| ಗಂಗಾಧರ್ ಬೈರಾಪಟ್ಟಣ ರಾಮನಗರ
ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎರಡು ದಶಕದಿಂದ ತಮ್ಮದೇ ಪ್ರಭಾವ ಉಳಿಸಿಕೊಂಡಿರುವ ಪುಟ್ಟಣ್ಣ ಅವರ ಗೆಲುವಿನ ಓಟಕ್ಕೆ ಈ ಬಾರಿ ಯಾರು ಬ್ರೇಕ್ ಹಾಕ ಲಿದ್ದಾರೆ ಎನ್ನುವ ಚರ್ಚೆಗಳು ಆರಂಭಗೊಂಡಿವೆ.
ಒಂದೆಡೆ ಸತತ ಗೆಲುವಿನ ಬಲ, ಮತ್ತೊಂದೆಡೆ ಪಕ್ಷಾಂತರದ ಕಳಂಕ ಹೊತ್ತಿರುವ ಪುಟ್ಟಣ್ಣ ಅವರನ್ನು ಈ ಬಾರಿ ಮಣಿಸಿಯೇ ತೀರುತ್ತೇವೆ ಎನ್ನುವ ಪ್ರತಿಜ್ಞೆ ಮಾಡಿದವರಂತೆ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಮತ್ತು ಕಾಂಗ್ರೆಸ್​ನ ಸಂಭಾವ್ಯ ಅಭ್ಯರ್ಥಿ ಪ್ರವೀಣ್ ಪೀಟರ್ ಅಖಾಡಕ್ಕೆ ಇಳಿದಿದ್ದು, ಚುನಾವಣೆ ಕಣ ರಂಗೇರುವಂತೆ ಮಾಡಿದೆ.
ಶಾಸಕರ ಬಲ:ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ 36 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಮನಗರದ 4, ಬೆಂಗಳೂರು ನಗರದ 26 ಮತ್ತು ಬೆಂ.ಗ್ರಾಮಾಂತರದ 6 ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿದ್ದರೆ, ಒಬ್ಬ ಪಕ್ಷೇತರ ಹಾಗೂ ರಾಜರಾಜೇಶ್ವರಿ ನಗರದ ಕ್ಷೇತ್ರದ ಚುನಾವಣೆ ಈಗಷ್ಟೇ ನಡೆಯಬೇಕಿದೆ. ಉಳಿದ 6 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಪಕ್ಷ-ವರ್ಚಸ್ಸಿನ ನಡುವೆ ಹೋರಾಟ
ಮೇಲ್ನೋಟಕ್ಕೆ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆದರೂ ಈ ಚುನಾವಣೆ ವ್ಯಕ್ತಿ ವರ್ಚಸ್ಸಿನ ಚುನಾವಣೆ ಆಗಿಯೇ ಬಿಂಬಿತವಾಗಿದೆ. ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಜೆಡಿಎಸ್​ನಲ್ಲಿದ್ದ ಪುಟ್ಟಣ್ಣ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇದೇ ಮಾನದಂಡದ ಮೇಲೆ ಈ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದರೂ ಅವರು ನೆಚ್ಚಿಕೊಂಡಿರುವುದು ವೈಯಕ್ತಿಕ ವರ್ಚಸ್ಸನ್ನೇ. ಆದರೆ, ವೃತ್ತಿಯಲ್ಲಿ ವಕೀಲರೂ ಆಗಿರುವ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಪಕ್ಷದ ಚಿಹ್ನೆಯ ಮೇಲೆ ಅವಲಂಬಿತರಾಗಿದ್ದು, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಶಿಕ್ಷಕರ ಕ್ಷೇತ್ರ ಮತ್ತು ರಾಜ್ಯಕ್ಕೆ ನೀಡಿದ ಕೊಡುಗೆಯ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ನ ಸಂಭಾವ್ಯ ಅಭ್ಯರ್ಥಿ ಪ್ರವೀಣ್ ಪೀಟರ್ ಅವರಿಗೂ ಪಕ್ಷದ ನಾಮಬಲವೇ ಶ್ರೀರಕ್ಷೆಯಾಗಿದೆ.
ನಕಲಿ ಮತದಾರರ ಹಾವಳಿ
ನಕಲಿ ಮತದಾರರ ಹಾವಳಿ ವಿದ್ಯಾವಂತರ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ, ಇದರ ವಿರುದ್ಧ ಜೆಡಿಎಸ್ ಅಭ್ಯರ್ಥಿ ರಂಗನಾಥ್ ಹೋರಾಟ ನಡೆಸಿ, ಪ್ರಕರಣವನ್ನು ಕೋರ್ಟ್ ಬಾಗಿಲಿಗೂ ತಂದು ನಿಲ್ಲಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನಾಲ್ಕು ಸಾವಿರ ನಕಲಿ ಮತದಾರರಿದ್ದು, ಇವರೇ ಪುಟ್ಟಣ್ಣ ಗೆಲುವಿಗೆ ಶ್ರೀರಕ್ಷೆಯಾಗಿದ್ದರು ಎನ್ನುವುದು ರಂಗನಾಥ್ ಆರೋಪ. ನಕಲಿ ಇದ್ದರೆ ಪತ್ತೆ ಹಚ್ಚಿ ನ್ಯಾಯಸಮ್ಮತ ಚುನಾವಣೆ ನಡೆಸಲಿ ಎನ್ನುವುದು ಪುಟ್ಟಣ್ಣ ಪ್ರತಿ ಸವಾಲು. ಆದರೆ, ಅಂತಿಮ ಮತದಾರರ ಪಟ್ಟಿ ಅ.9ಕ್ಕೆ ಹೊರಬರಲಿದ್ದು, ನೈಜ ಚಿತ್ರಣ ಹೊರ ಬೀಳಬೇಕಿದೆ.
ತಂತ್ರಗಾರಿಕೆ ಫಲಿಸುವುದೇ?
ಕಳೆದ ಚುನಾವಣೆಗಳಲ್ಲಿ ಜೆಡಿಎಸ್​ಗೆ ಬಿಜೆಪಿಯೇ ಎದುರಾಳಿಯಾಗಿತ್ತು. ಆದರೆ, ಮೂರು ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಈ ಬಾರಿ, ಜೆಡಿಎಸ್​ಗೆ ಎದುರಾಳಿಯಾಗಿ ದ್ದಾರೆ. ಆದರೆ, ಪುಟ್ಟಣ್ಣ ಅನುಭವದ ಎದುರು ಎ.ಪಿ.ರಂಗನಾಥ್ ಹೇಗೆ ತಂತ್ರಗಾರಿಕೆ ಮಾಡುತ್ತಾರೆ ಎನ್ನುವುದು ಕುತೂಹಲಕರ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
