|ಶ್ರೀಕಾಂತ ಅಕ್ಕಿಹೊಸಪೇಟೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ವೇದಿಕೆ ಕಲ್ಪಿಸಿಕೊಡುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಹಂಪಿ ವಿರೂಪಾಕ್ಷೇಶ್ವರನ ನೆಲದಿಂದ ಪಕ್ಷದ ಚಟುವಟಿಕೆ ಆರಂಭಿಸಿದರೆ ಗೆಲುವು ಖಚಿತ ಎಂಬ ನಂಬಿಕೆಯಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಹೊಸಪೇಟೆಯಲ್ಲಿ ಏ. 16 ಮತ್ತು 17ರಂದು ನಡೆಸಲಾಗುತ್ತಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳುತ್ತಿದ್ದು, ಸಾಕಷ್ಟು ಮಹತ್ವ ಪಡೆದಿದೆ. ಇವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ವಿವಿಧ ಸಚಿವರು, ರಾಜ್ಯ-ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ, ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಮರು ರಚನೆ ಕುರಿತಾಗಿ ಅಂತಿಮ ನಿರ್ಣಯಗಳು ಸಭೆಯಲ್ಲಿ ಕೈಗೊಳ್ಳಲಾಗುತ್ತಿವೆ. ಈಚೆಗೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದಾಗ ಹೊಸಪೇಟೆ ಸಭೆ ಬಳಿಕವೇ ಎಲ್ಲ ತೀರ್ವನಗಳನ್ನು ಕೈಗೊಳ್ಳೋಣವೆಂದು ವರಿಷ್ಠರು ಹೇಳಿದ್ದರಿಂದ ಕಾರ್ಯಕಾರಿಣಿಯಲ್ಲಿ ಏನೆಲ್ಲ ಚರ್ಚೆ, ತೀರ್ವನಗಳಾಗಲಿವೆ ಎಂಬ ಕುತೂಹಲ ಮನೆ ಮಾಡಿದೆ. ಸರ್ಕಾರಕ್ಕೆ ಮುಳುವಾಗಿರುವ ಪರ್ಸೆಟೇಂಜ್ ಪ್ರಕರಣವನ್ನು ಶಮನಗೊಳಿಸುವುದು ಹೇಗೆ? ಎಂಬುದರ ಕುರಿತಂತೆ ರ್ಚಚಿಸಲಾಗುತ್ತದೆ.
ಗಣಿನಾಡಿನ ನೆಲವೇ ಕಾರಣ:ರಾಜ್ಯದಲ್ಲಿ ಮೊದಲ-ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಗಣಿನಾಡಿನ ನೆಲವೇ ಕಾರಣ. 2008ರಲ್ಲಿ ಕಮಲ ಅರಳಲು ಗಣಿನಾಡಿನ ರೆಡ್ಡಿ ಬ್ರದರ್ಸ್ ಕಾರಣವಾಗಿದ್ದರು. 2018ರಲ್ಲಿ ಬಿಜೆಪಿಗೆ ಬಹುಮತ ಬರದೆ ಇರುವುದರಿಂದ ಕೊನೇ ಗಳಿಗೆಯಲ್ಲಿ ಅಧಿಕಾರ ಕೈ ತಪ್ಪಿತ್ತು. ನಂತರ ಕಾಂಗ್ರೆಸ್​ಗೆ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೈ ಪಕ್ಷದ 16 ಶಾಸಕರು ಬಿಜೆಪಿ ಬೆಂಬಲಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಮೂರನೇ ಬಾರಿಗೆ ಅಧಿಕಾರ ಪಡೆಯಲು ಹಂಪಿ ವಿರೂಪಾಕ್ಷೇಶ್ವರನ ಸನ್ನಿಧಾನ ದಿಂದಲೇ ಮುನ್ನುಡಿ ಇಡಲು ಬಿಜೆಪಿ ನಿರ್ಧರಿಸಿದೆ.
ಹಂಪಿ ಶೈಲಿಯಲ್ಲಿ ಸಿದ್ಧಗೊಂಡ ವೇದಿಕೆ:ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಗೆ ಹಂಪಿಯ ವಾಸ್ತು ಶಿಲ್ಪಗಳ ನೆನಪಿಸುವ ವೇದಿಕೆ ಸಿದ್ಧಗೊಳ್ಳುತ್ತಿದೆ. ನಗರದ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಜಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹವಾನಿಯಂತ್ರಿತ ಜರ್ಮನ್ ಟೆಂಟ್ ನಿರ್ವಿುಸಲಾಗಿದೆ. 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ವಣಗೊಂಡಿದೆ. ವೇದಿಕೆಯ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್​ಡ್ರಾಪ್ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಗೋಚರಿಸಲಿದೆ.
ವಿಜಯನಗರ ನೆಲದ ಸೊಬಗನ್ನು ವೇದಿಕೆಯಲ್ಲಿ ಹಾಗೂ ಸಭಾಂಗಣದಲ್ಲಿ ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್ ಸಂಸ್ಥೆ ಅನಾವರಣಗೊಳಿಸಿದೆ. ಹಂಪಿಯ ವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ನಿರ್ವಣಗೊಳ್ಳುತ್ತಿದೆ. ಸಭಾಂಗಣದಲ್ಲಿ ಎರಡು ದ್ವಾರಗಳನ್ನು ನಿರ್ವಿುಸಲಾಗುತ್ತಿದೆ. ಪ್ರವೇಶದ್ವಾರದಲ್ಲೂ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಪ್ರಪಂಚ ಅನಾವರಣಗೊಂಡಿದೆ. ಇನ್ನೊಂದೆಡೆ ದ್ವಾರದಲ್ಲೂ ಹಂಪಿಯ ಕಲಾವೈಭವ ಗೋರಚಿಸಲಿದೆ. ವಿಶಾಲ ಜಾಗದಲ್ಲಿ ನಿರ್ವಣಗೊಂಡಿರುವ ಹವಾನಿಯಂತ್ರಿತ ಜರ್ಮನ್ ಮಾದರಿಯ ಟೆಂಟ್​ನಲ್ಲಿ 580 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗಣಾತಿಗಣ್ಯರ ಕೊಠಡಿ, ಗ್ರೀನ್ ರೂಂ, ಭೋಜನಾಲಯ ಕೂಡ ಸೃಜಿಸಲಾಗಿದೆ. ವೇದಿಕೆ ನಿರ್ವಣದ ಕಾಮಗಾರಿಯಲ್ಲಿ 200ಕ್ಕೂ ಅಧಿಕ ಕಾರ್ವಿುಕರು, ಕಲಾವಿದರು, ತಂತ್ರಜ್ಞರು ಕೆಲಸ ನಿರ್ವಹಿಸಿದ್ದಾರೆ.
ಮುಂದಿನ ವಿಧಾನ ಸಭಾ ಚುನಾವಣೆ ದೃಷ್ಟಿಯನ್ನಿಟ್ಟು ಕೊಂಡು ಪಕ್ಷವನ್ನು ಬಲ ಪಡಿಸುವುದಕ್ಕಾಗಿ ಕಾರ್ಯಕಾರಿಣಿ ಸಭೆ ಮಾಡಲಾಗುತ್ತಿದೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಹಲವು ಮಹತ್ವದ ಚರ್ಚೆಗಳಾಗಲಿವೆ.
|ಮಹೇಶ ಟೆಂಗಿನಕಾಯಿರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಬಹುಮುಖ್ಯ ಸಭೆ ಇದಾಗಿರುವುದರಿಂದ ಯಾವುದೇ ಲೋಪ-ದೋಷ ವಾಗದಂತೆ ಎಚ್ಚರಿಕೆ ವಹಿಸಿ, ಕಾರ್ಯಕ್ರಮ ನಡೆಸಲಾಗುವುದು. ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳುತ್ತಿದ್ದಾರೆ. ನೂತನ ವಿಜಯನಗರ ಜಿಲ್ಲೆ ರಚನೆಯಾದ ಬೆನ್ನಲ್ಲೇ ರಾಜ್ಯ ಕಾರ್ಯಕಾರಿಣಿ ನಿಭಾಯಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ.
|ಆನಂದ ಸಿಂಗ್ಪ್ರವಾಸೋದ್ಯಮ ಸಚಿವ
ನಾವು ರಾಜೀನಾಮೆ ಕೇಳಿಲ್ಲ, ಆದ್ರೆ ಈಶ್ವರಪ್ಪ ಬಂಧನ ಆಗ್ಬೇಕು; ಸಂತೋಷ್ ಸಹೋದರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 12 =
Remember me
