ಪೀಣ್ಯ ದಾಸರಹಳ್ಳಿ:ವಿಧಾನಸಭಾ ಕ್ಷೇತ್ರದಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯದವರನ್ನು ಬಿಜೆಪಿ ತುಳಿಯುತ್ತಿದೆ. ಎಂದು ಹೇಳಿರುವ ಬ್ಯಾಟರಿ ರಾಜಣ್ಣ ಹೇಳಿಕೆ ಸತ್ಯಕ್ಕೆ ದೂರ ವಾದ ಮಾತು ಎಂದು ಬಿಜೆಪಿ ಮುಖಂಡ ಹಾಗೂ ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಖಂಡ ಕೆ.ಎಲ್. ತಿಮ್ಮನಂಜಯ್ಯ ಹೇಳಿದ್ದಾರೆ.
ರಾಜಣ್ಣ ಆಮಿಷಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ. ಇದುವರೆಗೂ ಬಿ.ಟಿ. ಶ್ರೀನಿವಾಸ್, ಹುಚ್ಚ ರಂಗಯ್ಯ, ಬಿ.ಆರ್. ಸತೀಶ್, ಅಂದಾನಪ್ಪ ಮುಂತಾದವರನ್ನು ಬಿಜೆಪಿ ಬೆಳೆಸಿದೆ ಹಾಗೂ ಅಧಿಕಾರ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕುಂಚಿಟಿಗ ಒಕ್ಕಲಿಗನಾದ ಈಗಿನ ಮಂಡಲ ಅಧ್ಯಕ್ಷ ಎನ್. ಲೋಕೇಶ್ ಅವರನ್ನು ಮಲ್ಲಸಂದ್ರ ವಾರ್ಡ್ ಅಧ್ಯಕ್ಷ, ಪಾಲಿಕೆ ಸದಸ್ಯನಾಗಿ ಮಾಡಿದ ಪಕ್ಷ ಬಿಜೆಪಿ. ಪಕ್ಷವು ನಮ್ಮನ್ನು ಬೆಳಸುತ್ತಿದೆಯೇ ಹೊರತು ತುಳಿಯುತ್ತಿಲ್ಲ. ಜೆಡಿಎಸ್ ಶಾಸಕ ಮಂಜುನಾಥ್‌ ನಮ್ಮ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೊಬ್ಬ ಮುಖಂಡ ಬಿ.ಟಿ. ಶ್ರೀನಿವಾಸ್ ಮಾತನಾಡಿ, ಈ ಕ್ಷೇತ್ರದಲ್ಲಿ ಸಮುದಾಯದ 30 ಸಾವಿರ ಜನರಿದ್ದಾರೆ. ಸಮುದಾಯದ ಬಗ್ಗೆ ಮಾತನಾಡುವಾಗ ರಾಜಣ್ಣ ಎಚ್ಚರಿಕೆ ವಹಿಸಬೇಕು ಎಂದರು.
ಯಾವುದೋ ಆಮಿಷಕ್ಕೆ ಒಳಗಾಗಿ ರಾಜಣ್ಣ ಮಾತಾಡುತ್ತಿದ್ದಾರೆ. ಜೆಡಿಎಸ್ ಶಾಸಕರಿಗೆ ಹೀಗೆ ಅಪಪ್ರಚಾರ ಮಾಡುವುದೇ ಅವನ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಖಂಡರಾದ ರಮೇಶ್, ಬಿ.ಟಿ. ಶ್ರೀನಿವಾಸ್. ಕೆ.ಎಲ್. ತಿಮ್ಮನಂಜಯ್ಯ, ಹುಚ್ಚರಂಗಯ್ಯ, ಬಿ.ಆರ್. ಸತೀಶ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
