ಬೆಂಗಳೂರು:ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು ಆತ್ಮಹತ್ಯೆ ಕೇಸ್​ನಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರೇಯಸಿ ರೇಖಾ, ಬ್ಯಾಡರಹಳ್ಳಿ ಪೊಲೀಸ್ ಠಾಣೆ ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಾನು ಹನಿಟ್ರ್ಯಾಪ್ ಮಾಡಿಲ್ಲ. ಎಲ್ಲರೂ ಹನಿಟ್ರ್ಯಾಪ್ ಹನಿಟ್ರ್ಯಾಪ್​ ಅಂತಾ ಹೇಳ್ತಾರೆ. ನನಗೆ ನ್ಯಾಯ ಸಿಗ್ತಿಲ್ಲ… ಎಂದು ಕಣ್ಣೀರಿಡುತ್ತಲೇ ಮಟಮಟ ಮಧ್ಯಾಹ್ನವೇ ಬಸ್​ಗೆ ಅಡ್ಡ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ನಂತರ ಸ್ಥಳದಲ್ಲಿದ್ದ ಮಾಧ್ಯಮದವರು ರೇಖಾರನ್ನು ರಕ್ಷಣೆ ಮಾಡಿ ಮನವೊಲಿಸಿದರು.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು​, ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಥೈರಾಯಿಡ್​ ಸಮಸ್ಯೆಯಿಂದ ಸಾವಿನ ನಿರ್ಧರಕ್ಕೆ ಬಂದಿದ್ದಾರೆ ಎಂದು ಮೊದಲು ದೂರು ನೀಡಲಾಗಿತ್ತು. ಆನಂತರ ಪತ್ನಿ ಸುಮಾ, ನನ್ನ ಗಂಡನನ್ನು ಹನಿಟ್ರ್ಯಾಪ್​ ಮಾಡಿ ಕೊಂದಿದ್ದಾರೆ. ಕೆ.ಆರ್​. ಪುರದ ರೇಖಾ, ಈಕೆಯ ಪತಿ ವಿನೋದ್​ ಮತ್ತು ಸ್ನೇಹಿತೆ ಸ್ಪಂದನಾಳ ಕಿರುಕುಳ ಸಹಿಸಲಾಗದೆ ನನ್ನ ಗಂಡ ಸತ್ತಿದ್ದಾರೆ ಎಂದು ದೂರು ನೀಡಿದ್ದರು.
ಇದರ ಆಧಾರದ ಮೇಲೆ ರೇಖಾಳನ್ನು ಪೊಲೀಸರು ಬಂಧಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಬುಧವಾರ ಆಡಿಯೋವೊಂದು ವೈರಲ್​ ಆಗಿತ್ತು. ‘ನಾನೇ ಅನಂತರಾಜುಗೆ ಟಾರ್ಚರ್​ ಕೊಟ್ಟು ಸಾಯ್ತೀನಿ. ನಾನು ಕೊಡೋ ಟಾರ್ಚರ್​ಗೆ ಹಾರ್ಟ್​ಅಟ್ಯಾಕ್​ ಆಗಿ ಅವನು ಸಾಯ್ಬೇಕು’ ಎಂದು ಫೋನ್​ನಲ್ಲಿ ರೇಖಾಗೆ ಸುಮಾ ಆಕ್ರೋಶದಿಂದ ಹೇಳುತ್ತಾ ಗಂಡನಿಗೆ ಬೈಯ್ಯುತ್ತಾ ಹೊಡೆಯುತ್ತಿದ್ದ ಹಿನ್ನೆಲೆ ಈ ಆಡಿಯೋದಲ್ಲಿತ್ತು. ‘ಪ್ಲೀಸ್​ ಸುಮಾ… ಅವರಿಗೆ ಏನೂ ಮಾಡ್ಬೇಡ ಸುಮಾ, ನಿನ್ನ ಕಾಲು ಹಿಡ್ಕೋತೀನಿ ಸುಮಾ, ಐ ವೆರಿ ಸಾರಿ ಸುಮಾ, ನಾನು ದೂರ ಇರ್ತೀನಿ. ಪ್ಲೀಸ್​ ಸುಮಾ ಅವರಿಗೆ ಏನು ಮಾಡ್ಬೇಡ’ ಎಂದು ರೇಖಾ ಕಣ್ಣೀರು ಹಾಕುತ್ತಾ ಗೋಗರೆದರೂ ಸುಮಾ, ‘ಅವನು ಸಾಯಬೇಕು’ ಎನ್ನುವುದು ಆಡಿಯೋದಲ್ಲಿತ್ತು.
ಇದರ ಬೆನ್ನಲ್ಲೇ 2ನೇ ಆಡಿಯೋ ವೈರಲ್​ ಆಗಿದ್ದು, ಇದು ಕೂಡ ಅನಂತರಾಜ್​ ಪತ್ನಿ ಸುಮಾ ಮತ್ತು ರೇಖಾ ನಡುವಿನ ಸಂಭಾಷಣೆಯಾಗಿತ್ತು. ಅನಂತರಾಜ್​ಗೆ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಕೇಳಿಬಂದಿದೆ. ಅನಂತ್​ಗೆ ಯಾವುದೇ ಕಿರುಕುಳ ಕೊಡಬೇಡ. ನನಗೆ ಕೊಡು ನಾನು ದೂರ ಆಗುತ್ತೇನೆ ಎಂದು ರೇಖಾ ಗೋಗರೆಯುತ್ತಾಳೆ. ಇದಕ್ಕೆ ಅನಂತರಾಜು ಪತ್ನಿ, ಈಗಾಗಲೇ ಕೈ ಮುರಿದು, ಎದೆಗೆ ಹಲ್ಲೆ ನಡೆಸಿ ಆಸ್ಪತ್ರೆಗೆ ಸೇರಿಸಿದ್ದೆ. ಬೇಕಾದರೆ ವಾರ್ಡ್​ನ ಜನರನ್ನು ಕೇಳು. ನಂಬಿಕೆ ಇಲ್ಲವಾದರೆ, ವಿಡಿಯೋ ಕಾಲ್​ ಮಾಡಿ ಮಾತನಾಡು ಎಂದು ಸುಮಾ, ಹೇಳುವ ಮಾತುಗಳು ಆಡಿಯೋದಲ್ಲಿತ್ತು.
ಇದೀಗ ರೇಖಾ, ನನ್ನ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಸಿಎಂ ಬಸವರಾಜು ಬೊಮ್ಮಾಯಿ ಮತ್ತು ಗೃಹ ಸಚಿವರು ನನಗೆ ನ್ಯಾಯ ಕೊಡಿಸಬೇಕು. ಅನಂತರಾಜು ಮತ್ತು ನಾನು 6 ವರ್ಷ ಲಿವಿಂಗ್​ ರಿಲೇಷನ್​ನಲ್ಲಿ ಇದ್ದೆವು. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು. ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಗೋಳಾಡುತ್ತಲೇ ಬಸ್​ಗೆ ಸಿಕ್ಕಿ ಸಾಯಲು ರೇಖಾ ಯತ್ನಿಸಿದರು.
ಇಬ್ಬರ ಪ್ರಾಣ ತೆಗೆದ ವಿಷದ ತಂಬಿಗೆ! ಚಿಕ್ಕಮ್ಮ ವಿಷ ಕುಡಿದ ತಂಬಿಗೆಯಲ್ಲಿ ನೀರು ಕುಡಿದ ಪುಟ್ಟ ಕಂದನೂ ಬದುಕಲಿಲ್ಲ…

ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
