ಬೆಂಗಳೂರು:ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸೈಯದ್‌ ನಾಸಿರ್‌ ಹುಸೇನ್‌ ಬೆಂಬಲಿಗರು ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪ ಮಾಡಿದ್ದು ಕಾಂಗ್ರೆಸ್​ ಮತ್ತು ಬೆಜೆಪಿ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ.
ಇದನ್ನೂ ಓದಿ:IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?
ಬುಧವಾರ ಬಿಜೆಪಿ ಕರ್ನಾಟಕ ತಮ್ಮ ಎಕ್ಸ್​ ಖಾತೆಯಲ್ಲಿ ಹಾಕಿರುವ ಒಂದು ಪೋಸ್ಟರ್​​ ಕಾಂಗ್ರೆಸ್​ನ​ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ರೀ ಟ್ಟೀಟ್​ ಮಾಡಿ ಎಚ್ಚರಿಕೆ ನೀಡಿದೆ.
ನೀವು ದೂರು ದಾಖಲಿಸುವುದು ಪಾಕಿಸ್ಥಾನದಲ್ಲೋ ಅಥವಾ ಭಾರತದಲ್ಲೋ?#AntiNationalCongress#AntiIndiaCongresshttps://t.co/GezwyHgTmv
— BJP Karnataka (@BJP4Karnataka)February 28, 2024

ಬುಧವಾರ ಮಧ್ಯಾಹ್ನ ಟ್ಟೀಟ್​ ಮಾಡಿರುವ ಬಿಜೆಪಿ ಭಾರತದಲ್ಲಿ ಪಾ”ಕೈ”ಸ್ತಾನವನ್ನು ಬೆಂಬಲಿಸುವವರ “ಕೈ”ಗಳನ್ನು ಹೆಡೆಮುರಿ ಕಟ್ಟಿ ಎಂದಿದೆ. ಹಾಗೂ ಕೈ ಸಿಂಬಲ್​ನಲ್ಲಿ ಪಾಕೈಸ್ತಾನ ಎಂದು ವಿಶೇಷ ಪೋಸ್ಟರ್​ ಪ್ರಕಟಿಸಿದೆ. ನೀವು ದೂರು ದಾಖಲಿಸುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ ಎಂದು ಕಾಂಗ್ರೆಸ್​ನ್ನು ಪ್ರಶ್ನೆ ಮಾಡಿದೆ.
ಅದನ್ನೇ ರೀಟ್ಟೀಟ್​ ಮಾಡಿರುವ ಕಾಂಗ್ರೆಸ್​ ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ಎಚ್ಚರಿಕೆಯನ್ನೂ ನೀಡಿದೆ.
IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
