ಕಲಬುರಗಿ:ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರ ಬಲಗೈ ಬಂಟ ಭೀಕರವಾಗಿ ಕೊಲೆಯಾಗಿರುವ ಘಟನೆ ದೇವಲಗಾಣಗಾಪುರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ಗಿರೀಶ್​ ಚಕ್ರ ಕೊಲೆಯಾದ ವ್ಯಕ್ತಿ. ಈತ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ನಿವಾಸಿ. ಸಂಸದ ಜಾಧವ್​ಗೆ ಆತ್ಮೀಯರಾಗಿದ್ದರು. ಇತ್ತೀಚೆಗಷ್ಟೇ ಗಿರೀಶ್​ರನ್ನು ಬಿಎಸ್​ಎಸ್​ಎಲ್ (ತೆರಿಗೆ) ಸಲಹಾ ಸಮಿತಿಗೆ ಜಾಧವ್​ ನೇಮಕ ಮಾಡಿದ್ದರು.
ಸಲಹಾ ಸಮಿತಿಗೆ ನೇಮಕವಾದ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಹೇಳಿ ಜಮೀನಿಗೆ ಕರೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೂ ಮುನ್ನ ಕಣ್ಣಿಗೆ ಖಾರದಪುಡಿ ಎರಚಲಾಗಿತ್ತು. ಸಾಗನೂರ ಗ್ರಾಮದ ಸಚಿನ್ ಮತ್ತು ಗ್ಯಾಂಗ್​ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಗುಂಡು ಹಾರಿಸಿಕೊಂಡು ಯುವಕ ಸಾವುಮಡಿಕೇರಿ: ಯುವಕನೊಬ್ಬ ತನ್ನ ಎದೆಗೆ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಾದಾಪುರ ಸಮೀಪದ ಮುವತ್ತೋಕ್ಲುವಿನಲ್ಲಿ ನಡೆದಿದೆ. ಮೃತನನ್ನು ಪ್ರವೀಣ್ (28) ಎಂದು ಗುರುತಿಸಲಾಗಿದೆ.
ಸಿಂಗಲ್ ಬ್ಯಾರಲ್ ಗನ್​ನಿಂದ ಎದೆಗೆ ಗುಂಡು ಹೊಡೆದುಕೊಂಡು ಪ್ರಾಣ ಬಿಟ್ಟಿದ್ದಾನೆ. ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇರೆ ಕಡೆ ಉದ್ಯೋಗದಲ್ಲಿರುವ ಪ್ರವೀಣ್‌ ಕೆಲವು ದಿನಗಳ ಹಿಂದೆ ಊರಿಗೆ ಬಂದಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಎಂದಿಗೂ ಮದ್ವೆಯಾಗುವುದಿಲ್ಲ ಎಂದು ಯೋಚಿಸಿದ್ದ ಅನಂತ್​ ಅಂಬಾನಿ ಮನಸ್ಸು ಬದಲಿಸಿದ್ದೇಕೆ?

ನಿಮ್ಮ ದೇಹದೊಳಗಿನ ತ್ಯಾಜ್ಯ, ವಿಷವನ್ನು ಕಂಪ್ಲೀಟ್​ ಹೊರಗಾಕಲು ಈ ಪಾನೀಯಗಳು ಸಹಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
