ಬೆಂಗಳೂರು:ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮನವೊಲಿಸಿ ಮೇಕೆದಾಟು ಯೋಜನೆ ಜಾರಿಯಾಗುವಂತೆ ಮಾಡಿ, ಇಲ್ಲವೇ ತೀರ್ಥಯಾತ್ರೆಗೆ ಸಜ್ಜಾಗಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಒಡ್ಡಲು ಬಿಜೆಪಿ ಸಜ್ಜಾಗುತ್ತಿದೆ. ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ರಿ? ಈಗೇಕೆ ಇದ್ದಕ್ಕಿದ್ದಂತೆ ಸುಮ್ಮನಾದ್ರಿ? ಅಂತ ಕೇಳುವುದು ಬಿಜೆಪಿಯ ಈಗಿನ ಪ್ಲ್ಯಾನ್​.
ಇದನ್ನೂ ಓದಿ:ಕಾಂಗ್ರೆಸ್​​ನವರಿಂದ ಪ್ರಧಾನಿ ಮೋದಿಗೆ 15 ರೂ. ಮನಿಯಾರ್ಡರ್​!; ಯಾಕೆ, ಏನು? ಇಲ್ಲಿದೆ ಮಾಹಿತಿ..
ಮೇಕೆದಾಟು ಯೋಜನೆಯ ಜಾರಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ ಎಂದರೂ, ಅದೆಲ್ಲ ಗೊತ್ತಿಲ್ಲ. ನೀವು ಯೋಜನೆ ಜಾರಿ ಮಾಡ್ಲೇಬೇಕು ಅಂತ ರಂಪ ಮಾಡಿದ್ರಿ. ಹೇಗಿದ್ದರೂ ನಿಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಂದಿದ್ದರು. ಅರ್ಥಾತ್, ಅವರು ನಮಗಿಂತ ನಿಮಗೆ ಕ್ಲೋಸು, ಭಾರತದ ರಾಜಕಾರಣ ಹೇಗಿರಬೇಕು ಅಂತ ನಿಮ್ಮ ಜತೆ ಸೇರಿ ನಿರ್ಧರಿಸುವವರು. ಹೀಗಾಗಿ ಅವರಿಗೆ ನೀವು ಹೇಳಿದರೆ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ತಕರಾರು ಮಾಡದೆ ಒಪ್ಪುತ್ತಾರೆ. ಹೀಗಾಗಿ ಮೊದಲು ಸ್ಟಾಲಿನ್ ಅವರ ಜತೆ ಮಾತನಾಡಿಸಿ ಕರ್ನಾಟಕ ಜಾರಿಗೊಳಿಸಲು ಬಯಸಿರುವ ಮೇಕೆದಾಟು ಯೋಜನೆಗೆ ನಮ್ಮ ತಕರಾರಿಲ್ಲ ಅಂತ ಹೇಳಿಸಿ ಎಂದು ಬಿಜೆಪಿ ಆಗ್ರಹಿಸಲಿದೆ.
ಇದನ್ನೂ ಓದಿ:ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆ, ಎರಡು ರೀತಿಯ ವಿಸ್ತರಣೆಗೆ ಪ್ರಸ್ತಾವನೆ: ಇಲ್ಲಿದೆ ವಿವರ..
ಒಂದು ವೇಳೆ ಹಾಗೆ ಮಾಡದಿದ್ದರೆ ನೀವು ಮಾಡಿದ ಪಾದಯಾತ್ರೆ ರಾಜಕೀಯ ಲಾಭಕ್ಕಾಗಿ ಮಾಡಿದ ಢೋಂಗಿಯಾತ್ರೆ ಆಗುತ್ತದೆ. ಅಷ್ಟೇ ಅಲ್ಲ, ನಿಮ್ಮ ತೀರ್ಥಯಾತ್ರೆಗೆ ಕಾರಣವೂ ಆಗಲಿದೆ ಎಂದು ಡಿಕೆಶಿ ಅವರಿಗೆ ಎಚ್ಚರಿಕೆ ನೀಡಲು ಬಿಜೆಪಿ ಸಜ್ಜಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ‘ಪಾದಯಾತ್ರೆ ಅಷ್ಟೇ ಅಲ್ಲ, ತೀರ್ಥಯಾತ್ರೆಗೆ ಸಜ್ಜಾಗಿ’ ಎಂಬ ಸ್ಲೋಗನ್​ನೊಂದಿಗೆ ಜೂನ್ ತಿಂಗಳಲ್ಲಿ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ.
ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

ಪಠ್ಯಪುಸ್ತಕ ಪರಿಷ್ಕರಣೆ ಮಾಡೇ ಮಾಡುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
