ಬೆಂಗಳೂರು:ರಾಜ್ಯಸಭೆ ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಆರಿಸುವ ಮೂಲಕ ಬಿಜೆಪಿ ವರಿಷ್ಠರು ಲೆಕ್ಕಾಚಾರ ತಲೆಕೆಳಗು ಮಾಡಿದ ಆಘಾತದಿಂದ ರಾಜ್ಯ ನಾಯಕರು ಇನ್ನೂ ಹೊರಬಂದಂತಿಲ್ಲ. ಅಷ್ಟೇ ಅಲ್ಲ, ಅವರೊಂದು ತೀರ, ಇವರೊಂದು ತೀರ ಎಂಬಂತೆ ಪಕ್ಷಸರ್ಕಾರದ ಮಧ್ಯೆ ಸಂವಹನ ಕೊರತೆ ಉಂಟು ಮಾಡಿದೆ ಎನ್ನುತ್ತವೆ ಮೂಲಗಳು.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗಳು ವೈರುಧ್ಯದಿಂದ ಕೂಡಿದ್ದು, ವರಿಷ್ಠರ ಹಂತದಲ್ಲಿ ಎಲ್ಲವೂ ಗೌಪ್ಯವಾಗಿ ನಡೆದಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಬಗ್ಗೆ ಯಾವುದೇ ತಕರಾರು-ಅಪಸ್ವರಗಳಿಲ್ಲ. ಆದರೆ, ಅನುಸರಿಸಿದ ವಿಧಾನ ರಾಜ್ಯ ನಾಯಕರಿಗೆ ಮುಜುಗರ ಉಂಟು ಮಾಡಿದ್ದು, ವರಿಷ್ಠರನ್ನು ಮುಂದಿಟ್ಟು ಕೆಲವು ಪ್ರಭಾವಿಗಳು ತೆರೆಮರೆಯಲ್ಲಿ ಕೈಚಳಕ ತೋರಿಸಿದ್ದಾರೆ ಎಂಬ ಬಲವಾದ ಅನುಮಾನ ಮುಂಚೂಣಿಯಲ್ಲಿರುವ ಹಲವು ನಾಯಕರನ್ನು ಕಾಡುತ್ತಿದೆ ಎಂದು ಮೂಲಗಳು ಹೇಳಿವೆ.ಇದನ್ನೂ ಓದಿ:ಕಿಡ್ನಿಯಲ್ಲಿತ್ತು 750 ಗ್ರಾಂ ಕಲ್ಲು: ಇದು ವೈದ್ಯಕೀಯ ಲೋಕದ ಅಚ್ಚರಿ
ಒಗ್ಗಟ್ಟು ಪ್ರದರ್ಶನ:ಜನರಿಗೆ ತಪ್ಪು ಸಂದೇಶ ಹೋಗುವುದನ್ನು ತಪ್ಪಿಸಲು ಟಿಕೆಟ್ ಆಕಾಂಕ್ಷಿಗಳು ಸೇರಿ ಬಿಜೆಪಿ ನಾಯಕರು ನಾಮಪತ್ರ ಸಲ್ಲಿಕೆಗೆ ಮುನ್ನ ಒಗ್ಗಟ್ಟು ಪ್ರದರ್ಶಿಸಿದರು. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯಲ್ಲಿ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿ, ಶಾಸಕರು, ಪ್ರಭಾಕರ್ ಕೋರೆ, ರಮೇಶ್ ಕತ್ತಿ, ಅಭ್ಯರ್ಥಿಗಳಾದ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಜತೆಗಿದ್ದರು.ಇದನ್ನೂ ಓದಿ:ಪ್ರತಿಯೊಬ್ಬ ಕಾರ್ಯಕರ್ತರಿಗೆ ಗೌರವ ಸಲ್ಲಲ್ಲಿ ; ರಾಜ್ಯಸಭಾ ಅಭ್ಯರ್ಥಿ ರಾಯಚೂರಿನ ಅಶೋಕ ಗಸ್ತಿ ಹೇಳಿಕೆ
ನಮ್ಮ ರಾಷ್ಟ್ರೀಯ ನಾಯಕರು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಕೋರ್ ಕಮಿಟಿ ಸಭೆಯಲ್ಲಿ ಬೇರೆ ಹೆಸರುಗಳನ್ನು ರ್ಚಚಿಸಿದ್ದೆವು. ಆದರೆ, ಸಾಮಾನ್ಯ ಕಾರ್ಯಕರ್ತರ ಹೆಸರು ಕೊಡಿ ಎಂದು ಪ್ರಧಾನಿ ನೇತೃತ್ವದ ಸಂಸದೀಯ ಸಭೆ ಸೂಚಿಸಿದ್ದರಿಂದ ಬೇರೆ ಹೆಸರುಗಳನ್ನೂ ಕಳುಹಿಸಿಕೊಟ್ಟಿದ್ದೆವು.
| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
ವರಿಷ್ಠರಿಗೆ ಕಳುಹಿಸಿದ್ದ ಪಟ್ಟಿಯಲ್ಲಿ ಕಾರ್ಯಕರ್ತರ ಹೆಸರಿದ್ದವು. ಆದರೆ, ಆ ಹೆಸರುಗಳನ್ನು ನಾವು ನಿಮಗೆ (ಮಾಧ್ಯಮದವರು) ಹೇಳಿರಲಿಲ್ಲ. ವರಿಷ್ಠರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಟ್ಟಿಯಲ್ಲಿದ್ದ ಕಾರ್ಯಕರ್ತರನ್ನು ಆರಿಸಿದ್ದಾರೆ.
| ನಳಿನ್​ಕುಮಾರ್ ಕಟೀಲ್ಬಿಜೆಪಿ ರಾಜ್ಯಾಧ್ಯಕ್ಷ
ಟಿಕೆಟ್ ಕೈತಪ್ಪಿದ್ದಕ್ಕಾಗಿ ಬೇಸರ ಇಲ್ಲವೇ ಇಲ್ಲ. ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಆಗಲು ಅವಕಾಶ ಕೊಟ್ಟಿದ್ದಾರೆ. ಅಲ್ಲದೆ ಪಕ್ಷದ ರಾಜ್ಯ ಉಪಾಧ್ಯಕ್ಷನನ್ನಾಗಿಸಿ ಸಂಘಟನೆಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ.
| ಡಾ. ಪ್ರಭಾಕರ್ ಕೋರೆರಾಜ್ಯಸಭೆ ಸದಸ್ಯ
ಯಡಿಯೂರಪ್ಪ ಅವರು ನನಗೆ ಮಾತು ಕೊಟ್ಟಿದ್ದೂ ನಿಜ, ಮಂತ್ರಿ ಪದವಿ ಬೇಡ ನನ್ನ ಸೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿ ಎಂದು ವರಿಷ್ಠರಲ್ಲಿ ನನ್ನಣ್ಣ ಉಮೇಶ್ ಕತ್ತಿ ಕೋರಿದ್ದೂ ನಿಜ. ಆದರೆ, ಕಾರ್ಯಕರ್ತರಿಗೆ ಮಹತ್ವ ನೀಡುವ ಪಕ್ಷವೆಂಬ ಸೂಕ್ಷ್ಮ ಸಂದೇಶ ವರಿಷ್ಠರು ನೀಡಿದ್ದು ಸಂತೋಷವಾಗಿದೆ.
| ರಮೇಶ್ ಕತ್ತಿಮಾಜಿ ಸಂಸದ
ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮ-ಮುತ್ಸದ್ದಿತನ ನೋಡಿ ಅವರ ನಾಯಕತ್ವದಲ್ಲಿ ಬೆಳೆದವರು. ಪಕ್ಷದ ಸಂಘಟನೆಗಾಗಿ ವಿವಿಧ ಶಾಖೆಗಳಿರುತ್ತವೆಯೇ ಹೊರತು ಯಾವುದೇ ಬಣಗಳಿಲ್ಲ. ವರಿಷ್ಠರು ಪಕ್ಷನಿಷ್ಠೆ ಹಾಗೂ ಸೇವೆ ಗುರುತಿಸಿ ಈ ಅವಕಾಶ ನೀಡುವ ಮೂಲಕ ಕಾರ್ಯಕರ್ತರನ್ನು ಗೌರವಿಸಿದ್ದಾರೆ.
| ಅಶೋಕ್ ಗಸ್ತಿಬಿಜೆಪಿ ಅಭ್ಯರ್ಥಿ
ರಾಷ್ಟ್ರ-ರಾಜ್ಯ ನಾಯಕರ ಒಟ್ಟಾಭಿಪ್ರಾಯದ ಮೇರೆಗೆ ತೀರ್ಮಾನಿಸಿದ್ದು ನಾನು ಮಾಧ್ಯಮದವರಿಗೆ ಹೊಸಬ. ಕಾರ್ಯಕರ್ತ ರಿಗೆ ಮಹತ್ವ ನೀಡುವ ಪಕ್ಷವೆಂಬ ಸಂದೇಶ ವರಿಷ್ಠರು ನೀಡಿದ್ದಾರೆ. ಉಮೇಶ್ ಕತ್ತಿ ಅಣ್ಣನೇ ನನಗೆ ಫೋನ್ ಮಾಡಿದ್ದರು, ‘ನಿಮ್ಮ ಅಣ್ಣ (ರಮೇಶ್ ಕತ್ತಿ)ನಿಗೆ ಕೇಳಿದ್ದೆವು, ತಮ್ಮನಿಗೆ ಸಿಕ್ಕಿದೆ ಎಂದು ಸಂತಸಗೊಂಡರು.
| ಈರಣ್ಣ ಕಡಾಡಿಬಿಜೆಪಿ ಅಭ್ಯರ್ಥಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
