗೆ ಎಲ್ಲವೂ ಕೋರ್ ಕಮಿಟಿಯಲ್ಲಿ ಚರ್ಚೆಯಾಗಬೇಕೆಂದು ಕಡಿವಾಣ ಹಾಕಲಾಗುತ್ತಿದೆ.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಹಾಗೂ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಸ್ಥಳೀಯ ನಾಯಕತ್ವ ಪ್ರಬಲವಾಗಿರಬೇಕು ಎಂಬುದು ಈಗ ಪಕ್ಷದ ಪಾಲಿಗೆ ಅರ್ಥ ಕಳೆದುಕೊಂಡಿದೆ. ವರಿಷ್ಠರು ಚುನಾವಣೆಯ ತಂತ್ರಗಳನ್ನು ರೂಪಿಸುತ್ತಾರೆ ಹಾಗೂ ಚುನಾವಣೆಗಳನ್ನು ನಡೆಸಿ ಗೆಲುವಿನ ದಡ ಮುಟ್ಟಿಸಲು ಸಮರ್ಥರಾಗಿದ್ದಾರೆ ಎಂಬ ಭಾವನೆ ಮೂಡಿದೆ. ಆದ್ದರಿಂದಲೇ ಸ್ಥಳೀಯ ನಾಯಕತ್ವವನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.
ಆಡಳಿತದ ಮೇಲೆ ಪರಿಣಾಮ
ಸಿಎಂ ಕೈ ಕಟ್ಟಿ ಹಾಕುವ ಪ್ರಯತ್ನ ನಡೆದರೆ, ಅದರ ಹಿನ್ನೆಲೆಯಲ್ಲಿ ವದಂತಿಗಳದ್ದೇ ಕಾರುಬಾರು. ಅದರ ನೇರ ಪರಿಣಾಮ ಬೀರುವುದು ಆಡಳಿತ ಯಂತ್ರದ ಮೇಲೆ. ಮೊದಲೇ ಕಳ್ಳಾಟವಾಡುವ ಅಧಿಕಾರಿಗಳಿಗೆ ಇಂತಹ ಬೆಳವಣಿಗೆಗಳು ಹಾಸಿಗೆ ಹಾಸಿಕೊಟ್ಟಂತೆ ಆಗುತ್ತವೆ. ಜತೆಗೆ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದಲೇ ಸರ್ಕಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ಅಭಿಪ್ರಾಯ ರಾಜಕೀಯ ಪಂಡಿತರದ್ದಾಗಿದೆ.
ಉದ್ದೇಶವೇನು?
ಪಕ್ಷದಲ್ಲಿನ ಬೆಳವಣಿಗೆಗಳನ್ನು ಸಹಿಸಿಕೊಳ್ಳುವ ಜಾಯಮಾನ ಯಡಿಯೂರಪ್ಪ ಅವರದ್ದೇನು ಅಲ್ಲ. ಪ್ರೀತಿಯಿಂದ ಅವರನ್ನು ಗೆಲ್ಲಬಹುದೇ ಹೊರತು ಬಲವಂತದಿಂದ ಸಾಧ್ಯವಿಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಆದರೆ ಅವರ ಬಲ ಕುಗ್ಗಿಸಬೇಕೆಂಬ ಕಾರಣಕ್ಕೆ ವಿರೋಧಿಗಳು ಅವರ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿದ್ದಾರೆ. ಬಿಎಸ್​ವೈ ಸುಗಮವಾಗಿ ಆಡಳಿತ ನಡೆಸಲು ಬಿಟ್ಟರೆ ಮತ್ತಷ್ಟು ಜನಾನುರಾಗಿ ಆಗುತ್ತಾರೆ, ಬಲಯುತರಾಗುತ್ತಾರೆ ಎಂಬುದು ಗೊತ್ತಿರುವುದರಿಂದಲೇ ವಿರೋಧಿಗಳು ಪದೇಪದೆ ಅವರ ವೇಗಕ್ಕೆ ಅಡ್ಡಗಾಲಾಗುತ್ತಿದ್ದಾರೆ. ಪಕ್ಷದಲ್ಲಿ ಅವರ ನಾಯಕತ್ವ ಬದಲಾವಣೆಯ ವದಂತಿಗಳು ಹರಿದಾಡುತ್ತಿವೆ. ಆದರೆ ಅವರಿಗೆ ಪರ್ಯಾಯ ಹುಡುಕಿದರೂ ಯಾರೂ ಸಿಗುತ್ತಿಲ್ಲ. ಆದ್ದರಿಂದ ಇವರ ಪ್ರಭಾವವನ್ನೇ ತಗ್ಗಿಸಬೇಕು ಎಂಬುದು ಅವರ ವಿರುದ್ಧ ಪಿತೂರಿಗೆ ಕಾರಣವೆಂದೇ ಹೇಳಲಾಗುತ್ತಿದೆ. ಪಕ್ಷ ಹಾಗೂ ಸರ್ಕಾರ ಒಟ್ಟಿಗೆ ನಡೆಯಬೇಕು ನಿಜ. ಆದರೆ ಮುಖ್ಯಮಂತ್ರಿ ಆದವರಿಗೆ ತಮ್ಮದೇ ಆದ ಒತ್ತಡಗಳಿರುತ್ತವೆ. ಎಲ್ಲವನ್ನೂ ಕೋರ್ ಕಮಿಟಿ ಮುಂದೆ ಚರ್ಚೆ ಮಾಡಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾಯಕತ್ವದ ಕೈ ಕಟ್ಟಿ ಹಾಕುವ ಪ್ರಯತ್ನ ಸರ್ಕಾರ ಮತ್ತು ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
