ಬೆಂಗಳೂರು:ಮಹಿಳೆಯರ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪ ಪ್ರಕರಣದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ಮೌರ್ಯ ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಭೋವಿ ಸಮುದಾಯದ ತುಳಸಿ ರಮೇಶ್ ಮತ್ತು ದೀಪಾ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ವೆಂಕಟೇಶ್ ಮೌರ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಂಕಟೇಶ ಮೌರ್ಯ ಭೋವಿ ಸಮುದಾಯದ ಮಹಿಳೆಯರ ಬಗ್ಗೆ ತೇಜೋವಧೆ ಮಾಡುವಂತಹ ಫೋಸ್ಟ್‌ಗಳನ್ನು ಜಾಲತಾಣ, ಸಮುದಾಯದ ಗ್ರೂಪ್‌ಗಳಲ್ಲಿ ಹಾಕಿದ್ದ. ಸ್ವಾಮೀಜಿಯೊಬ್ಬರು ಕೇಕ್ ತಿನ್ನಿಸುವ ಫೋಟೋ ಹಾಕಿ ಅವಹೇಳನ ಮಾಡಿದ್ದ ಎನ್ನಲಾಗಿದೆ.
ಈ ಸಂಬಂಧ ಶನಿವಾರ ಅರಮನೆ ಮೈದಾನದ ಬಳಿಗೆ ವೆಂಕಟೇಶ್ ಮೌರ್ಯನನ್ನು ದೀಪಾ, ತುಳಸಿ ರಮೇಶ್ ಸೇರಿದಂತೆ ಕೆಲ ಮಹಿಳೆಯರು ಕರೆಸಿಕೊಂಡಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮಹಿಳೆಯರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ವೆಂಕಟೇಶ್ ಮೌರ್ಯ ಹಲ್ಲೆ ನಡೆಸಿದರು. ಮಹಿಳೆಯರು ಸಹ ವೆಂಕಟೇಶ್ ಮೌರ್ಯ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.
ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು. ದೀಪಾ ಮತ್ತು ತುಳಸಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹೆಂಡ್ತಿಯನ್ನು ಕೊಂದು ಪೀಸ್​ ಪೀಸ್​ ಮಾಡಿ ಎಸೆದ; ಆಕೆಯ ದೇಹದ ತುಂಡು ನಾಯಿ ತಿನ್ನುತ್ತಿದ್ದುದರಿಂದ ಪ್ರಕರಣ ಬಹಿರಂಗ!
ಯುವತಿಯ ಬ್ಯಾಕ್​ ಮೇಲೆ ಸ್ಕೇಲ್​ನಲ್ಲಿ ಹೊಡೆದಿದ್ದಕ್ಕೆ 90 ಲಕ್ಷ ರೂ. ಕಳೆದುಕೊಂಡ ಬಾಸ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
