ಧಾರವಾಡ:ಎಗ್​ರೈಸ್ ಅಂಗಡಿ ಇಡುವ ವಿಚಾರಕ್ಕೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡನೊಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ ಪ್ರಕರಣವೊಂದು ನಡೆದಿದೆ.
ಬಿಜೆಪಿ ಮುಖಂಡ ನಾಗಪ್ಪ ಗಾಣಿಗೇರ ಎಂಬಾತ ಪಿಸ್ತೂಲ್ ತೋರಿಸಿ ಬೆದರಿಸಿದ್ದಾಗಿ, ಮಡಿವಾಳೆಪ್ಪ ಬೆಳವಲದ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಧಾರವಾಡ ತಾಲೂಕಿನ ಹೊಸ ತೆಗೂರ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎಗ್​ರೈಸ್​ ಅಂಗಡಿ ಇಡುವ ವಿಷಯವಾಗಿ ನಾಗಪ್ಪ ಗಾಣಿಗೇರ ಮತ್ತು ಮಲಿಕ್ ಮಧ್ಯೆ ತಕರಾರಿತ್ತು. ಇವರಿಬ್ಬರ ಜಗಳವನ್ನು ಬಗೆಹರಿಸುವ ಸಲುವಾಗಿ ಹಿರಿಯರಾದ ಮಡಿವಾಳೆಪ್ಪ ಬೆಳವಲದ ಮಧ್ಯಸ್ಥಿಕೆ ವಹಿಸಿದ್ದರು.
ಇದನ್ನೂ ಓದಿ:ಮೋದಿಯ ಆ ನಡೆಗೆ ಖುಷಿಯಾದ ಮಾಜಿ ಪ್ರಧಾನಿ; ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸಿದ ಎಚ್​.ಡಿ.ದೇವೇಗೌಡ
ಜಗಳ‌ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿರುವ ಮಡಿವಾಳೆಪ್ಪ ವಿರುದ್ಧ ದ್ವೇಷ ಹೊಂದಿದ್ದ ನಾಗಪ್ಪ, ಪಿಸ್ತೂಲ್ ತೋರಿಸಿ ಜೀವಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಮಡಿವಾಳೆಪ್ಪ ದೂರು ನೀಡಿದ್ದಾರೆ.
ಟೋಯಿಂಗ್​ಗೆ ಬಂದಿದ್ದವರನ್ನು ತರಾಟೆಗೆ ತಗೊಂಡ ಜನರು; ಟೋ ಮಾಡದೆ ವಾಪಸ್ ಹೋದ ಪೊಲೀಸರು

ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 2 =
Remember me
