ವಿಜಯಪುರ:ಪುರಸಭೆಯ ಕಾಂಗ್ರೆಸ್​ ಸದಸ್ಯೆಯೋರ್ವರ ಮಗನನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ 10ನೇ ವಾರ್ಡ್​​ನ ರಸ್ತೆ ಅಭಿವೃದ್ಧಿ ಮಾಡಿಸುವಂತೆ ಕೇಳಲು ಆ ವಾರ್ಡ್​ನ ಸದಸ್ಯೆ ಸೋನಾಬಾಯಿ ಅವರ ಪುತ್ರ ಅನಿಲ್​ ನಾಯಕ, ಅಲ್ಲಿನ ಬಿಜೆಪಿ ಶಾಸಕ ಎ.ಎಸ್​.ಪಾಟೀಲ್​ ನಡಹಳ್ಳಿ ಅವರ ನಿವಾಸದ ಬಳಿ ತೆರಳಿದ್ದ.
ಇದನ್ನೂ ಓದಿ:ಯಲ್ಲಾಪುರದಲ್ಲೊಂದು ಮನಕಲಕುವ ದುರಂತ; ಒಂದೇ ಮನೆಯ ಮೂವರು ಮಹಿಳೆಯರ ದಾರುಣ ಸಾವು
ಈ ವೇಳೆ ಶಾಸಕರು ಯುವಕನ ಮೇಲೆ ಸಿಟ್ಟಾಗಿ ಮಾತನಾಡಿದ್ದಾರೆ. ನಿಮ್ಮ ಓಣಿಗೆ ಕೆಲಸ ಮಾಡಲು ಬಂದವರ ಮೇಲೆ ನೀನು ಜಗಳ ಮಾಡುತ್ತೀಯಂತೆ. ಏನಂದು ಕೊಂಡಿದ್ದೀಯಾ ನಿನ್ನ ಓಣಿಯನ್ನ. ಕೆಲಸ ಮಾಡಲು ಬಂದ ಗುತ್ತಿಗೆದಾರರ ಮೇಲೆ ನೀನು ಗೂಂಡಾಗಿರಿ, ದಾದಾಗಿರಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.ನನ್ನನ್ನು ಆಯ್ಕೆ ಮಾಡಿದ್ದು ಜನರು. ಅವರೇ ಬಂದು ಕೇಳಲಿ. ನೀನು ರಾಜಕೀಯ ಮಾಡಲು ಬರಬೇಡ ಎಂದು ಅನಿಲ್​ಗೆ ಹೇಳಿದ್ದಾರೆ.
ಇದನ್ನೂ ಓದಿ:ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
ಅನಿಲ್​ ಕೂಡ ಸ್ವಲ್ಪ ಹೊತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿ, ನಂತರ ಕ್ಷಮೆ ಯಾಚಿಸಿ ಅಲ್ಲಿಂದ ತೆರಳಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
