ವಿಜಯಪುರ:ಪಂಚಮಸಾಲಿ‌ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವ ಕೂಗು ಅನೇಕ ಕಾಲದಿಂದ ಕೇಳಿ ಬರುತ್ತಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದೆ. ವಿಜಯಪುರದಲ್ಲಿ ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇಂದು ಹೇಳಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಟಾಂಗ್​ ನೀಡುತ್ತಾ ಮಾತನಾಡಿದ ಯತ್ನಾಳ್ ‘ಮೊನ್ನೆ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು ಮೊದಲ‌ ಹೆಜ್ಜೆ. ಇನ್ನು ಎರಡನೇ ಹೆಜ್ಜೆಯಾಗಿ ಹಿಂದುಳಿದ ವರ್ಗಕ್ಕೆ ಅನೇಕ ಸಮುದಾಯಗಳನ್ನು ಸೇರಿಸಬೇಕಾಗಿದೆ. ತಳವಾರ ಸಮುದಾಯದ ಬಗ್ಗೆ ವಿಧಾನಸಭೆಯಲ್ಲಿ ನಾವು ಹೋರಾಟ ಮಾಡಿದ್ದೆವು. ಇವತ್ತು ಅವರಿಗೆ ಸರ್ಟಿಫಿಕೇಟ್ ಕೊಡ್ತಿದ್ದಾರೆ. ಮುಂದೆ ಹಾಲುಮತ ಸಮಾಜ ಎಸ್.ಟಿ ವರ್ಗಕ್ಕೆ ಹೋಗುವುದರ ಬಗ್ಗೆ ನಿರ್ಣಯ ಆಗಬೇಕಿದೆ. ಸಿದ್ಧರಾಮಯ್ಯ ಯಾವ ರೀತಿ ಮೇಲ್ಜಾತಿಯವರನ್ನು ದ್ವೇಷ ಮಾಡ್ತಾರೆ ನೋಡಿ’ ಎಂದು ಕಾಲೆಳೆದಿದ್ದಾರೆ.ಬಡತನದ ಬಗ್ಗೆ ಮಾತನಾಡುತ್ತಾ ಯತ್ನಾಳ್ ‘ಒಬಿಸಿ ಸಮುದಾಯಕ್ಕೆ ಶೇಕಡ ಹತ್ತು ಮೀಸಲಾತಿ ಕೊಟ್ರೆ ಇವರಿಗೆ ಏನು ಬ್ಯಾನಿ(ನೋವು) ಆಗುತ್ತೆ? ಲಿಂಗಾಯತ, ಬ್ರಾಹ್ಮಣ, ಮರಾಠ, ರಜಪೂತ, ವಿಶ್ವಕರ್ಮ ಸಮಾಜಗಳಲ್ಲಿ ಬಡತನ ಇಲ್ವಾ? ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಅಂದರೆ ಎಲ್ಲರೂ ಟಾಟಾ, ಬಿರ್ಲಾ ಅಲ್ಲ. ಎಲ್ಲಾ ಸಮುದಾಯಗಳಿಗೆ ಪ್ರಧಾನಿ ಮೋದಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಎಂದು ಶೇಕಡ ಹತ್ತು ಮೀಸಲಾತಿ ಕೊಟ್ಟಿದ್ದಾರೆ. ಬ್ರಾಹ್ಮಣರಲ್ಲಿ ಮೂರು ಸಾವಿರಕ್ಕೆ ಜೀವನ ಮಾಡುವಷ್ಟೂ ಬಡವರು ಇದ್ದಾರೆ. ಸಮುದಾಯದಲ್ಲಿರುವ ಬಡವರಿಗೆ ಕೊಟ್ಟಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ’ ಎಂದು ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
