ಬೆಂಗಳೂರು:ರಾಜ್ಯಸಭೆ ಚುನಾವಣೆ ಸ್ಪರ್ಧೆಗೆ ಬಿಜೆಪಿ ವರಿಷ್ಠರ ಹಂತದಲ್ಲಿ ಕಾರ್ಯತಂತ್ರ ರೂಪುಗೊಳ್ಳುತ್ತಿದ್ದು, ಪಕ್ಷದ ರಾಜ್ಯ ನಾಯಕರು ಕಾತರದ ದೃಷ್ಟಿ ನೆಟ್ಟಿದ್ದಾರೆ. ಪಕ್ಷದ ಸಂಸದೀಯ ಮಂಡಳಿ ಸಭೆ ಭಾನುವಾರ ನಡೆಯಲಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಸೋಮವಾರ ಬಿಡುಗಡೆ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಸೂಚಕರಿಗೆ ತೋರಿಸಿಯೇ ಮತ ಚಲಾವಣೆ ಮಾಡಬೇಕಿರುವ ಕಾರಣ ಜೂ.10ರ ಮತದಾನ ಗಮನಾರ್ಹವಾಗಲಿದೆ. ಆಡಳಿತ ಬಿಜೆಪಿ ಮೂರನೇ ಅಭ್ಯರ್ಥಿ, ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಚಿಸಿದ್ದರೆ, ಅಗತ್ಯ ಸಂಖ್ಯಾಬಲವಿಲ್ಲದ ಜೆಡಿಎಸ್ ಕೂಡ ಕಣಕ್ಕೆ ಇಳಿಯಲು ನಿರ್ಧರಿಸಿರುವ ಕಾರಣ ಸ್ಪರ್ಧೆ ತುರುಸಾಗುವ ಲಕ್ಷಣಗಳಿವೆ. ಹಾಲಿ ಸದಸ್ಯರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ ಸೇರಿ ಐವರ ಹೆಸರನ್ನು ಶಿಫಾರಸು ಮಾಡಿ ರಾಜ್ಯ ಕೋರ್ ಕಮಿಟಿ ತನ್ನ ಹೊಣೆ ಪೂರೈಸಿದೆ.
ನೆಲೆ ಡೋಲಾಯಮಾನ:ಹಾಲಿ ಸದಸ್ಯರಿಬ್ಬರ ನೆಲೆಯೇ ಸದ್ಯಕ್ಕೆ ಡೋಲಾಯಮಾನವಾಗಿದೆ. ಉತ್ತರಪ್ರದೇಶದಿಂದ ಅತಿಹೆಚ್ಚು 11 ಸದಸ್ಯರು ನಿವೃತ್ತರಾಗುತ್ತಿದ್ದು, ಆ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡುವ ಬಲವಿದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಅವರನ್ನು ಉತ್ತರಪ್ರದೇಶದಿಂದ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದು, ಕೆ.ಸಿ.ರಾಮಮೂರ್ತಿ ಭವಿಷ್ಯ ಸದ್ಯಕ್ಕೆ ಅನಿಶ್ಚಿತ ಎನ್ನಲಾಗಿದೆ. ಹಿಂದೆ ಬೇರೆ ಪಕ್ಷದ ನಾಲ್ವರನ್ನು ಸೆಳೆದ ಬಿಜೆಪಿ, ರಾಜ್ಯಸಭೆಯಲ್ಲಿ ತನ್ನ ಬಲ ವೃದ್ಧಿಸಿಕೊಂಡಿತ್ತು. ಕಾಂಗ್ರೆಸ್​ನ ಕೆ.ಸಿ.ರಾಮಮೂರ್ತಿ ಈ ಪೈಕಿ ಒಬ್ಬರಾಗಿದ್ದರು. ವರಿಷ್ಠರು ನೀಡಿದ ವಾಗ್ದಾನದಂತೆ ನಾಲ್ವರಿಗೆ ಮತ್ತೆ ಅವಕಾಶ ಸಿಗಲಿದೆ. ಇಲ್ಲವೇ ರಾಮಮೂರ್ತಿ ಅವರನ್ನು ರಾಜ್ಯಸಭೆ ಬದಲು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿ ಇಶಾರೆ ಅವಲಂಬನೆ:ತಲಾ 45 ಮತಗಳ ಕೋಟಾ ಲೆಕ್ಕದಂತೆ ಬಿಜೆಪಿ ತನಗಿರುವ ಬಲದಿಂದ ಇಬ್ಬರನ್ನು ನಿರಾಯಸವಾಗಿ ಗೆಲ್ಲಿಸಲಿದ್ದು, ಹೆಚ್ಚುವರಿ 32 ಮತಗಳ ಆಧಾರದಲ್ಲಿ ಮೂರನೇ ಅಭ್ಯರ್ಥಿ ಬಗ್ಗೆ ಯೋಚಿಸುತ್ತಿದೆ. 3ನೇ ಅಭ್ಯರ್ಥಿ ಭವಿಷ್ಯವು ಪ್ರಧಾನಿ ನರೇಂದ್ರ ಮೋದಿ ಇಶಾರೆ ಅವಲಂಬಿಸಿದ್ದು, ಕೈ ತೋರಿಸಿ ಅವಲಕ್ಷಣ ಮಾಡಿಕೊಳ್ಳುವುದಕ್ಕಿಂತ ತಟಸ್ಥವಾಗಿರುವುದು ಲೇಸು ಎಂಬ ಚರ್ಚೆ ನಡೆದಿದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತೀರ್ವನಿಸಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಯನ್ನು ಕಾದು ನೋಡಲು ಬಿಜೆಪಿ ನಿರ್ಧರಿಸಿದ್ದು, ಸದ್ಯದ ಲೆಕ್ಕಾಚಾರದಂತೆ ಮೂರನೇ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುವುದು ಅನುಮಾನವೆಂದು ಮೂಲಗಳು ಮಾಹಿತಿ ನೀಡಿವೆ. ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚೆ ನಡೆಸಿರಬಹುದೆಂಬುದು ರಾಜ್ಯ ಬಿಜೆಪಿ ನಾಯಕರ ನಿರೀಕ್ಷೆಯಾಗಿದೆ. ಅದಕ್ಕಾಗಿಯೇ ಪ್ರಧಾನಿ ಕಡೆ ನೋಟ ಬೀರಿದ್ದಾರೆ.
ಹಾಸನ: ಯಡಿಯೂರಪ್ಪ ರಾಜಕೀಯದಲ್ಲಿ ಬೆಳೆಯುತ್ತಾರೆ ಎಂದು ಅಸೂಯೆಪಟ್ಟವರು ಕಾರಿಗೆ ಕಲ್ಲು ಹೊಡೆಸಿದರು. ಆದರೆ ಅವುಗಳನ್ನೇ ಅಡಿಪಾಯ ಮಾಡಿಕೊಂಡು ಎಲ್ಲ ವರ್ಗದ ಮಠಮಾನ್ಯಗಳ ಶ್ರೀಗಳ ಆಶೀರ್ವಾದದಿಂದ ಅವರು 4 ಬಾರಿ ಸಿಎಂ ಆದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಹೊಳೆನರಸೀಪುರದಲ್ಲಿ ಶನಿವಾರ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ 115ನೇ ಜಯಂತ್ಯೋತ್ಸವದಲ್ಲಿ ಮಾತನಾಡಿ, ರಾಜ್ಯಕ್ಕೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಬಸವಣ್ಣ ನವರ ವಿಚಾರಗಳನ್ನು ರಕ್ತಗತ ಮಾಡಿಕೊಂಡಿರುವ ಬಿಎಸ್​ವೈ, ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು-ಸಮಪಾಲು ನೀಡಲು ಹೋರಾಡುತ್ತಿದ್ದಾರೆ. ಅವರ ಶಕ್ತಿ ಕುಗ್ಗಿಲ್ಲ ಎಂದು ಭಾಷಣದುದ್ದಕ್ಕೂ ತಂದೆಯ ಗುಣಗಾನ ಮಾಡಿದರು.
ನಮ್ಮ ಶಕ್ತಿ ಎಂದೂ ಕುಗ್ಗಿಲ್ಲ:ಒಕ್ಕಲಿಗರ ಪ್ರಾಬಲ್ಯವಿದ್ದರೂ ಹಾಸನ ಜಿಲ್ಲೆಯಲ್ಲಿ ನಮ್ಮ ಸಮಾಜದ ಶಕ್ತಿ ಕುಗ್ಗಿಲ್ಲ. ಕಾಡಿನಲ್ಲಿ ಬೇಟೆಯಾಡುವ ಹುಲಿ ಬೋನಿನಲ್ಲಿ ಬಂಧಿಯಾದರೂ ಹುಲ್ಲು ತಿನ್ನುವುದಿಲ್ಲ. ಮೃಗಾಲಯದಲ್ಲಿದ್ದರೂ ಅದು ತನ್ನ ಪ್ರವೃತ್ತಿ ಮರೆಯಲ್ಲ. ಬೇಟೆಯಾಡುವುದು ಅದರ ಗುಣ. ಅದೇ ರೀತಿ ನಮ್ಮ ಸಮಾಜ ಕೂಡ. ರಾಜ್ಯದಲ್ಲೂ ವೀರಶೈವ- ಲಿಂಗಾಯತರ ಪ್ರಾಬಲ್ಯ ದೊಡ್ಡ ಮಟ್ಟದಲ್ಲಿದೆ ಎಂದು ಇದೇ ವೇಳೆ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಸಂಘಟನೆಯೆಡೆ ಸುರಾನಾ ಒಲವು:ಪಕ್ಷದ ಸಂಘಟನೆಯೆಡೆಗೆ ರಾಜ್ಯ ಉಪಾಧ್ಯಕ್ಷ ನಿರ್ಮಲ್​ಕುಮಾರ್ ಸುರಾನಾ ಒಲವು ವ್ಯಕ್ತಪಡಿಸಿದ್ದು, ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡುವುದು ಬೇಡವೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವೆ. ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಜವಾಬ್ದಾರಿ ನಿಭಾಯಿಬೇಕಾಗಿದೆ. ಈ ಕೆಲಸಗಳ ಮಧ್ಯೆ ರಾಜ್ಯಸಭೆ ಭಾರ ನಿರ್ವಹಣೆ ಕಷ್ಟಕರವೆಂದು ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಸುರಾನಾ ನಿವೇದಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಪಕ್ಷದೊಳಗೆ ಅಚ್ಚರಿ ಹಾಗೂ ವಿಭಿನ್ನ ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳಲ್ಲಿ ಸುರಾನಾ ಹೆಸರಿತ್ತು. ರಾಜ್ಯಸಭೆ ಮಾತ್ರವಲ್ಲ, ವಿಧಾನ ಪರಿಷತ್ ಸೇರಿ ಈ ಹಿಂದೆ ನಡೆದ ಚುನಾವಣೆ, ನೇಮಕದ ಸಂದರ್ಭದಲ್ಲೂ ಸುರಾನಾ ಹೆಸರು ಶಿಫಾರಸು ಮಾಡಿದ ಉದಾಹರಣೆಗಳಿವೆ.
ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
