
ಬೆಂಗಳೂರು:ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜ, ಆದರೆ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ:ಕಾಶ್ಮೀರದ ಕಥುವಾದಲ್ಲಿ ಸೇನಾ ವಾಹನಗಳ ಮೇಲೆ ಉಗ್ರರ ದಾಳಿ: ಇಬ್ಬರು ಯೋಧರಿಗೆ ಗಾಯ
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘೆ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಪ್ರತಿನಿತ್ಯ ನಿಗಾವಹಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.‌ ಯಾವುದೇ ಬೆಡ್ ಅಥಾವಾ ಔಷಧಿಯ ಕೊರತೆಯಿಲ್ಲ.‌ ಡೆಂಘೆ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯವರೊಂದಿಗೆ ಚರ್ಚೆ ನಡೆಸಿದ್ದು, ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಅಗತ್ಯವಿಲ್ಲ ಎಂದು ಸಲಹಾ ಸಮಿತಿಯವರು ತಿಳಿಸಿದ್ದಾರೆ ಎಂದರು.‌
ಫೀವರ್ ಕ್ಲಿನಿಕ್ ತೆರೆಯಿರಿ:ಇನ್ನು ಎರಡು ತಿಂಗಳು ಡೆಂಗಿ ಹಾವಳಿ ಇರುತ್ತದೆ. ಜನರು ಹೆಚ್ಚು ಜಾಗೃತರಾಗಬೇಕು. ಮನೆಯ ಸುತ್ತಮುತ್ತಲು ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕೂಡ ಜನರಲ್ಲಿ ಡೆಂಘೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.‌ ಪ್ರತಿ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ನಾಶ ಪಡಿಸುವ ಕಾರ್ಯ ನಡೆಸುತ್ತಿದೆ. ಹೆಚ್ಚು ಡೆಂಘೆ ಪ್ರಕರಣಗಳು ಕಂಡು ಬರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆದು, ಟೆಸ್ಟಿಂಗ್ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒಗಳಿಗೆ ಸೂಚಿಸಲಾಗಿದೆ. ಔಷಧಿಗಳ ಲಭ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಜನರು ಹೆಚ್ಚು ಜಾಗೃತರಾಗಿ ಡೆಂಘೆ ಹರಡದಂತೆ ಎಚ್ಚರಿಕೆ ವಹಿಸುವುದೇ ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌
ಸಕಾರಾತ್ಮಕ ಚಿಂತನೆಗಳನ್ನ ವಿಪಕ್ಷಗಳು ಪ್ರದರ್ಶಿಸಲಿ:ಡೆಂಘೆ ವಿಚಾರದಲ್ಲಿ ವಿಪಕ್ಷ ನಾಯಕರು ಆತಂಕ ಹುಟ್ಟಿಸುವಂತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದು ಸರಿಯಲ್ಲ. ಇಂಥಹ ಸಂದರ್ಭದಲ್ಲಿ ವಿಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ ಡೆಂಘೆ ಹರಡುವ ಸೊಳ್ಳೆಗಳಿಗಿಂತ ವಿಪಕ್ಷ ನಾಯಕರ ಸುಳ್ಳುಗಳು ಹೆಚ್ಚು ಹರಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರ ಹೇಳಿಕೆಗಳನ್ನ ಟೀಕಿಸಿದರು. ಸಂಸದ ಡಾ. ಮಂಜುನಾಥ್ ಅವರು ಉತ್ತಮ ಸಲಹೆಗಳನ್ನ ನೀಡಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಸಕಾರಾತ್ಮಕ ಚಿಂತನೆಗಳನ್ನ ವಿಪಕ್ಷಗಳು ಪ್ರದರ್ಶಿಸಲಿ ಎಂದರು.
ಸ್ವಿಮ್ಮಿಂಗ್ ಮಾಡಿರುವ ವಿಡಿಯೋ ಹಾಗೂ ಫೋಟೋವನ್ನು ವ್ಯಂಗ್ಯವಾಗಿ ವೈರಲ್ ಮಾಡಿರುವ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಕೆಲಸ ಇಲ್ಲ, ಸ್ವಿಮ್ಮಿಂಗ್ ಒಂದು ಉತ್ತಮ ಹವ್ಯಾಸ. ವಾಕಿಂಗ್, ಜಾಗಿಂಗ್, ರೀತಿ ಸ್ವಿಮ್ಮಿಂಗ್ ಕೂಡ ಆರೋಗ್ಯಕರ ಹವ್ಯಾಸ. ಬಿಜೆಪಿಯವರ ರೀತಿ ರೆಸಾರ್ಟ್​ಗೆ ಹೋಗಿ ಸ್ವಿಮ್ ಮಾಡಿದ್ದಲ್ಲ ಅದು. ಸ್ವಿಮ್ಮಿಂಗ್ ಮಾಡಿದ ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಅಷ್ಟೇ. ಡೆಂಘೆ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.


ಮಂಗಳೂರಿನಲ್ಲಿ ನಾನು ಈಜಿದ್ದು ಮಾತ್ರವಲ್ಲ, ಡೆಂಘೆ, ಈಡಿಸ್ ಸೊಳ್ಳೆಗಳ ಲಾರ್ವಾ ನಾಶಪಡಿಸುವ ಬೃಹತ್ ಅಭಿಯಾನಕ್ಕೆ ಕೂಡ ಚಾಲನೆ ಕೊಟ್ಟಿದ್ದೇನೆ. ಮನೆ ಮನೆಗೆ ತೆರಳಿ ನೀರು ಶೇಖರಣೆಯಾಗಿರುವ ಸ್ಥಳಗಳನ್ನ ಗುರುತಿಸಿ ಅಲ್ಲಿಯ ನಿವಾಸಿಗಳನ್ನ ಎಚ್ಚರಿಸಿದ್ದೇವೆ. ಎರಡು ದಿನ ಪ್ರವಾಸದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.‌
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದ್ದೇನೆ. ಹೀಗಿರುವಾಗ ಬಿಜೆಪಿ ನಾನು ಈಜುಕೊಳ್ಳದಲ್ಲಿ ಈಜಿದ್ದನ್ನೇ ಪ್ರಶ್ನೆ ಮಾಡಿದೆ‌. ಬಿಜೆಪಿಗರಿಗೆ ಈಜು ಒಂದು ರೀತಿಯಲ್ಲಿ ಮೋಜು ಮಸ್ತಿಯಾಗಿರಬಹುದು‌. ಆದರೆ ನನಗಲ್ಲ. ನಾನು ಮಂಗಳೂರಿನ ಸರ್ಕಾರಿ ಈಜುಕೊಳಕ್ಕೆ ಭೇಟಿ ನೀಡಿದ್ದೇನೆ ಹೊರೆತು ಬಿಜೆಪಿಯವರ ರೀತಿ ಯಾವುದೋ ರೆಸಾರ್ಟ್ ಗೆ ಹೋಗಿಲ್ಲ.‌ ಅದು ಬೆಳಗ್ಗೆ 6 ಗಂಟೆಗೆ ಎದ್ದು, ಸಮಯ ಬಿಡುವು ಮಾಡಿಕೊಂಡು ನಾನು ಈಜುಕೊಳಕ್ಕೆ ಹೋಗಿದ್ದೆ. ಏಕೆಂದರೆ ಈಜುಕೊಳ್ಳಕ್ಕೆ ಭೇಟಿ ನೀಡುವುದು ನನ್ನ ಮಂಗಳೂರು ಪ್ರವಾಸದ ಒಂದು ಭಾಗವಾಗಿತ್ತು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.‌

ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ… ಬದುಕುಳಿದಿದ್ದೇ ರೋಚಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
