ಚಿತ್ರದುರ್ಗ:ಒಬಿಸಿ ಮೀಸಲಾತಿಯಿಂದ ಮುಸ್ಲಿಂ ಕೈ ಬಿಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಯಾವ ಸಮಾಜಕ್ಕೆ ಎಷ್ಟು ಮೀಸಲಾತಿ ಕೊಡಬೇಕು ಎಂಬುವುದರ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಈ ಸಮಾಜಕ್ಕೆ ಮೀಸಲಾತಿ ಕೊಡಿ ಎನ್ನುವ ಶಾಸಕರಿಗೆ ಸಂವಿಧಾನದ ಅರಿವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಹಿರಿಯೂರಿನಲ್ಲಿ ಮಾತನಾಡಿರುವ ಪ್ರಿಯಾಂಕ ಖರ್ಗೆ ಶಾಸಕ ಅರವಿಂದ್ ಬೆಲ್ಲದ್ ವಿರುದ್ದ ಕಿಡಿಕಾರಿದ್ದಾರೆ. ಮುಸ್ಲಿಂ,‌ ದಲಿತ ಹೀಗೆ ಎಲ್ಲರನ್ನೂ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರದಿಂದ ಎಸ್​​ಸಿ, ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರದ ದೊಂಬರಾಟ ಇದು. ರಾಜ್ಯದಿಂದ ಕಳಿಸಿದ ಫೈಲ್​ಗಳು ಕೇಂದ್ರದಲ್ಲಿ ಧೂಳು ತಿನ್ನುತ್ತಿದೆ. ಇಷ್ಟು ವರ್ಷ ಯಾಕೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿಲ್ಲ? ಬಿಜೆಪಿ ದಲಿತರು, ಹಿಂದುಳಿದವರು,‌ ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿದರು.
ಬ್ರಿಟಿಷರಂತೆ ಕಾಂಗ್ರೆಸ್ಸಿಗರನ್ನು ಜನ ಓಡಿಸುತ್ತಾರೆ ಎಂದ ಸಚಿವ‌ ಸುಧಾಕರ್ ಹೇಳಿಕೆಗೆ ಖರ್ಗೆ ಟಾಂಗ್ ನೀಡಿದ ಪ್ರಿಯಾಂಕ ಖರ್ಗೆ, ಆರ್​ಎಸ್​​ಎಸ್​​ ಸಿದ್ಧಾಂತ ಒಪ್ಪದವರನ್ನು ಬಿಜೆಪಿ ವಿರೋಧಿಸುತ್ತಿದೆ. ಸಚಿವ ಡಾ.ಸುಧಾಕರ್‌ 2 ಸಲ ಯಾವ ಸಿದ್ಧಾಂತ ಒಪ್ಪಿ ಶಾಸಕ ಆಗಿದ್ದರು? ಈಗ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್ ಸಿದ್ಧಾಂತದ‌ ಬಗ್ಗೆ ಟೀಕಿಸುತ್ತಾರೆ. ಕಾಂಗ್ರೆಸ್ ಮುಕ್ತ ಭಾರತ ಎಂಬುದು ಅಸಾಧ್ಯ. ಬಿಜೆಪಿ ಮುಕ್ತ ಕರ್ನಾಟಕದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × three =
Remember me
