ಮೃತ್ಯುಂಜಯ ಕಪಗಲ್ಬೆಂಗಳೂರು:ವಿಧಾನಸಭೆ ಚುನಾವಣೆಗೆ ಆಡಳಿತಪಕ್ಷ ಬಿಜೆಪಿ ಬಿರುಸಿನ ತಯಾರಿ ನಡೆಸಿರುವ ಮಧ್ಯೆ ಕ್ಷೇತ್ರವಾರು ಟಿಕೆಟ್ ಹಂಚಿಕೆ ಅಂತಿಮ ಗೊಳಿಸುವುದಕ್ಕೆ 4 ಹಂತಗಳನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳ ಆಯ್ಕೆ ಮಾನದಂಡ ಮತ್ತು ವಿಧಾನದ ಕುರಿತು ಪಕ್ಷದ ರಾಜ್ಯ ಪ್ರಮುಖರ ಸಭೆಯಲ್ಲಿ ಗಂಭೀರ ಚರ್ಚೆಯಾಗಿ, 4 ಹಂತಗಳ ಪ್ರಕ್ರಿಯೆಗೆ ನಿರ್ಧಾರವಾಗಿದೆ. ಮೊದಲ ಹಂತದಲ್ಲಿ ಹಾಲಿ ಶಾಸಕರು ಒಳಗೊಂಡು ತಾಲೂಕು ಸಮಿತಿಗಳು ತಲಾ 3 ಸಂಭಾವ್ಯರ ಹೆಸರುಗಳನ್ನು ಕಳುಹಿಸುತ್ತವೆ. ಜಿಲ್ಲಾ ಸಮಿತಿ ಪರಿಶೀಲಿಸಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ ಮೂವರು ಹೆಸರುಗಳ ಪಟ್ಟಿ ಕಳುಹಿಸಲಿದ್ದು, ಮೂರನೇ ಹಂತವಾಗಿ ರಾಜ್ಯ ಕೋರ್ ಕಮಿಟಿ ಸಭೆ ಪಟ್ಟಿ ಬಗ್ಗೆ ವಿಸõತ ಚರ್ಚೆ ನಡೆಸಿ 2 ವಿಭಾಗಗಳಲ್ಲಿ ಪಟ್ಟಿ ದೆಹಲಿಗೆ ರವಾನಿಸಲಿದೆ. ಗೆಲ್ಲುವ ಸಾಮರ್ಥ್ಯವುಳ್ಳವರು, ಸ್ವಲ್ಪ ಪ್ರಯತ್ನಿಸಿದರೆ ಗೆಲ್ಲುವವರು ಎಂಬ ವರ್ಗೀಕರಣ ಜತೆಗೆ ಹೆಚ್ಚು ಕಸರತ್ತಿನ ಸಂಭಾವ್ಯರ ಪಟ್ಟಿಯೂ ಇರಲಿದೆ.
ವರದಿಗಳ ಸಾರ:ಒಟ್ಟಾರೆ 86 ರಿಂದ 88 ಸ್ಥಾನಗಳಲ್ಲಿ ಪಕ್ಷ ಜಯ ಸಾಧಿಸಲಿದೆ ಎನ್ನುವುದು ವಿಧಾನಸಭೆ ಕ್ಷೇತ್ರವಾರು ಬಾಹ್ಯ ಮತ್ತು ಆಂತರಿಕ ಸಮೀಕ್ಷೆ ನಡೆಸಿದ ನಾಲ್ಕು ವರದಿಗಳ ಸಾರ ಎಂದು ಮೂಲಗಳು ಹೇಳಿವೆ. ಈ ಪೈಕಿ 63 ಸ್ಥಾನಗಳಲ್ಲಿ ಗೆಲ್ಲುವ ಸಾಮರ್ಥ್ಯ (ಎ ಶ್ರೇಣಿ), ಸ್ವಲ್ಪ ಪ್ರಯತ್ನಿಸಿದರೆ ಇನ್ನೂ 23 ರಿಂದ 25 ಸ್ಥಾನಗಳಲ್ಲಿ ಜಯ (ಬಿ ಶ್ರೇಣಿ) ಲಭಿಸಲಿದೆ. ಸ್ವಂತ ಬಲದ ಮೇಲೆ ಮತ್ತೆ ಅಧಿಕಾರ ಸ್ಥಾಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ಅನಿವಾರ್ಯ ಎಂದು ಪ್ರಮುಖರ ಸಭೆ ಅಭಿಪ್ರಾಯಪಟ್ಟಿದೆ. ಪ್ರಯಾಸದಾಯಕ ಕ್ಷೇತ್ರಗಳನ್ನು ಸಿ ಮತ್ತು ಡಿ ಶ್ರೇಣಿಗಳನ್ನಾಗಿ ವಿಂಗಡಿಸಿದ್ದು, ವಿಸ್ತಾರಕರ ಬಲ ಬಳಕೆ ಹಾಗೂ ಅನ್ಯ ಪಕ್ಷಗಳ ಪ್ರಭಾವಿಗಳನ್ನು ಸೆಳೆಯುವ ಚಿಂತನೆ ನಡೆಸಿದೆ. ಪ್ರತಿಪಕ್ಷಗಳ ಪ್ರಚಾರದ ವೇಗ, ಜನರನ್ನು ಜಮಾಯಿಸುವ ರೀತಿಗೆ ಹೋಲಿಸಿದರೆ ನಾವು ಹಿಂದಿದ್ದೇವೆ ಎಂಬ ಚಿಂತೆ ಈ ಸಭೆಯಲ್ಲೂ ವ್ಯಕ್ತವಾಗಿದ್ದು, ಹೆಚ್ಚೆಚ್ಚು ಜನರನ್ನು ಸೇರಿಸುವ ಅಬ್ಬರದ ಸಮಾವೇಶ ನಡೆಸಲು ತೀರ್ವನಿಸಿದೆ. ಅಲ್ಲದೆ, ಮಾರ್ಚ್ ಮೂರನೇ ವಾರದಲ್ಲಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಹೆಸರಿನಲ್ಲಿ ಭಾರಿ ಜನಬಲ ಪ್ರದರ್ಶಿಸಿ ಸಿದ್ದರಾಮೋತ್ಸವಕ್ಕೆ ಪ್ರತ್ಯುತ್ತರ ನೀಡಲಿದೆ ಎಂದು ತಿಳಿದು ಬಂದಿದೆ.
ಚುನಾವಣೆಗೆ ಪ್ರಧಾನ್ ಸಾರಥಿ; ಇಬ್ಬರು ಸಹ ಉಸ್ತುವಾರಿಗಳು
ರಾಜ್ಯದಲ್ಲಿ ಬಿಜೆಪಿ ಚುನಾವಣಾ ಹೊಣೆಗಾರಿಕೆ ಮತ್ತೊಮ್ಮೆ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಹೆಗಲೇರಿದೆ. ಸಂಘಟನಾತ್ಮಕ ನೈಪುಣ್ಯ ಹಾಗೂ ಆಡಳಿತಾತ್ಮಕ ಅನುಭವದ ಆಧಾರದಲ್ಲಿ ಮೋದಿ-ಷಾ ಜೋಡಿ ಈ ಜವಾಬ್ದಾರಿ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಸಹ ಉಸ್ತುವಾರಿ, ಕೇಂದ್ರದ ಮತ್ತೊಬ್ಬ ಸಚಿವ ಮನ್​ಸುಖ್ ಮಂಡವಿಯಾ ಹೆಚ್ಚುವರಿ ಸಹ ಉಸ್ತುವಾರಿಯಾಗಿದ್ದಾರೆ. ರಾಜ್ಯ ಕೋರ್ ಕಮಿಟಿ ಸಭೆ ನಡೆದ ಮರುದಿನವೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇಮಕ ಆದೇಶ ಹೊರಡಿಸಿದ್ದಾರೆ. ಪಕ್ಷ ವಿಭಜನೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದ 2013ರಲ್ಲಿ ಪ್ರಧಾನ್ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದರು. ಪಕ್ಷದ ಉನ್ನತ ಹುದ್ದೆ, ಜತೆಗೆ ಸಚಿವರಾಗಿಯೂ ಹೊಂದಿದ ಅನುಭವ ಪರಿಗಣಿಸಿಯೇ ಈ ಹೊಣೆ ನೀಡಲಾಗಿದೆ.
ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಗುರುತಿಸಿಕೊಂಡಿದ್ದು, ಯುವಜನರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಬೆರೆಯಬಲ್ಲವರು. ನಾಲ್ಕೈದು ಭಾಷೆಗಳ ಮೇಲೆ ಹಿಡಿತ, ತಮಿಳು ಭಾಷಿಕರ ಮೇಲೆ ಪ್ರಭಾವ ಬೀರಬಹುದು ಎನ್ನುವ ಲೆಕ್ಕಾಚಾರವಿದೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್​ಸುಖ್ ಮಂಡವಿಯಾ ಕಾರ್ಯತಂತ್ರ ಹಾಗೂ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ನಿಪುಣರು ಎಂಬುದು ವಿಶೇಷ.
ಕಾಂಗ್ರೆಸ್​ನತ್ತ ಲಕ್ಷ್ಯ
ನಾಲ್ಕು ಮತ್ತು ಅಂತಿಮ ಹಂತದಲ್ಲಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದ್ದು, ಕಾಂಗ್ರೆಸ್ ಪಟ್ಟಿ ಬಿಡುಗಡೆಯಾದ ನಂತರವೇ ಉಮೇದುವಾರರ ಹೆಸರು ಘೋಷಣೆ ಆಗುವ ಸಾಧ್ಯತೆಗಳಿವೆ. ಪಕ್ಷ ದುರ್ಬಲ ಆಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್​ನ ಅಸಮಾಧಾನಿತರಿಗೆ ಗಾಳ ಹಾಕಲೆಂದು ಕಮಲ ಪಡೆ ಈ ತಂತ್ರಗಾರಿಕೆ ಅನುಸರಿಸಲಿದೆ ಎನ್ನಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
