ಬೆಂಗಳೂರು:ರಾಷ್ಟ್ರಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ ಮಾಡುತ್ತಾ ಬಂದಿದೆ. ರಾಷ್ಟ್ರಹಿತವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಪಕ್ಷದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಗನ್ನಾಥ ರಾವ್ ಜೋಶಿಯವರ ಜಯಂತಿ, ಶಮಾ ಪ್ರಸಾದ ಮುಖರ್ಜಿಯವರ ಬಲಿದಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದಿಂದ ಹೊರಗೆ, ಮಧ್ಯಪ್ರದೇಶದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾವ್ ಜೋಶಿ ಅವರು ಕಾರ್ಯಕರ್ತರಿಗೆ ಪ್ರೇರಕರು. ಪಕ್ಷದ ರಾಜ್ಯ ಮತ್ತು ದೇಶದ ಸಂಘಟನೆಯ ನಾಯಕತ್ವ ವಹಿಸಿ ಅವರು ಕರ್ನಾಟಕ ಕೇಸರಿ ಎಂಬ ಹೆಸರಿಗೆ ತಕ್ಕಂತೆ ಬದುಕಿದವರು ಎಂದು ತಿಳಿಸಿದರು.
ನರಗುಂದದಲ್ಲಿ ಅವರು ಹುಟ್ಟಿದ ಮನೆಯನ್ನು ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ಅಲ್ಲಿ ಅವರ ಬದುಕಿನ ಸಂಗತಿಗಳ ಚಿತ್ರಣ ಲಭಿಸುತ್ತದೆ. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೂ ಅವರ ಜೀವನಾನುಭವ ಸಿಗಲಿ ಎಂದು ಸ್ಮಾರಕ ಮಾಡಲಾಗಿದೆ ಎಂದರು.
ಶ್ರೀಮಂತ ಮನೆತನದಲ್ಲಿ ಜನಿಸಿದ ಶಮಾಪ್ರಸಾದ ಮುಖರ್ಜಿ ಅಪ್ರತಿಮ ರಾಷ್ಟ್ರವಾದಿ. ವಿವಿ ಕುಲಪತಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ರಾಷ್ಟ್ರಹಿತದ ಜತೆ ಯಾವತ್ತೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು.
ಒಂದು ದೇಶಕ್ಕೆ ಎರಡು ಸಂವಿಧಾನ, ಎರಡು ರಾಷ್ಟ್ರಧ್ವಜ ವಿರೋಧಿಸಿದ್ದ ಅವರು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದು ಮಾಡಲು ಜನಸಂಘದ ಮೂಲಕ ಹೋರಾಟ ನಡೆಸಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಡೇರಿಸಿದೆ ಎಂದು ಸಿ.ಟಿ.ರವಿ ಹೆಮ್ಮೆ ವ್ಯಕ್ತಪಡಿಸಿದರು.
ಶಾಸಕರಾದ ಸಿ.ಟಿ.ರವಿ, ವಿ.ಸುನಿಲ್‌ಕುಮಾರ್, ಬಸವರಾಜ ಮತ್ತಿಮೂಡ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಮುಖಂಡರು, ಕಾರ್ಯಕರ್ತರು ಇದ್ದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven + 20 =
Remember me
