|ಮೃತ್ಯುಂಜಯ ಕಪಗಲ್ಬೆಂಗಳೂರು
ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆಗಳು ಹಾಗೂ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಉದ್ದೇಶಿತ ‘ಜನೋತ್ಸವ’ಕ್ಕೆ ಆಗಸ್ಟ್ 15ರ ಬಳಿಕ ಚಾಲನೆ ನೀಡುವ ಸಾಧ್ಯತೆಗಳಿವೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆ.6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಇದೇ ವೇಳೆ ಕಾರ್ಯಕ್ರಮದ ರೂಪುರೇಷೆ ವರಿಷ್ಠರ ಗಮನಕ್ಕೆ ತರುವ ಸಾಧ್ಯತೆಗಳಿವೆ. ಪ್ರವೀಣ್ ಹತ್ಯೆ ನಂತರ ಕೆರಳಿರುವ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಹೋರಾಟಗಳಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಉಂಟಾಗಿರುವ ‘ಹಾನಿ ನಿಯಂತ್ರಣ’ ತುರ್ತು ಅಗತ್ಯವಾಗಿದೆ.
ಪರಿವರ್ತನೆಗೆ ಕಸರತ್ತು:ಸರ್ಕಾರ ಮತ್ತು ಪಕ್ಷ ಆಂತರಿಕವಾಗಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರದ ಕಾರ್ಯತಂತ್ರದಲ್ಲಿ ಸಮಾವೇಶ ಸಂಘಟನೆಯೂ ಒಂದು ಭಾಗವಾಗಿದೆ. ಕಾರ್ಯಕರ್ತರಲ್ಲಿ ಮನೆ ಮಾಡಿರುವ ಅಸಹನೆ, ಬೇಸರದ ಮನಸ್ಥಿತಿಯಿಂದ ಪರಿವರ್ತನೆಗೆ ಈ ಸಮಾವೇಶ ಆಯೋಜನೆ ಕಸರತ್ತು ನಡೆಸಲಾಗುತ್ತಿದೆ. ಬಿಜೆಪಿ ಚಿಂತನಾ ಸಭೆ ನಿರ್ಧಾರವನ್ನು ಜಾರಿಗೊಳಿಸುವ ಅತ್ಯುತ್ಸಾಹದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷದ ಸಾಧನೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ರಾಜ್ಯದಲ್ಲಿ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದು ಮೂರು ವರ್ಷಗಳಾಗಿವೆ. ಒಂದು ವರ್ಷದ ಸಾಧನೆ ಮಾತ್ರ ಬಿಂಬಿಸಿದರೆ ತಪು್ಪ ಸಂದೇಶ ರವಾನೆಯಾಗಲಿದೆ ಎನ್ನುವುದು ನಾಯಕರಿಗೆ ತಡವಾಗಿ ‘ಜ್ಞಾನೋದಯ’ವಾಗಿದೆ. ರಾಷ್ಟ್ರ ಮತ್ತು ರಾಜ್ಯದ ಕೆಲ ನಾಯಕರಮಟ್ಟದಲ್ಲಿ ಚರ್ಚೆ ಯಾಗಿದೆ. ನಂತರವೇ ಒಂದು ವರ್ಷದ ಸಾಧನೆ ಕಿರು ಹೊತ್ತಗೆ ಬಿಡುಗಡೆ ಕೈಬಿಡಲಾಯಿತು ಎಂದು ಮೂಲಗಳು ಹೇಳಿವೆ. ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯ ಎರಡು ಮತ್ತು ಬೊಮ್ಮಾಯಿ ಸಾರಥ್ಯದ ಒಂದು ವರ್ಷದ ಸಾಧನೆಯನ್ನು ಸೇರಿಸಿ ಜನರ ಮುಂದೆ ‘ರಿಪೋರ್ಟ್ ಕಾರ್ಡ್’ ಮಂಡನೆಗೆ ಒತ್ತು ನೀಡಲಾಗಿದೆ.
ಪೂರ್ವಸಿದ್ಧತೆಗೆ ಚಾಲನೆ:ಸಿಎಂ ಬೊಮ್ಮಾಯಿ ಸೂಚನೆಯಂತೆ ಸರ್ಕಾರ ಮತ್ತು ಪಕ್ಷದಲ್ಲಿ ಪೂರ್ವಭಾವಿ ಸಿದ್ಧತೆಗಳಿಗೆ ಮತ್ತೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಕಾರ್ಯಕ್ರಮದ ರೂಪರೇಷೆಗೆ ರಾಷ್ಟ್ರೀಯ ನಾಯಕರು ಅಸ್ತು ಎಂದ ಬಳಿಕ ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷರು ಜಂಟಿಯಾಗಿ ಈ ಮಾಹಿತಿ ಪ್ರಕಟಿಸುವ ಸಾಧ್ಯತೆಗಳಿವೆ.
2 ಹಂತಗಳಲ್ಲಿ ಆಯೋಜನೆ:ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳ ಪ್ರಚಾರದ ಜತೆಗೆ ವಿವಿಧ ಯೋಜನೆಗಳ ಮಾಹಿತಿ ನೀಡುವ ಜನೋತ್ಸವ ಸಮಾವೇಶಗಳು ಎರಡು ಹಂತಗಳಲ್ಲಿ ನಡೆಯಲಿವೆ. ಮೊದಲ ಹಂತದಲ್ಲಿ 15 ಜಿಲ್ಲೆಗಳನ್ನು ಜನೋತ್ಸವಕ್ಕೆ ಆಯ್ದುಕೊಳ್ಳಲಾಗುತ್ತಿದ್ದು, ವಾರಕ್ಕೊಂದು ಜಿಲ್ಲೆಗೆ ಸಮಾವೇಶ ಹಂಚಿಕೆಯಾಗುವ ನಿರೀಕ್ಷೆಯಿದೆ. ಸರ್ಕಾರ, ಪಕ್ಷದಲ್ಲಿ ಉತ್ಸಾಹ ಹೆಚ್ಚಿಸುವ ಜತೆಗೆ ಸಂಘಟನೆ ದುರ್ಬಲವಾಗಿರುವ ಜಿಲ್ಲೆಗಳಲ್ಲಿ ಮೊದಲು ‘ಜನೋತ್ಸವ’ ಸಂಘಟಿಸುವ ಯೋಚನೆಯಿದೆ ಎಂದು ಮೂಲಗಳು ವಿವರಿಸಿವೆ.
ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಸಾವು!?; ಯುವಕನ ಸಾವಿನ ತನಿಖೆಗೆ ಆದೇಶಿಸಿದ ಸರ್ಕಾರ..

ಪವರ್​ಲಿಫ್ಟಿಂಗ್​ನಲ್ಲಿ ಇವರು ಬೆಂಗಳೂರಿನ ಸ್ಟ್ರಾಂಗ್ ಮ್ಯಾನ್ & ಸ್ಟ್ರಾಂಗ್ ವುಮನ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
