ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದ ಪರಿಗಿಂತ ಬಿಜೆಪಿಯೊಂದಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜುಗಲ್ಬಂದಿ ರಾಜ್ಯ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಮಾಡಿರುವ ಘೋಷಣೆ ಮುಂದಿನ ಬೆಳವಣಿಗೆಗಳಿಗೆ ರಹದಾರಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ನೀತಿ-ನಿರ್ಧಾರಗಳ ವಿರುದ್ಧ ಎಚ್​ಡಿಕೆ ಪ್ರಾರಂಭಿಕವಾಗಿ ದೊಡ್ಡಧ್ವನಿ ಎತ್ತಿ, ವರ್ಗಾವಣೆ ದಂಧೆಯ ‘ಪೆನ್​ಡ್ರೖೆವ್’ ವಿಷಯ ಸ್ಪೋಟಿಸಿ ಸಂಚಲನ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಅದಾದ ಬಳಿಕ ಸರ್ಕಾರದ ಪ್ರತಿ ನಡೆಗೆ ಕಟು ವಿರೋಧ, ಸದನದಲ್ಲಿ ತೀವ್ರ ವಾಗ್ದಾಳಿ ಮೂಲಕ ಪ್ರತಿಪಕ್ಷ ನಾಯಕರಿಲ್ಲದ ಕೊರತೆ ತುಂಬಿಕೊಟ್ಟಿದ್ದರು. ವಿಧಾನಮಂಡಲದಲ್ಲಿ ಅಧಿಕೃತ ಪ್ರತಿಪಕ್ಷವಾದ ಬಿಜೆಪಿಗೆ ತನ್ನ ನಾಯಕ ಯಾರು? ಎಂದು ತಿಳಿದಿಲ್ಲ. ಆದರೆ ಸರ್ಕಾರಕ್ಕೆ ಕುಟುಕುವ, ತಿವಿಯುವ ಕೆಲಸವನ್ನು ಕುಮಾರಸ್ವಾಮಿ ನಿರ್ವಹಿಸಿ, ಅಧಿವೇಶನದಲ್ಲಿ ಕಮಲಪಡೆಯನ್ನು ಇಕ್ಕಟ್ಟಿನಿಂದ ಪಾರು ಮಾಡಿದ್ದಾರೆ.
ಒಂದು ಹೆಜ್ಜೆ ಮುಂದೆ:ಅಧಿಕಾರಿಗಳ ವರ್ಗಾವಣೆ, ವಿಪಕ್ಷಗಳ ಒಕ್ಕೂಟದ ನಾಯಕರ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ತನಕ ಸರ್ಕಾರದ ವಿರುದ್ಧ ಹರಿಹಾಯುವಲ್ಲಿ ಎಚ್​ಡಿಕೆ ಮುಂದಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದ ಕೆಲ ರಾಜಕೀಯ ನಾಯಕರು ಕುಮಾರಸ್ವಾಮಿ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಮಾಡಿ ಎಂದು ಬಿಜೆಪಿಯನ್ನು ಕಾಲೆಳೆದದ್ದೂ ಆಯಿತು. ಈ ನಡೆಯ ಬಗ್ಗೆ ಬಹಿರಂಗ ಚರ್ಚೆ, ಪ್ರಶ್ನೆಗಳು ಹಾಗೂ ಜೆಡಿಎಸ್​ನ ಆಂತರಿಕ ವಿರೋಧಕ್ಕೆ ಎಚ್.ಡಿ. ಕುಮಾರಸ್ವಾಮಿ ವಿಚಲಿತರಾದಂತಿಲ್ಲ. ಕುಮಾರಸ್ವಾಮಿ ಎತ್ತಿದ ವಿಚಾರಗಳನ್ನಿಟ್ಟು ಬಿಜೆಪಿ ಮುಂದಿನ ಹೋರಾಟ ರೂಪಿಸಿದ ಪರಿಣಾಮ ವಿಧಾನಸಭೆಯಲ್ಲಿ 10 ಶಾಸಕರು ಅಮಾನತು ಆದರು. ಆಗಿನಿಂದ ಜಂಟಿ ಸುದ್ದಿಗೋಷ್ಠಿ ನಡೆಸುವ ತನಕ ಕುಮಾರಸ್ವಾಮಿ ಬಿಜೆಪಿ ಜತೆಗೆ ಸೇರಿರುವುದು ಚರ್ಚೆಯ ವಿಷಯವಾಗಿದೆ.
ದೇವೇಗೌಡರು ಜೆಡಿಎಸ್ ನಿಲುವು ಸ್ಪಷ್ಟಪಡಿಸಿದ ಹೊರತಾಗಿಯೂ ತನ್ನ ಧಾಟಿ, ನಡೆಯಲ್ಲೇನೂ ಕುಮಾರಸ್ವಾಮಿ ಬದಲಾವಣೆ ಮಾಡಿಕೊಂಡಿಲ್ಲ. ‘ಅಲ್ಲೇ ಡ್ರಾ, ಅಲ್ಲೇ ಬಹುಮಾನ’ ಎಂಬುದು ಎಚ್​ಡಿಕೆ ನಿಲುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಂಖ್ಯಾಬಲ, ಮತಗಳಿಕೆ ಸಾಧನೆ ಹೇಳಿಕೊಳ್ಳುವಂತಿಲ್ಲ. ಭದ್ರಕೋಟೆಯೊಳಗೆ ಬಿರುಕು, ಕೆಲವು ಸಮುದಾಯಗಳ ಪಲ್ಲಟದಿಂದ ಎಚ್​ಡಿಕೆ ಆಂತರಿಕವಾಗಿ ಅನುಭವಿಸುತ್ತಿರುವ ನೋವು, ಬಿಜೆಪಿ ಜತೆಗೆ ಸ್ನೇಹಹಸ್ತ ಚಾಚುವ ಮುಖೇನ ಹೊರಹಾಕಿದ್ದಾರೆ. ಪಕ್ಷದ ಅಸ್ತಿತ್ವ, ಭವಿಷ್ಯದ ದೃಷ್ಟಿ ದೇವೇಗೌಡರದ್ದಾಗಿದ್ದರೆ, ಏಟಿಗೆ ಎದಿರೇಟು ನೀಡಿದರಷ್ಟೇ ಪಕ್ಷ ಉಳಿದು ಬೆಳೆಯಲಿದೆ ಎಂಬ ಮನಸ್ಥಿತಿ ಎಚ್​ಡಿಕೆಯದಾಗಿದೆ. ಜೆಡಿಎಸ್​ನ ಒಂದಿಷ್ಟು ಮತಗಳು ಕಾಂಗ್ರೆಸ್​ಗೆ ಹಂಚಿ ಹೋಗಿದ್ದರಿಂದ ತನಗೆ ನಷ್ಟವಾಯಿತು ಎಂದು ಅರಿತ ಬಿಜೆಪಿ ರಾಜ್ಯ ನಾಯಕರಿಗೆ ಈ ಸಖ್ಯ ಬೇಕಾಗಿದೆ.
ಪಾಬಂದಿ:ಕಲಾಪ ಬಹಿಷ್ಕಾರ, ರಾಜ್ಯಪಾಲರಿಗೆ ದೂರು ನಂತರ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಸರ್ಕಾರದ ವಿರುದ್ಧ ಸದನದೊಳಗೆ ಜಂಟಿಯಾಗಿ ಹೋರಾಡುತ್ತೇವೆ ಎಂದು ನಾಯಕರಿಬ್ಬರೂ ಪ್ರಕಟಿಸುವ ಮೂಲಕ ಜುಗಲ್ಬಂದಿಯನ್ನು ಮತ್ತಷ್ಟು ಪಾಬಂದಿ ಮಾಡಿಕೊಂಡಿದ್ದಾರೆ. ನೈಸ್ ಅಕ್ರಮಗಳನ್ನು ಇಬ್ಬರೂ ಬಿಡಿಸಿಟ್ಟರು. ನೈಸ್ ಅಕ್ರಮದ ವಿರುದ್ಧದ ಹೋರಾಟ ಹಲವಾರು ಮಜಲುಗಳನ್ನು ಮುಟ್ಟಲಿದೆ ಎಂದಿದ್ದಾರೆ. ಈ ಯೋಜನೆ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಏನೆಲ್ಲ ಕಷ್ಟ-ಕಾರ್ಪಣ್ಯ ಅನುಭವಿಸಿದ್ದಾರೆ ಎಂದು ಎಚ್​ಡಿಕೆ ವಿವರಿಸಿದರು. ಜತೆಗೆ ಕಾನೂನು ಹೋರಾಟದಲ್ಲಿ ಸರ್ಕಾರ ಜಯ ಗಳಿಸುವುದರಲ್ಲಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಮಾಡಿದ ಪ್ರಯತ್ನವನ್ನೂ ಶ್ಲಾಘಿಸಿದರು. ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಎಚ್​ಡಿಕೆ ಪ್ರತಿಕ್ರಿಯಿಸಿ, ದೇವೇಗೌಡರು ಏನೇ ಹೇಳಿದ್ದರೂ ಮೈತ್ರಿ ವಿಚಾರ ಇನ್ನೂ ಜೀವಂತವಾಗಿದೆ ಎಂಬ ಸುಳಿವು ನೀಡಿದರು.
ನೈಸ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ನಮ್ಮ ಕಾಲದಲ್ಲಿ ಅನೇಕ ಕ್ರಮಗಳಾಗಿವೆ. ಆ ನಿಟ್ಟಿನಲ್ಲಿ ಜೆಡಿಎಸ್-ಬಿಜೆಪಿ ಒಂದಾಗಿ ಹೋರಾಟ ಮಾಡಲು ನಿರ್ಧರಿಸಿವೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಬದಲಿಗೆ ಅನೇಕ ತಿರುವುಗಳು ಇರುತ್ತವೆ. ಸರ್ಕಾರದ ನಿಲುವೇನೆಂದು ತಿಳಿಯಲಿದೆ.
| ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆಗೆ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಈಗ ಬ್ರಾ್ಯಂಡ್ ಬೆಂಗಳೂರು ಜಪ ಮಾಡುತ್ತಿರುವವರೇ ಈ ಹಿಂದೆ ನೈಸ್​ನೊಳಕ್ಕೆ ನೈಸಾಗಿ ಸೇರಿಕೊಂಡು ಸಹಕರಿಸಿದ್ದರು.
| ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಜೆಡಿಎಸ್ ನಾಗವಲ್ಲಿ ನಡೆ:ಬಿಜೆಪಿ- ಜೆಡಿಎಸ್ ಹೊಸ ಸಖ್ಯವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ? ಎಂದು ಕೇಳಿದೆ. ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಬದಲಾಗುತ್ತಿರುವುದು ಕಾಣುತ್ತಿದೆ. ಥೇಟ್ ನಾಗವಲ್ಲಿಯ ಥರ ಎಂದು ವ್ಯಂಗ್ಯವಾಡಿದೆ.
ನಿಚ್ಚಳ, ಮುಗುಂ:ವಿಪಕ್ಷಗಳ ನಾಯಕರ ಒಕ್ಕೂಟದ ಸಭೆ ಬೆಂಗಳೂರಿನಲ್ಲಿ ನಡೆದ ದಿನವೇ ಅತ್ತ ಎನ್​ಡಿಎ ಮೈತ್ರಿಕೂಟದ ಸಭೆ ಆಯೋಜನೆಯಾಗಿತ್ತು. ಬಿಜೆಪಿ ವರಿಷ್ಠರಿಂದ ಬುಲಾವ್ ಬಂದಿದ್ದು, ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದಾರೆ ಎಂಬ ವದಂತಿಗೆ ಸ್ವತಃ ಎಚ್​ಡಿಕೆ ತೆರೆ ಎಳೆದಿದ್ದರು. ಒಕ್ಕೂಟಗಳ ಸಭೆಗೆ ಕರೆ ಬಂದಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದಿದ್ದರು. ಆದರೂ, ಕಾಂಗ್ರೆಸ್, ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವ ದೇವೇಗೌಡರ ಲೆಕ್ಕಾಚಾರ ತಲೆಕೆಳಗಾಗಿದೆ. ಬಿಜೆಪಿ ರಾಜ್ಯ ನಾಯಕರ ಜತೆಗೆ ಹತ್ತಿರವಾಗುತ್ತಿದ್ದರೂ ದೆಹಲಿ ನಾಯಕರ ಮನದಲ್ಲೇನಿದೆ ಎಂಬುದು ತಿಳಿದಿಲ್ಲ. ಈ ಕಾರಣಕ್ಕೆ ಎಚ್.ಡಿ. ದೇವೇಗೌಡ ಪಕ್ಷದ ನಿಲುವು ನಿಚ್ಚಳಗೊಳಿಸಿದ್ದಾರೆ. ಐಎನ್​ಡಿಐಎ ಹಾಗೂ ಎನ್​ಡಿಒ ಒಕ್ಕೂಟಕ್ಕೆ ಸೇರುವುದಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆಯಲು ಹೋರಾಡಲಿದೆ ಎಂದು ದೇವೇಗೌಡ ಸಾರಿದ್ದಾರೆ. ಆ ಮೂಲಕ ಎಚ್​ಡಿಕೆ ನಡೆಗೆ ಪಕ್ಷದೊಳಗೆ ಬುಸುಗುಡುತ್ತಿರುವ ಅಸಮಾಧಾನ ಶಮನ, ಲೋಕಸಭೆ ಚುನಾವಣೆ ಪೂರ್ವ, ನಂತರದ ಬೆಳವಣಿಗೆ ಅವಲೋಕಿಸಿ ಹೆಜ್ಜೆಯಿಡುವ ಸೂಕ್ಷ್ಮತೆ ಮೆರೆದಿದ್ದಾರೆ.
2. ಸದನದ ಹೊರ-ಒಳಗೆ ವರ್ಗಾವಣೆ ವ್ಯವಹಾರದ ವಿರುದ್ಧ ಬಿಜೆಪಿ ಗುಡುಗು
3. ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ಬಳಕೆಗೆ ಎಚ್​ಡಿಕೆ ಆಕ್ಷೇಪ
4. ಎಪಿಎಂಸಿ ಬಿಲ್​ಗೆ ವಿಧಾನ ಪರಿಷತ್​ನಲ್ಲಿ ಬಿಜೆಪಿ ವಿರೋಧ, ಜೆಡಿಎಸ್ ಬೆಂಬಲ
5. ಐಎಎಸ್ ಅಧಿಕಾರಿಗಳ ನಿಯೋಜನೆ ವಿರೋಧಿಸಿ ವಿಧಾನಸಭೆಯಲ್ಲೇ ಬಿಜೆಪಿ ಹೋರಾಟ
6. ವಿಧಾನಸಭೆಯಿಂದ ಬಿಜೆಪಿ 10 ಶಾಸಕರ ಅಮಾನತಿಗೆ ಎಚ್​ಡಿಕೆ ತೀವ್ರ ಆಕ್ರೋಶ
7. ಸರ್ಕಾರ, ಸ್ಪೀಕರ್ ನಡೆ ಖಂಡಿಸಿ ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ಜಂಟಿ ದೂರು
8. ಸರ್ಕಾರದ ವಿರುದ್ಧ ಸದನದಲ್ಲಿ ಜಂಟಿ ಹೋರಾಟ, ಎಚ್​ಡಿಕೆ- ಬೊಮ್ಮಾಯಿ ಪ್ರಕಟ
9. ನೈಸ್ ರಸ್ತೆ ಯೋಜನೆ ಮುಟ್ಟುಗೋಲು, ಉನ್ನತಮಟ್ಟದ ತನಿಖೆಗೆ ಜಂಟಿ ಒತ್ತಾಯ
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
