ಬೆಂಗಳೂರು:ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರವಿಕೆ ಖರೀದಿಸಲು ಹೋಗಿದ್ದ ವಿಧಾನ ಪರಿಷತ್ ಸದಸ್ಯೆಯ ಪರ್ಸ್ ಕಳವಾಗಿದ್ದು, ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಪರ್ಸ್ ಕಳೆದುಕೊಂಡವರು.
ಇದನ್ನೂ ಓದಿ:ಸಾರಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕೆಲವು ಮದ್ಯಪ್ರಿಯರಿಗೆ ಖುಷಿಯೋ ಖುಷಿ!
”ಏಪ್ರಿಲ್ 1ರ ಮಧ್ಯಾಹ್ನ 1.30ರಲ್ಲಿ ರವಿಕೆ ಖರೀದಿಸಲು ಕಮರ್ಷಿಯಲ್ ಸ್ಟ್ರೀಟ್ ಮೇನ್ ಗಾರ್ಡ್ ಕ್ರಾಸ್ ರಸ್ತೆಯಲ್ಲಿರುವ ಸಫಿನಾ ಪ್ಲಾಜಾದಲ್ಲಿರುವ ಕಾಂಚನಾ ಅಂಗಡಿಗೆ ಹೋಗಿದ್ದೆ. ರವಿಕೆ ನೋಡಲು ಕೈಯಲ್ಲಿದ್ದ ಪರ್ಸ್‌ನ್ನು ಟೇಬಲ್ ಮೇಲಿಟ್ಟು ಆಯ್ಕೆ ಮಾಡುತ್ತಿದ್ದೆ. ಕೊನೆಗೆ ಯಾವುದು ಇಷ್ಟ ಆಗದ ಕಾರಣ ಅಂಗಡಿಯಿಂದ ಹಿಂತಿರುಗಿದೆ. ಮಧ್ಯಾಹ್ನ 3.45ರಲ್ಲಿ ಪರ್ಸ್ ಇಲ್ಲದೆ ಇರುವುದು ಅರಿವಿಗೆ ಬಂದು ತಕ್ಷಣ ಅಂಗಡಿಗೆ ಹೋಗಿ ನೋಡಿದಾಗ ಟೇಬಲ್ ಮೇಲೆ ಪರ್ಸ್ ಇರಲಿಲ್ಲ. ಈ ಬಗ್ಗೆ ಅಂಗಡಿ ಸಿಬ್ಬಂದಿಯನ್ನು ಕೇಳಿದಾಗ ಸಾಕಷ್ಟು ಗ್ರಾಹಕರು ಅಂಗಡಿಗೆ ಬರುತ್ತಾರೆ. ಯಾರು ತೆಗೆದುಕೊಂಡು ಹೋಗಿರುತ್ತಾರೆ. ಗೊತ್ತಾಗುವುದಿಲ್ಲ ಎಂದು ಉತ್ತರಿಸಿದರು. ಕಳವಾಗಿರುವ ಪರ್ಸ್‌ನಲ್ಲಿ 25 ಸಾವಿರ ರೂ., ಎಸ್‌ಬಿಐ, ಕೆನರಾ ಬ್ಯಾಂಕ್ ಎಟಿಎಂ, ಪಾನ್ ಕಾರ್ಡ್, ಎಂಎಲ್‌ಸಿ ಐಡಿ ಕಾರ್ಡ್ ಇದ್ದವು. ಹಾಗಾಗಿ ಕಳವಾಗಿರುವ ಪರ್ಸ್‌ನ್ನು ಪತ್ತೆಹಚ್ಚಿ ಕೊಡಬೇಕೆಂದು” ಭಾರತಿ ಶೆಟ್ಟಿ ತಮ್ಮ ಆಪ್ತ ಸಹಾಯಕಿ ಶಶಿಕಲಾ ಮೂಲಕ ದೂರು ನೀಡಿದ್ದಾರೆ.
ಈ ಕುರಿತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ

ತಿರುಪತಿ ಲೋಕಸಭೆ ಉಪಚುನಾವಣೆ: ಪ್ರಮುಖ ಅಭ್ಯರ್ಥಿಗಳಿಗೆ ಸವಾಲಾಗಿರುವ ಕನ್ನಡತಿ, ಬಿಜೆಪಿ ಅಭ್ಯರ್ಥಿ ಕೆ ರತ್ನ ಪ್ರಭಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
