ಬೆಂಗಳೂರು:ರಾಜ್ಯ​ ಸರ್ಕಾರದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಹಸ್ತಕ್ಷೇಪ ಮಾಡಿರುವುದನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ.
ಟ್ವೀಟ್​ ಮಾಡಿರುವ ಬಿಜೆಪಿ, ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ “ರಹಸ್ಯ ಸಭೆ”ಯು ಕರ್ನಾಟಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ‘ಗಾಂಧಿಗಳ’ ಮತ್ತೊಂದು ಮಾರ್ಗವಾಗಿದೆ. ಗಾಂಧಿ ಕುಟುಂಬದವರು ತಮ್ಮ ಆಪ್ತ ಸಹಾಯಕ ರಣದೀಪ್ ಸುರ್ಜೆವಾಲ ಅವರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ಕರ್ನಾಟಕದ ವಿಷಯಗಳ ಬಗ್ಗೆ ನಿರ್ಧರಿಸಲು ಬಿಡಿಎ, ಬಿಬಿಎಂಪಿ ಅಥವಾ ಸರ್ಕಾರದಲ್ಲಿ ಸುರ್ಜೇವಾಲ ಅವರು ಯಾವುದೇ ಸ್ಥಾನವನ್ನು ಹೊಂದಿರುವುದಿಲ್ಲ. ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಲು ಸುರ್ಜೇವಾಲ ಅವರಿಗೆ ಏನು ಅಧಿಕಾರ ಇದೆ. 2024ರ ಚುನಾವಣೆಗೆ ಮುಂಚಿತವಾಗಿ ಹಣವನ್ನು ಸಂಗ್ರಹಿಸಲು ಎಟಿಎಂ ಸರ್ಕಾರದ ಮೂಲಕ ಶೇ. 85 ಡೀಲ್‌ಗಳನ್ನು ಆಯೋಜಿಸಲಾಗುತ್ತಿದೆಯೇ? ಎಂದು ಬಿಜೆಪಿ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದೆ.
ಇದನ್ನೂ ಓದಿ:ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಐಎಎಸ್​ ಅಧಿಕಾರಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಪತ್ನಿ!
The “secret meeting” held at Bangalore’s Shangri-La Hotel is just another way of ‘Gandhis!’ trying to control Karnataka.
The family have sent their close aide Randeep Surjewala, who neither holds any position at BDA/BBMP nor in the government to decide on Karnataka’s matters.…pic.twitter.com/CTioPhUh0S
— BJP Karnataka (@BJP4Karnataka)June 13, 2023

ನಿನ್ನೆ ಶಾಂಗ್ರಿಲಾ ಹೋಟೆಲ್​ನಲ್ಲಿ ನಡೆದ ಸಭೆಗೆ ಸಂಬಂಧಿಸಿದ ಫೋಟೋವನ್ನು ಜಮೀರ್​ ಅಹ್ಮದ್​ ಖಾನ್​ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಅದೊಂದು ರಹಸ್ಯ ಸಭೆಯಾಗಿತ್ತು. ಸಭೆಯಲ್ಲಿ ಸಚಿವರು, ಶಾಕಸರು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯ ನೇತೃತ್ವವನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಹಿಸಿದ್ದರು. ಈ ಸಭೆ ಬಗ್ಗೆ ಜಮೀಟ್​ ಟ್ವೀಟ್ ಮಾಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್​ಗೆ ಇದು ಬ್ರಹ್ಮಾಸ್ತ್ರವಾಗಿದೆ. ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿವೆ.
ಸಭೆಯ ಫೋಟೋ ಟ್ವೀಟ್ ಮಾಡಿದ್ದಕ್ಕೆ ಜಮೀರ್ ಅಹ್ಮದ್​ ಮೇಲೆ ಸುರ್ಜೇವಾಲ ಗರಂ ಆಗಿದ್ದಾರೆ. ಗೌಪ್ಯ ಸಭೆಯ ಬಗ್ಗೆ ಯಾಕೆ ಟ್ವೀಟ್ ‌ಮಾಡಿದ್ರಿ ಅಂತ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಸುರ್ಜೇವಾಲ ಗರಂ ಆಗುತ್ತಿದ್ದಂತೆ ಜಮೀರ್​ ಸೈಲೆಂಟ್ ಆಗಿದ್ದು, ಟ್ವೀಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ಮತ್ತೆ ಇಂತಹ ತಪ್ಪು ಮಾಡದಂತೆ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸಿಸ್​)
ಬೆಂಗ್ಳೂರಿನ ಮಾರುಕಟ್ಟೆಗಳಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಗ್ಯಾರಂಟಿ ಎಫೆಕ್ಟ್ ಎಂದು ಕಾಂಗ್ರೆಸ್​ ವಿರುದ್ಧ ಜನಾಕ್ರೋಶ

ಪಾಕಿಸ್ತಾನಿ ಯೂಟ್ಯೂಬರ್​ನಿಂದ ಭಾರತ ಪ್ರವಾಸ: ಭಾರತೀಯರ ಆತಿಥ್ಯಕ್ಕೆ ಪಾಕ್​ ವ್ಲಾಗರ್​ ಫಿದಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − two =
Remember me
