ಮೈಸೂರು:ರೂಪಾಂತರಿ ಕರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ರಾತ್ರಿ ಕರ್ಫ್ಯೂ ನಿರ್ಧಾರವನ್ನು ಬಿಜೆಪಿ ಎಂಎಲ್​ಸಿ ಎಚ್​. ವಿಶ್ವನಾಥ್​ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೈಟ್ ಕರ್ಫ್ಯೂ ಬಗ್ಗೆ ಜನಾಭಿಪ್ರಾಯ ಬರುತ್ತಿದೆ. ಸರ್ಕಾರದ ಪರವಾಗಿ ನಾನು ಸರಿಯಿದೆ ಎಂದು ಹೇಳಬಹುದು. ಆದರೆ ನಾಡಿನ ಜನರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನೈಟ್ ಕರ್ಫ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ ಎಂದರು.
ಇದನ್ನೂ ಓದಿ:ಸೆಲ್ಫಿ ತೆಗೆದುಕೊಂಡು ನೇಣಿಗೆ ಶರಣಾದ ಪೊಲೀಸ್​ ದಂಪತಿಯ ಅಪ್ರಾಪ್ತ ಮಗಳು: ಡೆತ್​ನೋಟ್ ಪತ್ತೆ!​
ಹೊಸವರ್ಷದ ಆಚರಣೆಗೆ ಜನ ಸೇರುತ್ತಾರೆ. ಡಿಸೆಂಬರ್ 30 ಮತ್ತು 31ರಂದು ನೈಟ್ ಕರ್ಫ್ಯೂ ಮಾಡಿ. ಆದರೆ,‌ಈಗಲೇ ಏಕೆ? ನಾನು ಪ್ರಾರ್ಥನೆ ಮಾಡುವೆ ಪುನರ್ ವಿಮರ್ಶೆ ಮಾಡಿದರೆ ಒಳ್ಳೆಯದು. ನೈಟ್ ಕರ್ಪ್ಯೂ‌ನಿಂದ ಯಾವುದೇ ಪ್ರಯೋಜನವಿಲ್ಲ. ಕೆಲ ತೀರ್ಮಾನಗಳು ಯೋಚನೆ ಮಾಡಿ ತೆಗೆದುಕೊಳ್ಳಬೇಕು. ನಗೆಪಾಟಲಿಗೆ ಈಡಾಗಬಾರದು. ಇದನ್ನು ಯಾರು ಸ್ವಾಗತ ಮಾಡಿಲ್ಲ. ಎಲ್ಲರು ಮುಸಿ ಮುಸಿ ನಗುತ್ತಿದ್ದಾರೆ. ಸಂಚಾರ ಸೇವೆಯ ಎಲ್ಲದಕ್ಕೂ ಅನುಮತಿ ನೀಡಿ ಜನ ಓಡಾಡಬಾರದು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಶಾಲೆಗಳ ಆರಂಭ ಕುರಿತು ಮಾತನಾಡಿದ ಅವರು ಉತ್ತರಾಯಣ ಪುಣ್ಯ ಕಾಲದ ನಂತರ ಶಾಲೆಗಳನ್ನು ಆರಂಭ ಮಾಡಿ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮಾತು ವಾಪಸ್ಸು ಪಡೆಯುವ ಕಾಯಿಲೆ ಇದ್ದಂತೆ ಕಾಣುತ್ತಿದೆ. ಸುರೇಶ್ ಕುಮಾರ್ ಆದೇಶ ಮಾಡುತ್ತಾರೆ ವಾಪಸ್ಸು ಪಡೆಯುತ್ತಾರೆ. ಸದ್ಯ ಕರೊನಾ ಎರಡನೇ ಅಲೆ ಜೋರಾಗಿದೆ. ಮಕ್ಕಳ ಜೀವದ ಜತೆ ಚೆಲ್ಲಾಟ ಸರಿಯಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ:PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!
ಮಕ್ಕಳು ಮನೆಯ ಆಸ್ತಿ. ಒಂದನೇ ತಾರೀಖಿನಿಂದ ಶಾಲೆ ಬೇಡ. ಸುರೇಶ್ ಕುಮಾರ್ ಹೇಳಿದ್ದು ಯಾವುದಾದಾರೂ ಒಂದು ಆಗಿದೆಯಾ? ಪೋಷಕರನ್ನು ಮಕ್ಕಳನ್ನು ಆತಂಕಕ್ಕೀಡು ಮಾಡಬೇಡಿ. ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ ಈಗ ಬೇಡ. ಮಕ್ಕಳೆ ನಮ್ಮ ಜೀವ, ನಮ್ಮ ಆಸ್ತಿ. ಎರಡನೇ ಅಲೆ ಬಗ್ಗೆ ಆತಂಕ ಇದೆ. ಯಾರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜನವರಿ 1 ರಿಂದ ಶಾಲೆ ಆರಂಭ ಬೇಡವೆಂದರು.(ದಿಗ್ವಿಜಯ ನ್ಯೂಸ್​)
ಕೆಎಫ್​ಸಿ ಚಿಕನ್​ ಆರ್ಡರ್​ ಮಾಡಿದ ಕುಟುಂಬಕ್ಕೆ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​..!

ಗಾನ ಗಂಧರ್ವನಿಗೆ ಹೀಗೊಂದು ನಮನ: 339 ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆ

ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
