ಮೈಸೂರು:ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್​ ಮುಗಿಸುವ ಹುನ್ನಾರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಎಚ್​. ವಿಶ್ವನಾಥ್​ ಹರಿಹಾಯ್ದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದರು.
ಇದನ್ನೂ ಓದಿ:ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!
ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಸಿದ್ದರಾಮಯ್ಯ ಹೇಳಿಕೆ ಕೊಡವರಿಗೆ ಮಾಡಿದ ಅವಮಾನ. ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ. ಒಂದು ಕಡೆ ಬಲಗೈ ದಲಿತರು ಮತಹಾಕಿಲ್ಲ ಎಂಬ ಹೇಳಿಕೆಯಿಂದ ಅವರ ಮತಬ್ಯಾಂಕ್ ಹಾಳಾಗಿದೆ ಎಂದರು.
ನಾನಿದ್ರೆ ಮಾತ್ರ ಕಾಂಗ್ರೆಸ್ ಅಂತ ಸಿದ್ದರಾಮಯ್ಯ ಅಂದುಕೊಂಡಿರಬಹುದು. ನಾನು ಸಿಎಂ ಆದ ಮೇಲೆ ಬೇರೆ ಯಾರು ಸಿಎಂ ಆಗಬಾರದು ಅನ್ನೋ ಮನೋಭಾವಿದೆ. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ:PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!
140 ಸ್ಥಾನ ಗೆಲ್ಲುವ ಕಾಂಗ್ರೆಸ್‌ನಲ್ಲಿ 20 ಸ್ಥಾನ ಗೆಲ್ಲುವುದಿಲ್ಲವೇ ಅನ್ನೋ ಚರ್ಚೆ ಆರಂಭವಾಗಿದೆ. ಎಲ್ಲಿಗೆ ಬಂದು ನಿಂತಿದೆ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ದುರಹಂಕಾರದ ಮಾತನ್ನು ನಿಲ್ಲಿಸಿ. ನಿಮ್ಮ ಹೇಳಿಕೆಗೆ ನೀವೆ ಕೊಡವರ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು.(ದಿಗ್ವಿಜಯ ನ್ಯೂಸ್​)
ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರದ ಬಗ್ಗೆ ಜನರು ಮುಸಿ ಮುಸಿ ನಗುತ್ತಿದ್ದಾರೆ: ಬಿಜೆಪಿ ನಾಯಕನಿಂದಲೇ ಟೀಕೆ!

ಇನ್​ಸ್ಪೆಕ್ಟರ್​ಗೆ ರಸ್ತೆ ಗುಡಿಸುವ ಶಿಕ್ಷೆ !

ಎಸ್ಸೆಸ್ಸೆಲ್ಸಿ ತರಗತಿ ವೇಳಾಪಟ್ಟಿ ಪ್ರಕಟ – 6-9ನೇ ತರಗತಿಯ ವಿದ್ಯಾಗಮ ಪರಿಷ್ಕೃತ ಸುತ್ತೋಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twenty =
Remember me
