ಬೆಂಗಳೂರು:ಗ್ಯಾರಂಟಿ ಕಾರ್ಡ್‌ಗಳ ಬೋರ್ಡ್ ಹಾಕಿಕೊಂಡು ವೋಟು ಕೇಳುವ ದಯನೀಯ ಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದನಾಂದಗೌಡ ಲೇವಡಿ ಮಾಡಿದರು.
ಬೆಂಗಳೂರಿನ ಸಹಕಾರನಗರದ ಆಟದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಮೋರ್ಚಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಸಾಧುವಲ್ಲದ ಭರವಸೆಗಳನ್ನು ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿದೆ ಎಂದು ಟೀಕಿಸಿದರು.
ಈ ಗ್ಯಾರಂಟಿಗಳ ಕಾರ್ಡ್‌ನ್ನು ಮನೆಗಳಿಗೆ ಹಂಚಲು ಮುಂದಾಗಿದೆ. ಈ ಬೋರ್ಡ್ ಜತೆಗೆ ಸೋಲುವುದೂ ಗ್ಯಾರಂಟಿ ಎಂಬ ಬೋರ್ಡ್ ಹಾಕಲು ಕಾಂಗ್ರೆಸ್‌ನವರು ಮರೆತಿದ್ದೂ, ಅದನ್ನೂ ಹಾಕಬೇಕು ಎಂದು ಡಿ.ವಿ.ಸದಾನಂದಗೌಡ ಕಾಲೆಳೆದರು.
ಇದನ್ನೂ ಓದಿ:ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!
ವಿಶ್ವಾಸಬಿಜೆಪಿ ಕೇಂದ್ರೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ, ಬ್ಯಾಟರಾಯನಪುರ ಸೇರಿ 150 ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸಾಧನೆಗಳು, ಕೇಂದ್ರ ಸರ್ಕಾರ ನೀಡಿದ ಯೋಜನೆಗಳು, ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಿದ್ದೇವೆ. ವಿಜಯಸಂಕಲ್ಪ ಯಾತ್ರೆಗಳಿಗೆ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ಪಕ್ಷದ ರಾಜ್ಯಾಧ್ಯಕ್ಷ ಪುನರುಚ್ಚರಿಸಿದರು.
ನೋಟಿಸ್​ ಜಾರಿ ಮಾಡಿದ್ರೂ ಬಾರದ ಉತ್ತರ: ರಾಹುಲ್​ ಗಾಂಧಿ ಮನೆ ತಲುಪಿದ ದೆಹಲಿ ಪೊಲೀಸರು

ದೂರವೇ ವರನಿಗೆ ಶಾಪವಾಯ್ತು! ಮದ್ವೆ ಮುಗಿಸಿ ಅತ್ತೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಶಾಕ್​ ಕೊಟ್ಟ ವಧು

ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 18 =
Remember me
