ಬೆಂಗಳೂರು :ಶಿರಾ ಮತ್ತು ರಾಜಾರಾಜೇಶ್ವರಿನಗರ ಗೆಲುವಿನ ಸಂಭ್ರಮ ಆಚರಣೆಗೂ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕುತ್ತಿದ್ದು, ವ್ಯಕ್ತಿಗತ ವೈಭವೀಕರಣಕ್ಕಿಂತ ಸಾಮೂಹಿಕ ಪ್ರಯತ್ನವನ್ನೇ ಬಿಂಬಿಸುವಂತೆ ತಾಕೀತು ಮಾಡಿದೆ.
ಕಾರ್ಯಕರ್ತರಿಂದ ನಾಯಕರ ತನಕ ಎಲ್ಲರೂ ಮೊದಲು ಪಕ್ಷ, ಆಮೇಲೆ ವೈಯುಕ್ತಿಕ ವರ್ಚಸ್ಸು ಎನ್ನುವುದನ್ನು ಮನಗಾಣಬೇಕು. ಪಕ್ಷ ಇದ್ದರಷ್ಟೇ ಸಾಧನೆ ಸಾಧ್ಯ. ಆದ್ದರಿಂದ ಮೊದಲು ಪಕ್ಷದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವಂತೆ ಹೈಕಮಾಂಡ್ ನಿರ್ದೇಶನ ನೀಡಿದೆ. ಶಿರಾದಲ್ಲಿ ಗೆಲ್ಲುವುದಕ್ಕೆ ಬಿ.ವೈ.ವಿಜಯೇಂದ್ರ ಕಾರಣ, ಆರ್​ಆರ್ ನಗರದಲ್ಲಿ ಮುನಿರತ್ನ ವೈಯಕ್ತಿಕ ವರ್ಚಸ್ಸು ಪ್ರಭಾವ ಬೀರಿದೆ ಎಂದು ನಿರಂತರ ಹೇಳಿಕೆ ನೀಡುತ್ತಿರುವ ಬಗ್ಗೆ ಪಕ್ಷದೊಳಗೆ ಆಕ್ಷೇಪಗಳು ವ್ಯಕ್ತವಾಗಿದ್ದು, ಈ ದೂರು ಹೈಕಮಾಂಡ್ ತನಕ ತಲುಪಿದೆ.
ಅಭ್ಯರ್ಥಿ ಯಾರೇ ಗೆದ್ದರೂ ಅವರು ಮೊದಲು ಬಿಜೆಪಿ ಅಭ್ಯರ್ಥಿ ಎನ್ನುವುದು ಮುಖ್ಯ. ಅದೇ ರೀತಿ ಒಂದು ತಂಡವಾಗಿ ಕೆಲಸ ಮಾಡಿದ್ದರಿಂದ ಮತದಾರರು ಬಿಜೆಪಿ ಕೈ ಹಿಡಿದಿದ್ದಾರೆ. ಈ ಪ್ರಯತ್ನಗಳನ್ನು ಒಬ್ಬರಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದು ತಿಳಿಸಲಾಗಿದೆ. ಯಾರೇ ಕೆಲಸ ಮಾಡಿದ್ದರೂ ಅವರು ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದಾರೆ ಎನ್ನುವುದನ್ನು ಮನಗಾಣಬೇಕು ಎಂದು ತಿಳಿಸಲಾಗಿದೆ.
ವಸತಿ ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಉಡುಗೊರೆ- ಬಿಲ್ಡರ್​ಗಳಿಗೂ, ಮನೆ ಖರೀದಿದಾರರಿಗೂ ತೆರಿಗೆ ವಿನಾಯಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
