ಬೆಂಗಳೂರು:ಅಧ್ಯಕ್ಷರ ನೇಮಕದ ಬಳಿಕ ರಾಜ್ಯ ಬಿಜೆಪಿ ಪಕ್ಷ ಮತ್ತೆ ಲಯಕ್ಕೆ ಮರಳಿದೆ. ನೂತನ ಸಾರಥಿ ಬಿ.ವೈ.ವಿಜಯೇಂದ್ರಗೆ ‘ಸಂಘ’ ಅಭಯ ನೀಡಿದ್ದು, ಕಮಲ ಸೇನೆಯ ಚೈತನ್ಯವನ್ನು ಇಮ್ಮಡಿಗೊಳಿಸಿದೆ.
ಪಕ್ಷದ ಚುಕ್ಕಾಣಿ ಹಿಡಿದ ಮರುದಿನವೇ (ಶನಿವಾರ) ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ ವಿಜಯೇಂದ್ರ ಅವರ ಯೋಚನೆ, ಚಿಂತನಾ ದಾಟಿಯನ್ನು ಸಂಘದ ಪ್ರಮುಖರು ಗ್ರಹಿಸಿದ್ದಾರೆ. ಸಂಘದ ಸಹ ಸರಕಾರ್ಯವಾಹ ಹಾಗೂ ಕರ್ನಾಟಕದ ರಾಜಕೀಯ ಗಮನಿಸುವ ಮುಕುಂದ್ ಜತೆಗೆ 20 ನಿಮಿಷ ರ್ಚಚಿಸಿದ್ದು, ಸಂಘದ ಪ್ರಾಂತ ಪ್ರಚಾರಕ ಗುರುಪ್ರಸಾದ್, ಸಹಪ್ರಾಂತ ಪ್ರಚಾರಕ ನಂದೀಶ್ ಇದ್ದರು ಎನ್ನಲಾಗಿದೆ.
ವರಿಷ್ಠರ ನಿರೀಕ್ಷೆ, ಸಂಘದ ಅಪೇಕ್ಷೆ:ಸಂಘಟನೆಯೊಳಗೆ ಹೊಸರಕ್ತ ಹರಿಯಬೇಕು ಎಂದು ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ಕಿವಿಮಾತು ಹೇಳಿದ್ದಾರೆ. ಪಕ್ಷಕ್ಕೊಂದು ಹೊಸ ಚೈತನ್ಯ ತುಂಬುವ ವಿಶ್ವಾಸವಿದೆ. ಯಾರೇನೇ ಅಂದರೂ ಕುಗ್ಗದೆ, ಜಗ್ಗದೆ ಪಕ್ಷದ ಒಳಿತನ್ನು ಗಮನದಲ್ಲಿರಿಸಿ ಮುಂದೆ ಸಾಗಬೇಕು ಎಂದು ಹುರಿದುಂಬಿಸಿದ್ದಾರೆ. ಪ್ರತಿ ಹಂತದಲ್ಲೂ ಸಂಘಟನೆಯೊಂದಿಗೆ ವಿಶ್ವಾಸ, ಕಾರ್ಯಕರ್ತರ ನಿಕಟತೆ, ಸಂಘದ ಮಾರ್ಗದರ್ಶನದಂತೆ ಸಾಗುವುದಾಗಿ ವಿಜಯೇಂದ್ರ ನಿವೇದಿಸಿದರು ಎನ್ನಲಾಗಿದೆ.
ಮುಂದಿನ ನಡೆ ಸುಳಿವು: ಕೇಶವ ಕೃಪಾಕ್ಕೆ ಭೇಟಿ ನೀಡುವ ಮುನ್ನ ವಿಜಯೇಂದ್ರ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಕುಮಾರ ಕೃಪಾ ಮತಗಟ್ಟೆ ಸಂಖ್ಯೆ 40ರ ಅಧ್ಯಕ್ಷ ಶಶಿಧರ ಮನೆಗೆ ತೆರಳಿ ಸಿಹಿ ತಿನ್ನಿಸಿ ಸಂಭ್ರಮದಲ್ಲಿ ಭಾಗಿಯಾದರು. ‘ಬೂತ್ ಗೆದ್ದರೆ ಚುನಾವಣೆಯಲ್ಲಿ ಗೆಲುವಿನ ದಾರಿ’ ಸುಗಮವೆಂಬ ಬಿಜೆಪಿ ರಾಷ್ಟ್ರೀಯ ನಾಯಕರ ಅದರಲ್ಲೂ ಕೇಂದ್ರ ಗೃಹ ಸಚಿತ ಅಮಿತ್ ಷಾ ಅವರ ಚಿಂತನೆ ದಾರಿಯಲ್ಲಿ ವಿಜಯೇಂದ್ರ ಹೆಜ್ಜೆ ಹಾಕಿ, ತಮ್ಮ ಮುಂದಿನ ನಡೆ ಹೇಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ. ವಿಜಯೇಂದ್ರಗೆ ಆಶೀರ್ವಾದ ಮಾಡಿದ ಬಿಎಸ್​ವೈ ಶೀಘ್ರ ಪದಗ್ರಹಣ ಮಾಡಿ, ಸಂಘಟನಾ ಕಾರ್ಯತತ್ಪ ರಾಗಬೇಕೆಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
15ರಂದು ಪದಗ್ರಹಣ?ಬಿಎಸ್​ವೈ ಸೂಚನೆ, ಸಂಘದ ಮಾರ್ಗದರ್ಶನದಂತೆ ಪಕ್ಷದ ಶಾಸಕಾಂಗದ ಪಕ್ಷದ ಸಭೆಗೆ ಮುನ್ನವೇ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲು ವಿಜಯೇಂದ್ರ ಯೋಚಿಸಿದ್ದಾರೆ. ದೀಪಾವಳಿ ಮರುದಿನ ಅಂದರೆ ನ.15ಕ್ಕೆ ಅರಮನೆ ಮೈದಾನದಲ್ಲಿ ಸಮಾರಂಭ ಆಯೋಜಿಸಲು ಪಕ್ಷ ಆಂತರಿಕವಾಗಿ ಸಿದ್ಧತೆ ಆರಂಭಿಸಿದೆ. ಇದಕ್ಕೂ ಮುನ್ನ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮಕ್ಷಮ ಪದಗ್ರಹಣಕ್ಕೆ ವಿಜಯೇಂದ್ರ ಒಲವು ತೋರಿದ್ದಾರೆ. ಒಂದು ವೇಳೆ ನಡ್ಡಾ ಕಾಲಾವಕಾಶ ಲಭ್ಯವಾಗದಿದ್ದರೆ ಬೇರೊಬ್ಬ ರಾಷ್ಟ್ರೀಯ ನಾಯಕನನ್ನು ಒಪ್ಪಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್​ಗೆ ಚುನಾವಣೆ ಮುಖೇನ ಉತ್ತರಬೆಂಗಳೂರು: ಅಧಿಕಾರದ ಬಲದಿಂದ ಕಾಂಗ್ರೆಸ್ ಪಕ್ಷ ಏನೇ ತಂತ್ರ, ಕುತಂತ್ರ ಮಾಡಲಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿನಗರ ವಿಧಾನಸಭೆ ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಗೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನ ಕೇಸ್, ಬೆದರಿಕೆ ತಂತ್ರಗಳಿಗೆ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲವೆಂದರು. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು.
ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ದೀಪಾವಳಿ ಶುಭಾಶಯ ಕೋರಿರುವೆ. ರಾಜ್ಯದ 58,282 ಬೂತ್​ಗಳಲ್ಲಿ ಪಕ್ಷದ ಸಂಘಟನೆಗೆ ಬಲಪಡಿಸಲಾಗುವುದು. ಪ್ರತಿ ಬೂತ್ ಅಧ್ಯಕ್ಷ, ಪೇಜ್ ಪ್ರಮುಖ ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರಿಕಲ್ಪನೆ ಹಾಗೂ ಚಿಂತನೆಯಾಗಿದೆ ಎಂದರು.
ಬಲ ತುಂಬಲು ಒತ್ತು:ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಹಂತದಿಂದಲೇ ಬೆಳೆದು ಬಂದವರು. ರಾಷ್ಟ್ರೀಯ ಚಿಂತನೆ ಪ್ರಕಾರ 58 ಸಾವಿರ ಬೂತ್​ಗಳಲ್ಲಿ ಸಂಘಟನೆಗೆ ಬಲ ತುಂಬಲು ಒತ್ತು ನೀಡುವೆ. ಇದರ ಭಾಗವಾಗಿ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿರುವೆ. ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನು ಗೌರವದಿಂದ ಕಾಣುವುದು ಬಿಜೆಪಿಯ ವಿಶೇಷತೆ ಎಂದು ವಿಜಯೇಂದ್ರ ಹೇಳಿದರು.
ಮಠ, ಮಂದಿರಗಳಿಗೆ ಭೇಟಿ ಇಂದು:ಬಿ.ವೈ.ವಿಜಯೇಂದ್ರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭಾನುವಾರ ಬೆಳಗ್ಗೆ 9.30ಕ್ಕೆ ಭೇಟಿ ನೀಡುವರು. ನಂತರ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ.
ಸಾಣೇಹಳ್ಳಿ ಸ್ವಾಮೀಜಿ ವಿರುದ್ಧ ದೂರು ನೀಡಿದ ಪ್ರಶಾಂತ್ ಸಂಬರಗಿ

ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ಗೆ ನೋಟಿಸ್: ಮಹಿಳೆಗೆ ನಟ ದರ್ಶನ್ ಸಾಕಿದ ನಾಯಿ ಕಚ್ಚಿದ್ದ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
