ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಾನೂನು ಬಾಹಿರವಾಗಿ 10 ಸಾವಿರ ನಿವೇಶನಗಳನ್ನು ಮಂಜೂರು ಮಾಡಿ, ಶುದ್ಧ ಕ್ರಯಪತ್ರ ನೀಡಿದೆ. ಇವೆಲ್ಲವನ್ನು ರದ್ದುಪಡಿಸಿ ಸಾವಿರಾರು ಕೋಟಿ ರೂ.ಗಳ ನಷ್ಟ ತಪ್ಪಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಒತ್ತಾಯಿಸಿದೆ.
ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಈ ಕುರಿತು ದೂರು ಸಲ್ಲಿಸಿದ್ದಾರೆ. ಜತೆಗೆ ತಾಂತ್ರಿಕ ಪರಿಣತರ ಸಮಿತಿ ವರದಿ, 2023, ಅಕ್ಟೋಬರ್ 27ರ ಸರ್ಕಾರಿ ಆದೇಶದ ಪ್ರತಿ ಹಾಗೂ ಮುಡಾ ಸೆಕ್ಯೂರಿಟಿ ಬಾಂಡ್‌ಗಳ ನಕಲು ಪ್ರತಿಗಳನ್ನು ಲಗತ್ತಿಸಿದ್ದಾರೆ.
ಕಾನೂನುಬಾಹಿರವಾಗಿ 50:50 ಅನುಪಾತದಿ ನಿವೇಶನ ಮಂಜೂರು ಮಾಡಿದ್ದಲ್ಲದೆ, ಅಕ್ರಮವಾಗಿ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿದೆ. ಸಾವಿರಾರು ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂದು ದೂರಿದ್ದಾರೆ.
ಕಾಯ್ದೆ, ನಿಯಮ ಉಲ್ಲಂಸಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ನೀಡುವ ನಿರ್ಣಯ ಮಾಡಿಕೊಂಡು, ಸರ್ಕಾರದ ಅನುಮೋದನೆ ಪಡೆಯದೆ, ನಕಲಿ ದಾಖಲೆ ಸೃಷ್ಟಿ, ಜಿಪಿಎ ಹೋಲ್ಡರ್‌ಗಳ ಹೆಸರಿನಲ್ಲಿ ಮನಸೋಇಚ್ಛೆ ಕ್ರಯಪತ್ರ ಮಾಡಿಕೊಡಲಾಗಿದೆ.
ನಿವೇಶನ ಅಕ್ರಮವಾಗಿ ಮಂಜೂರು, ಕ್ರಯಪತ್ರ ಮಾಡಿದ ಅಧಿಸೂಚನೆಗಳನ್ನು ರದ್ದುಪಡಿಸಬೇಕು. ಈ ಹಗರಣದಲ್ಲಿ ಶಾಮೀಲಾಗಿರುವ ಮುಡಾ ಹಿಂದಿನ ಆಯುಕ್ತರಾದ ನಟೇಶ್, ಜಿ.ಟಿ.ದಿನೇಶ್ ಕುಮಾರ ಸೇರಿ ಎಲ್ಲ ಅಧಿಕಾರಿಗಳ ಕ್ರಿಮಿನಲ್ ಮೊಕದ್ದಮೆ ಹೂಡಿ, ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಮುಡಾ ನಿವೇಶನಗಳ ಹಂಚಿಕೆ ಅಕ್ರಮದ ಬಗ್ಗೆ ದಾಖಲೆಗಳ ಪ್ರತಿಗಳೊಂದಿಗೆ ಸಲ್ಲಿಸಿರುವ ಈ ದೂರಿನ ಅನ್ವಯ ಒಂದು ವಾರದೊಳಗೆ ಕ್ರಮವಹಿಸದಿದ್ದರೆ, ಇದರಲ್ಲಿ ನೀವೂ ಭಾಗಿದಾರರು ಎಂದು ಪರಿಗಣಿಸಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ರಘು ಕೌಟಿಲ್ಯ ಎಚ್ಚರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
