ಮೈಸೂರು:ಎಲ್ಲೆಲ್ಲೂ ಕರನಾ ವೈರಸ್​ ಆತಂಕವಿದೆ. ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದೆ. ಮನೆಯಿಂದ ಹೊರಬರುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಸರ್ಕಾರಗಳು ಹೇಳುತ್ತಲೇ ಇವೆ. ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ಹಾಗೊಮ್ಮೆ ಹೊರಬರುವುದೇ ಆದರೆ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂಬಿತ್ಯಾದಿ ನಿಯಮಗಳನ್ನೂ ಹೇರಲಾಗಿದೆ.ಇದನ್ನೂ ಓದಿ:24 ಗಂಟೆಯಲ್ಲಿ 63 ಕೊವಿಡ್​-19 ಪ್ರಕರಣಗಳು ಪತ್ತೆ; 1000ದತ್ತ ದಾಪುಗಾಲು ಹಾಕುತ್ತಿದೆ ಸೋಂಕಿತರ ಸಂಖ್ಯೆ
ಆದರೆ ಇಲ್ಲೋರ್ವ ಶಾಸಕನ ಪುತ್ರ ಇಂಥ ಸಮಯದಲ್ಲೂ ಕುದುರೆ ಸವಾರಿ ಮಾಡಿ ಮೋಜು ಮಾಡಿದ್ದಾರೆ. ವೈರಲ್​ ಆದ ವಿಡಿಯೋ ನೋಡಿ ಜನಸಾಮಾನ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರದ ಗುಂಡ್ಲುಪೇಟೆಯ ಬಿಜೆಪಿ ಶಾಸಕ ನಿರಂಜನ್​ ಕುಮಾರ್​ ಅವರ ಪುತ್ರ ಪಟ್ಟಣದ ಐಟಿಐ ಕಾಲೇಜಿನ​ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ.ಅದೂ ಮಾಸ್ಕ್​ ಕೂಡ ಧರಿಸಿದೆ ಸವಾರಿ ಮಾಡಿದ ಫೋಟೋ, ವಿಡಿಯೋಗಳು ವೈರಲ್​ ಆಗಿವೆ.
ಸೋಮವಾರ ವೈರಲ್​ ಆದ ಕುದುರೆ ಸವಾರಿಯ ವಿಡಿಯೋ ನೋಡಿದ ಜನರು, ಲಾಕ್ ಡೌನ್​ ನಿಯಮವನ್ನು ಮೀರಿದ ಶಾಸಕನ ಪುತ್ರನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಶಾಸಕರು, ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ. ವಿಡಿಯೋದಲ್ಲಿ ಇರುವುದು ನನ್ನ ಮಗನೇ ಹೌದು. ಸರಿಯಾಗಿ ವಿಚಾರಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಮಗನ ಬಳಿ ಕೇಳುತ್ತೇನೆ. ತಪ್ಪಿದ್ದರೆ ಖಂಡಿತ ಅವನಿಗೆ ಬುದ್ಧಿ ಹೇಳುತ್ತೇನೆ ಎಂದಿದ್ದಾರೆ. ಹಾಗೇ, ಲಾಕ್​ಡೌನ್​ ಸಮಯದಲ್ಲಿ ಕುದುರೆ ಸವಾರಿ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ನಾನಿದನ್ನು ಸಮರ್ಥನೆ ಮಾಡಿಕೊಳ್ಳಲು ಹೇಳುತ್ತಿಲ್ಲ ಎಂದು ಶಾಸಕರು ಹೇಳಿದ್ದಾರೆ.ಇದನ್ನೂ ಓದಿ:ಪಾಸ್ ಸಿಕ್ಕಿದೆ.. ಮಾತನಾಡಲು ಮಗನೇ ಇಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಮರಾಜನಗರ ಎಸ್​ಪಿ, ಲಾಕ್​ಡೌನ್​ ಸಮಯದಲ್ಲಿ ಕುದುರೆ ಸವಾರಿ ಮಾಡುವುದರಿಂದ ನಿಯಮ ಉಲ್ಲಂಘನೆಯಾದಂತೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಶಾಸಕರ ಪುತ್ರನ ಕುದುರೆ ಸವಾರಿ ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
https://twitter.com/Lkh2707/status/1260113079716757505?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
