ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಅಕ್ರಮದ ವಿರುದ್ಧ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಶುಕ್ರವಾರ ಹೋರಾಟ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ಮುಖಂಡರು ತಡೆದು, ತಮ್ಮ ವಶಕ್ಕೆ ಪಡೆದರು. ಇದಕ್ಕೂ ಮುನ್ನ ಸ್ವಲ್ಪ ಹೊತ್ತು ಹೈಡ್ರಾಮಾ ನಡೆಯಿತು.
ಬೆಂಗಳೂರಿನಿಂದ ವಾಹನಗಳ ರ‌್ಯಾಲಿ ಮುಖೇನ ಮೈಸೂರಿಗೆ ತೆರಳಲಿದ್ದಾರೆ ಎಂಬ ವಿಷಯ ತಿಳಿದ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದರು. ಬಿಜೆಪಿಯ ಹಲವು ಮುಖಂಡರ ಮನೆಗಳು, ಬೆಂಗಳೂರು- ಮೈಸೂರು ಹೆದ್ದಾರಿಯ ಆಯ್ದ ಸ್ಥಳಗಳಲ್ಲಿ ಸರ್ಪಗಾವಲು ಹಾಕಿದ್ದರು. ಪಕ್ಷದ ದಾಸರಹಳ್ಳಿ ಶಾಸಕ ಮುನಿರಾಜು ನಿವಾಸದ ಬಳಿಯೇ ಅವರನ್ನು ವಶಕ್ಕೆ ಪಡೆದರು.
ಕೆಂಗೇರಿ ಸಮೀಪದಲ್ಲಿ ನೆರೆದ ಕಾರ್ಯಕರ್ತರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಮುನಿರತ್ನ ಮತ್ತಿತರ ಮುಖಂಡರು ಧಾವಿಸಿದರು. ಜಮಾಯಿಸಿದ್ದ ಕಾರ್ಯಕರ್ತರನ್ನು ಬಿ.ವೈ.ವಿಜಯೇಂದ್ರ ಮಾತನಾಡಿ ಮುಡಾ ಅಕ್ರಮದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಪರವಾಗಿ ಜಯಕಾರ ಮೊಳಗಿಸಿದರೆ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು. ಪೊಲೀಸರು ತಡೆಯನ್ನು ಲೆಕ್ಕಿಸದೆ ಮೈಸೂರಿಗೆ ಪ್ರಯಾಣ ಬೆಳೆಸಲು ಮುಂದಾದರು.
ಆದರೂ ವಿಜಯೇಂದ್ರ, ಶಾಸಕರು, ಮುಖಂಡರ, ಕಾರ್ಯಕರ್ತರಿಗೆ ಪೊಲೀಸ್ ಬಿಗಿ ಕಾವಲು ಬೇಧಿಸಿ ಮುಂದಕ್ಕೆ ಹೋಗುವುದು ದುಸ್ತರವಾಯಿತು. ಬೆಂಗಳೂರು- ಮೈಸೂರು ಎಕ್ಸಪ್ರೆಸ್ ಹೆದ್ದಾರಿಯ ಕಣಮಿಣಿಕೆ ಟ್ರೋಲ್ ಬಳಿ ಕೇಸರಿ ಪಡೆ ಹಠಾತ್ ಸಂಚಾರ ತಡೆ ಚಳವಳಿ ನಡೆಸಿತು. ನಂತರ ಪೊಲೀಸರು ಪ್ರತಿಭಟನಾ ನಿರತರು, ಮುಖಂಡರನ್ನು ಬಂಧಿಸಿ ಮುಂಚಿತವಾಗಿ ತಂದು ನಿಲ್ಲಿಸಿದ್ದ ನಗರ ಸಾರಿಗೆ ಬಸ್  ಗಳಲ್ಲಿ ಬಿಡದಿ ಪೊಲೀಸ್ ಠಾಣೆಗೆ ಕರೆತಂದರು.
ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ ಮುಡಾ ಅಕ್ರಮದ ವಿರುದ್ಧ ಪಕ್ಷ ನಡೆಸಿರುವ ಹೋರಾಟವನ್ನು ಪೊಲೀಸ್ ಬಲ ಬಳಸಿ ರಾಜ್ಯ ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಈ ಅಕ್ರಮವು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖವಾಡ ಕಳಚಿದೆ. ಒಂದೆಡೆ ದಲಿತರ ಹಣ ಲೂಟಿ ಹೊಡೆಯುತ್ತಿದ್ದರೆ, ಮತ್ತೊಂದೆಡೆ ಹರಾಜಿನ ಮೂಲಕ ಬಡವರಿಗೆ ಹಂಚಬೇಕಾದ ನಿವೇಶನಗಳನ್ನು ಪ್ರಭಾವಿಗಳು ಕಬಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
