ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಲ್ಲಿ ಹೊಸ ಉತ್ಸಾಹ ಹೆಚ್ಚಾಗಿದೆ.
ಯುವ ನಾಯಕ ಅಧ್ಯಕ್ಷರಾಗಿರುವುದರ ಜತೆಗೆ ಯುವ ಸಮುದಾಯ ಬಿಜೆಪಿ ಕಡೆಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಜೆಡಿಎಸ್‌ಗೆ ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆ ಇದೆ. ಹಳೇ ಮೈಸೂರು ಭಾಗದಲ್ಲಿ ಬಹು ದೊಡ್ಡ ಒಕ್ಕಲಿಗ ಸಮುದಾಯದ ಜತೆ ಲಿಂಗಾಯತ ಸಮುದಾಯವೂ ಕೈಜೋಡಿಸುವ ಆಶಾಭಾವವನ್ನು ಜೆಡಿಎಸ್ ಹೊಂದಿದೆ.
ಈ ಹಿಂದೆ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಯಡಿಯೂರಪ್ಪಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ವಚನ ಭ್ರಷ್ಟತೆ ಆರೋಪವನ್ನು ಕುಮಾರಸ್ವಾಮಿ ಎದುರಿಸಿದ್ದರು. 2018ರಲ್ಲಿ ಬಿಜೆಪಿ 104 ಸ್ಥಾನ ಗೆದ್ದಾಗಲೂ ಯಡಿಯೂರಪ್ಪ ಸಿಎಂ ಆಗಲು ಜೆಡಿಎಸ್ ಬೆಂಬಲಿಸಲಿಲ್ಲ ಎಂಬ ಸಿಟ್ಟು ಲಿಂಗಾಯತ ಸಮುದಾಯದಲ್ಲಿದೆ. ಆದರೆ ಹಿಂದಿನ ಈ ಎಲ್ಲ ರಾಜಕೀಯ ವಿಪ್ಲವಗಳು ಹಾಗೂ ಅದಕ್ಕೆ ಒದಗಿ ಬಂದ ಸಂದರ್ಭಗಳನ್ನು ಬಿಜೆಪಿ ದೆಹಲಿ ವರಿಷ್ಠರೆದುರು ಸ್ಪಷ್ಟಪಡಿಸಿಯೇ ಮೈತ್ರಿ ಮಾಡಿಕೊಂಡಿರುವುದರಿಂದ ಮೈತ್ರಿ ಧರ್ಮ ಅತ್ಯಂತ ಯಶಸ್ವಿಯಾಗಿ ಪಾಲನೆಯಾಗುತ್ತದೆ ಎಂಬ ನಂಬಿಕೆ ಜೆಡಿಎಸ್ ನಾಯಕರಲ್ಲಿದೆ. ಅಲ್ಲದೆ, ಎರಡು ವರ್ಷಗಳಿಂದ ಈಚೆಗೆ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಅತ್ಯಂತ ಆಪ್ತ ಸಂಬಂಧ ಬೆಳೆದಿದ್ದು, ಇದು ಕೂಡ ಮೈತ್ರಿಯಲ್ಲಿ ಹೆಚ್ಚು ಕೆಲಸ ಮಾಡುವ ಆಶಾಭಾವವನ್ನು ಜೆಡಿಎಸ್ ಹೊಂದಿದೆ.
ಮೈತ್ರಿಗೂ ಮುನ್ನ ಹಿಂದಿನ ಎಲ್ಲ ಕಹಿ ಘಟನೆಗಳನ್ನು ಬದಿಗಿಡಲು ಉಭಯ ಪಕ್ಷಗಳ ನಾಯಕರು ಒಪ್ಪಿಕೊಂಡಿರುವುದರಿಂದ ಮೈತ್ರಿ ಮಿಸ್ ಫೈರ್ ಆಗುವ ಲಕ್ಷಣಗಳು ಕಡಿಮೆ. ಅಲ್ಲದೆ, ಮೀರ್ ಸಾದಿಕ್‌ಗಳಿಗೆ ಇಂಬುಗೊಡದಂತೆ ಮೈತ್ರಿ ಧರ್ಮ ಪಾಲನೆಯಾಗುವ ನಂಬಿಕೆ ಜೆಡಿಎಸ್‌ನಲ್ಲಿದೆ.
ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯದ ಒಂದಷ್ಟು ಪ್ರಮಾಣದ ಮತಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂದಿದ್ದವು. ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆಗಬಹುದೆಂಬ ನಿರೀಕ್ಷೆಯಲ್ಲಿ ಒಕ್ಕಲಿಗರು ಕೂಡ ತಕ್ಕಮಟ್ಟಿಗೆ ಕಾಂಗ್ರೆಸ್ ಕಡೆಗೆ ಕೈಚಾಚಿದ್ದರು. ಆದರೆ ಈ ಬಾರಿ ಬಿ.ವೈ.ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಜೋಡೆತ್ತಿನ ರೀತಿ ಕಾರ್ಯನಿರ್ವಹಿಸುವುದರಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೆಲವು ಕಡೆ ಬಿಜೆಪಿಗೆ ಲಾಭವಾಗಲಿದೆ ಎಂಬ ತರ್ಕ ಉಭಯ ಪಕ್ಷಗಳಲ್ಲಿ ಚರ್ಚೆಯ ವಸ್ತುವಾಗಿದೆ.
ಜೆಡಿಎಸ್‌ನಲ್ಲಿ ಸಿ.ಎಂ.ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿಯೇ ಮುಂದುವರಿದಿದ್ದರೆ ಮೈತ್ರಿ ಪಾಲನೆ ವಿಚಾರದಲ್ಲಿ ಬಿಜೆಪಿಗೆ ಇರಿಸುಮುರಿಸಾಗುವ ಸಂಭವವಿತ್ತು. ಬಿ.ವೈ.ವಿಜಯೇಂದ್ರ ಜತೆ ಇಬ್ರಾಹಿಂ ಕಾಂಬಿನೇಷನ್ ಅನ್ನು ಬಿಜೆಪಿ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ಈಗ ಕುಮಾರಸ್ವಾಮಿಯೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವುದರಿಂದ ಎರಡು ಪ್ರಬಲ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.ಸಿದ್ಧಾಂತ ಆಧಾರಿತ ಪಕ್ಷ ಸಂಘಟನೆ ಕಷ್ಟ
ಕರ್ನಾಟಕದಲ್ಲಿ ಸಿದ್ಧಾಂತ ಆಧಾರಿತವಾಗಿ ಚುನಾವಣೆ ಸದ್ಯಕ್ಕಂತೂ ಕಷ್ಟ. ಇಲ್ಲಿ ವರ್ಕ್‌ಔಟ್ ಆಗುವುದು ಪ್ರಬಲ ಲಿಂಗಾಯತ, ಒಕ್ಕಲಿಗ ಹಾಗೂ ಒಬಿಸಿ ಸಮುದಾಯಗಳು. ಬಹುತೇಕ ಇದೇ ಮಾದರಿಯಲ್ಲೇ ಕಳೆದ ಎರಡು ವಿಧಾನಸಭೆ ಚುನಾವಣೆಗಳು ನಡೆದಿವೆ. ಈ ಸತ್ಯ ಬಿಜೆಪಿ ದೆಹಲಿ ಹೈಕಮಾಂಡ್‌ಗೂ ಈಗ ಮನವರಿಕೆಯಾಗಿದೆ. ಹಾಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗುತ್ತದೆ ಎಂಬುದು ಜೆಡಿಎಸ್‌ನ ಬಲವಾದ ನಂಬಿಕೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
