ದಾವಣಗೆರೆ:‘‘ನನಗೆ ಒಂದು ಕೋಟಿ ರೂ. ಆದಾಯ ಇದೆ ಅಂತ ಹೇಳ್ತಾನಲ್ಲ, ಇವನೇನು ನಮ್ಮ ಅಂಗಡಿಯಲ್ಲಿ ಗುಮಾಸ್ತನಾಗಿದ್ದನಾ..?’’ ಎಂದು ಬಿಜೆಪಿ ಸಂಸದ ಜಿ.ಎಂ. ಸಿದ್ಧೇಶ್ವರ್ ಅವರು ತಮ್ಮ ರಾಜಕೀಯ ವಿರೋಧಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಹರಿಹಾಯ್ದಿದ್ದಾರೆ.
‘ಡಿಪಿಆರ್ ಆ್ಯಕ್ಟ್​ ಅಡಿಯಲ್ಲಿ ಬೆಡ್ ನೀಡದೆ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ, ಗುಟ್ಕಾದಿಂದ ದಿನಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಾರೆ’ ಎಂಬ ಮಲ್ಲಿಕಾರ್ಜುನ್ ಹೇಳಿಕೆಗೆ ಏಕವಚನದಲ್ಲಿ ಪ್ರತ್ಯುತ್ತರ ನೀಡಿದ ಸಿದ್ಧೇಶ್ವರ್, ‘‘ನಮ್ಮಪ್ಪ ಮೊದಲಿನಿಂದಲೂ ಶ್ರೀಮಂತರು. ಸಾಕಷ್ಟು ದಾನ-ಧರ್ಮ ಮಾಡಿದ್ದಾರೆ. ಅಗತ್ಯ ಬಿದ್ದಾಗ ನಾವೇ ಶಾಮನೂರು ಕುಟುಂಬದವರಿಗೆ ಸಾಲ ಕೊಟ್ಟಿದ್ದೇವೆ. ಆ ಸಾಲ ವಸೂಲಿ ಮಾಡಲು ಆಮೇಲೆ ಸಾಕಷ್ಟು ಕಷ್ಟಪಟ್ಟಿದ್ದೇವೆ’’ ಎಂದು ಹೇಳಿದರು.
‘‘ನನ್ನ ಆದಾಯ ನಾಯಿ ಮೊಲೆ ಹಾಲಿನಂತೆ ಎಂದಿದ್ದಾರೆ; ನಾಯಿ ಹಾಲು ಕುಡಿದವು ನಿಯತ್ತಿನಿಂದ ಮನೆ ಕಾಯುತ್ತವೆ. ಇವರೇನು ಕತ್ತೆ ಹಾಲು ಕುಡಿದಿದ್ದಾರೇನೋ ಗೊತ್ತಿಲ್ಲ. ನಾವು ತಾಯಿಯ ಎದೆಹಾಲು ಕುಡಿದು ಬೆಳೆದಿದ್ದೇವೆ, ನಾವು ಜನಸೇವಕರೇ ಹೊರತು ಮಾಲೀಕರಲ್ಲ. ಅವರು ಯಾರ್ಯಾರ ಮುಂದೆ ಮಂಡಿ ಊರಿದ್ರು ಎಂಬೋದು ಗೊತ್ತು; ಅವರು ಒಂದು ಸಂಸ್ಥೆಯನ್ನು ಕೊಳ್ಳೆ ಹೊಡೆದು ಶ್ರೀಮಂತರಾಗಿದ್ದಾರೆ; ಬಾಪೂಜಿ ಸಂಸ್ಥೆಗೆ ಕಾರ್ಯದರ್ಶಿ ಆಗುವ ಮುನ್ನ ಆವರ ಆಸ್ತಿ ಎಷ್ಟಿತ್ತು ಹೇಳಲಿ’’ ಎಂದು ಸವಾಲೆಸೆದರು.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
‘‘ನಾಲ್ಕು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದೇನೆ. ಅದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಹೀಗೆ ಮಾತನಾಡುತ್ತಿದ್ದಾರೆ. ಆವೇಶದಿಂದ ಹೇಳಿಕೆ ಕೊಡುವುದು ಸರಿಯಲ್ಲ. ನಮ್ಮ ದುಡಿಮೆ ಮೇಲೆ ಏಕೆ ಅವರಿಗೆ ಕಣ್ಣು? ರಾಜಕೀಯದಲ್ಲಿ ವೈಯುಕ್ತಿಕ ವಿಚಾರಗಳನ್ನು ಯಾರೂ ತರಬಾರದು. ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು’’ ಎಂದು ಸಲಹೆ ನೀಡಿದರು.
500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

ಆಂಬುಲೆನ್ಸ್​, ಗ್ಯಾಸ್​ ಟ್ಯಾಂಕರ್​ ಮಧ್ಯೆ ಭೀಕರ ಅಪಘಾತ: ರೋಗಿ ಸ್ಥಳದಲ್ಲೇ ಸಾವು, ಚಾಲಕ ಸೇರಿ ಮೂವರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 1 =
Remember me
