ಬೆಂಗಳೂರು:ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಗಡುವು ನೀಡಲು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಸಂವಿಧಾನ ಬದ್ಧ ಅಧಿಕಾರವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಸುಳ್ಳನ್ನು ಸತ್ಯ ಮಾಡಲು ಜಗಜ್ಜಾಹೀರಾಗಿದ್ದಾರೆ. ಸಾಕ್ಷಿ, ಆಧಾರ ಇಲ್ಲದೆ ಆರೋಪ ಮಾಡುತ್ತಾರೆ. ಬಿಜೆಪಿ ಅವರು ಸೋಲಿನಿಂದ ಹತಾಶರಾಗಿದ್ದಾರೆ. ಬಿಜೆಪಿ ಅವರ ಬಳಿ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎಂದು ಟೀಕಿಸಿದರು. ಸುಳ್ಳು ಆರೋಪ ಮಾಡಿ ಸರ್ಕಾರದ ಮೇಲೆ ಅಪ ನಂಬಿಕೆ ಮೂಡಿಸುವ ಪ್ರಯತ್ನವನ್ನು ಬಿಜೆಪಿಯವರು ನಡೆಸಿದ್ದಾರೆ. ಅವರ ಪ್ರಯತ್ನ ಲ ನೀಡುವುದಿಲ್ಲ ಎಂದರು.
ಡೆಡ್‌ಲೈನ್ ಕೊಡಲು ಅಧಿಕಾರವಿಲ್ಲಬಾಕಿ ಬಿಲ್ ಪಾವತಿಗೆ ಕೆಂಪಣ್ಣರಿಂದ ಡೆಡ್ ಲೈನ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಡೆಡ್ ಲೈನ್ ಕೊಡಲು ಕೆಂಪಣ್ಣಗೆ ಸಂವಿಧಾನ ಬದ್ಧ ಅಧಿಕಾರವಿಲ್ಲ ಎಂದು ಹೇಳಿದರು.
ಆಣೆಯಿಂದ ಸತ್ಯ ಹೊರ ಬರುತ್ತದೆಯೆ?ಕಮೀಷನ್ ವಿಚಾರದಲ್ಲಿ ಅಜ್ಜಯ್ಯನ ಮಠಕ್ಕೆ ಹೋಗಿ ಆಣೆ ಪ್ರಮಾಣ ಮಾಡುವುದರಿಂದ ಸತ್ಯ ಹೊರಗೆ ಬರುತ್ತಾ? ಆಣೆ ಪ್ರಮಾಣ ಅದೆಲ್ಲವೂ ಮೂಢನಂಬಿಕೆ. ಸಂವಿಧಾನದ ಮೇಲೆ ನಂಬಿಕೆ ಇಡಬೇಕು. ಅದು ಬಿಟ್ಟು ಆಣೆ ಪ್ರಮಾಣ ಅನ್ನೋದು ಸರಿಯಲ್ಲ. ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನೂ ಸಚಿವರು ನೋಡಬಾರದೆ ಎಂದು ಪ್ರಶ್ನಿಸಿದರು.
ಕಾಮಗಾರಿ ಪರಿಶೀಲನೆ ಮಾಡಬಾರದೆಕಾಮಗಾರಿ ಆಗಿದೆಯೇ ಇಲ್ಲವೆ ಎಂಬುದನ್ನು ನೋಡದೇ ಹಣ ರಿಲೀಸ್ ಮಾಡಲು ಆಗುತ್ತದೆಯೆ? ಮಂತ್ರಿಗಳು ಪರಿಶೀಲನೆ ಮಾಡೋದು ತಪ್ಪಾ? ಎಂದು ಕೇಳಿದರು. ಇವರ ಬಳಿ 15ಪರ್ಸೆಂಟ್ ಕಮೀಷನ್‌ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ.ಅನೇಕ ತನಿಖಾ ಸಂಸ್ಥೆಗಳು ಇವೆ. ಅಲ್ಲಿಗೆ ದಾಖಲಾತಿಗಳನ್ನ ಕೊಡಲಿ. ದಾಖಲಾತಿ ಕೊಟ್ಟು ಆರೋಪ ಮಾಡಲಿ. 40 ಪರ್ಸೆಂಟ್ ಆರೋಪ ಮಾಡಿದ್ದಾಗ ಕೆಂಪಣ್ಣ ಅವರೇ ಪತ್ರ ಬರೆದಿದ್ದರು. ಆದರೆ 15 ಪರ್ಸೆಂಟ್‌ಗೆ ಬಿಜೆಪಿ ಯಾವುದೇ ಆಧಾರ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಬಡವರಿಗೆ ಹಣ ಕೊಟ್ಟರೆ ತಪ್ಪೇನುಕಾಂಗ್ರೆಸ್ ಗ್ಯಾರಂಟಿಗಳಿಂದ ಆರ್ಥಿಕ ವ್ಯವಸ್ಥೆ ದುರ್ಬಲ ಆಗುತ್ತದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಕುರಿತ ಪ್ರಶ್ನೆಗೆ, ಪ್ರಬಲವಾಗಿರೋ ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಬಡತನ ನಿರ್ಮೂಲನೆ ಮಾಡಿದ್ದಾರೆ. ಇವರಿಂದ ಬಡತನ ನಿರ್ಮೂಲನೆ ಆಗಿದೆಯೆ? ನಮ್ಮ 5 ಗ್ಯಾರಂಟಿಯಿಂದ ಒಂದು ಕುಟುಂಬ ತಿಂಗಳಿಗೆ 4-5 ಸಾವಿರ ವರಮಾನ ಬರುತ್ತದೆ. ವಾರ್ಷಿಕ 40-60 ಸಾವಿರ ಸಹಾಯ ಆಗುತ್ತದೆ. ಬಡ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ಕೊಟ್ಟರೆ ಅದು ತಪ್ಪೆ ಎಂದು ಪ್ರಶ್ನಿಸಿದರು.ಬಡವರ ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ರಾಜ್ಯ, ದೇಶ ದಿವಾಳಿ ಆಗುತ್ತದೆಯೆ? ಅದಾನಿ, ಅಂಬಾನಿಗೆ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೆ ಎಂದು ಕೆಣಕಿದರು.
ಬಿಜೆಪಿಯವರು ಸತ್ಯ ಎಲ್ಲಿ ಹೇಳುತ್ತಾರೆಬಿಜೆಪಿಯಿಂದ ಪೇ ಸಿಎಸ್ ಅಭಿಯಾನ, ಎಟಿಎಂ ಸರ್ಕಾರ ಅಭಿಯಾನ ಕುರಿತ ಪ್ರಶ್ನೆಗೆ, ಬಿಜೆಪಿ ಅವರು ಸತ್ಯ ಎಲ್ಲಿ ಹೇಳಿದ್ದಾರೆ. ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಅಧಿಕಾರ ಕಳೆದುಕೊಂಡಾಗ ಬಿಜೆಪಿ ಇದನ್ನೇ ಮಾಡುತ್ತದೆ ಎಂದು ಟಾಂಗ್ ಕೊಟ್ಟರು.ಬಿಜೆಪಿಯವರು ರಾಜ್ಯಪಾಲರನ್ನು ಭೇಟಿಯಾಗಲಿ.ಈ ಆರೋಪಗಳನ್ನು ನೋಡಿದರೆ ಮೇಲ್ನೋಟಕ್ಕೆ ಬಿಜೆಪಿ ಅವರಿಗೆ ಹೊಟ್ಟೆ ಉರಿ ಆಗಿದೆ. ಲೋಕಸಭೆ ಚುನಾವಣೆ ಬರುತ್ತಿದೆ. ಜನರ ಮನಸ್ಸು ಕೆಡಿಸೋಕೆ ಈ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಮೇಲೆ ಕೆಟ್ಟ ಭಾವನೆ ತರಿಸೋದಕ್ಕೆ ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಮಹದೇವಪ್ಪ ಕಿಡಿಕಾರಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
