ಬೆಂಗಳೂರು:ಕಾಂಗ್ರೆಸ್​ ಪಕ್ಷ ಈಗಾಗಲೇ ಟಿಕೆಟ್​ ಪಟ್ಟಿಗಳನ್ನು ಘೋಷಿಸಿದ್ದು ಬಹುತೇಕ ಎಲ್ಲಾ ಅಭ್ಯರ್ಥಿಗಳು ಪಕ್ಕಾ ಆಗಿದ್ದಾರೆ. ಆದರೆ ಬಿಜೆಪಿ ಪಾಳಯದಲ್ಲಿ ಇನ್ನೂ ಟಿಕೆಟ್ ಗೊಂದಲ ಇದೆ.
ಈ ನಡುವೆ ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾಡಲ್ ಜಾರಿಗೆ ಹೈಕಮಾಂಡ್ ನಿಲುವು ಇದೆ ಎನ್ನಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ವರ್ಕೌಟ್ ಆಗಲ್ಲ ಎಂದು ರಾಜ್ಯ ನಾಯಕರು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಾಯಕರ ಗುಜರಾತ್ ಮಾದರಿ ಕ್ರಮಕ್ಕೆ ರಾಜ್ಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಲ ಗುರುತರ ಆರೋಪ ಹೊತ್ತ ಹಾಲಿ ಶಾಸಕರ ಬದಲು ಹೊಸ ಮುಖಗಳಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ. ಆದರೆ ಸ್ಪಷ್ಟವಾಗಿ ಇದಕ್ಕೆ ಸಿಎಂ ಬೊಮ್ಮಾಯಿ, ಬಿಎಸ್ ವೈ ಹಾಗೂ ನಳಿನ್ ಕುಮಾರ್ ಕಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ, ಸ್ಥಳೀಯವಾಗಿ ಕಾರ್ಯಕರ್ತರ ವಿರೋಧ, ಆಡಳಿತ ವಿರೋಧಿ ಅಲೆ ಇರುವ ಕಡೆ ಶಾಸಕರಿಗೆ ಟಿಕೆಟ್ ನೀಡೋದು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್​ ಒಲವು ವ್ಯಕ್ತಪಡಿಸುತ್ತಿದ್ದು ಈ ಹೊಸ ತಂತ್ರಕ್ಕೆ ರಾಜ್ಯ ನಾಯಕರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಮತ್ತು ರಾಜ್ಯ ನಾಯಕರ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದ್ದು ಕೇಂದ್ರ ಚುನಾವಣಾ ಸಮಿತಿಯ ನಾಯಕರ ಹೊಸ ನೀತಿಗೆ ರಾಜ್ಯ ನಾಯಕರು ಬೇಸತ್ತಿದ್ದಾರೆ. ಏಕೆಂದರೆ ಗುಜರಾತ್ ಮಾಡಲ್ ನಂತೆ ಆದ್ರೆ ಸುಮಾರು 20-30 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗೋದು ಪಕ್ಕಾ. ಸಮುದಾಯವಾರು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಭಾವಿಗಳಿಗೇ ಟಿಕೆಟ್ ಕೈತಪ್ಪಿದರೆ ಪಕ್ಷದ ಮೇಲೆ ಭಾರಿ ಎಫೆಕ್ಟ್ ಆಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಹೈಕಮಾಂಡ್​ನ ಹೊಸ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಹಗ್ಗ ಜಗ್ಗಾಟದಿಂದಲೇ ಟಿಕೆಟ್ ಘೋಷಣೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
