| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ವಿವಿಧ ಹಗರಣಗಳನ್ನು ಬೇರೆ ಬೇರೆ ಏಜೆನ್ಸಿಗಳ ಮೂಲಕ ತನಿಖೆಗೆ ಒಪ್ಪಿಸಲು ಸರ್ಕಾರದಲ್ಲಿ ನಡೆದಿರುವ ಚರ್ಚೆಗಳು ಬಹುತೇಕ ಅಂತಿಮ ಹಂತ ತಲುಪಿವೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಬಿಟ್ ಕಾಯಿನ್, 40 ಪರ್ಸೆಂಟ್, ಪಿಎಸ್​ಐ ನೇಮಕ, ಸಹಾಯಕ ಪ್ರಾಧ್ಯಾಪಕರ ನೇಮಕ, ಕರೊನಾ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿ ಹೀಗೆ ವಿವಿಧ ಅಕ್ರಮಗಳನ್ನು ಸದನದ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸಿ ಹೋರಾಟ ಮಾಡಿತ್ತು. ಈಗ ಅಧಿಕಾರ ಸಿಕ್ಕ ಮೇಲೆ ಹಿಂದೆ ಸರಿದರೆ ತಪು್ಪ ಸಂದೇಶ ರವಾನೆಯಾಗಲಿದೆ ಎಂಬ ಕಾರಣಕ್ಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ಯಾವ ಅಕ್ರಮದ ಬಗ್ಗೆ ಯಾವ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂಬುದನ್ನು ಚರ್ಚೆ ಮಾಡಲಾಗಿದೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಪ್ರಮುಖ ಹಗರಣಗಳನ್ನು ಯಾವ ಮಾದರಿ ತನಿಖೆಗೆ ಒಪ್ಪಿಸಬೇಕು ಎಂಬ ಆದೇಶ ಹೊರಬೀಳಲಿದೆ. ಸಣ್ಣಪುಟ್ಟ ಹಗರಣಗಳ ತನಿಖೆಗಳಿಗೆ ಆದೇಶಗಳನ್ನು ಕಾಲಕಾಲಕ್ಕೆ ಹೊರಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಯಾರಿಂದ ತನಿಖೆ?:ಬಿಟ್ ಕಾಯಿನ್ ಬಹುದೊಡ್ಡ ಹಗರಣವಾಗಿದೆ. ಇದರಲ್ಲಿ ಒಂದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿದೆ ಎಂಬ ಗುಮಾನಿ ಇದೆ. ಆದ್ದರಿಂದ ಅದನ್ನು ಪ್ರಾಮಾಣಿಕರಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ತನಿಖೆಗೆ ಒಪ್ಪಿಸಲಾಗುತ್ತದೆ. ಆ ಅಧಿಕಾರಿ ಯಾರು ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. 40 ಪರ್ಸೆಂಟ್ ಹಗರಣ ಸಹ ಬೇರೆ ಬೇರೆ ಇಲಾಖೆಗಳನ್ನು ಒಳಗೊಳ್ಳುತ್ತದೆ. ಆದ್ದರಿಂದ ಅದನ್ನು ಸಹ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಲಾಗುತ್ತದೆ. ಈ ಎರಡು ಪ್ರಕರಣಗಳಲ್ಲಿ ವಿಶೇಷ ತನಿಖಾ ದಳ ರಚನೆಯಾಗಲಿದೆ. ಕೆಲವನ್ನು ಲೋಕಾಯುಕ್ತದಿಂದ, ಕೆಲವು ಸಿಐಡಿ ಹಾಗೂ ಬಹುತೇಕ ಪ್ರಕರಣಗಳನ್ನು ಮೊದಲಿಗೆ ಇಲಾಖಾ ತನಿಖೆ ನಡೆಸಿ ಅಗತ್ಯ ಬಿದ್ದರೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಪಿಎಸ್​ಐ ನೇಮಕವನ್ನು ಮಾತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಕೋರಿಕೆ:ಇನ್ನೂ ಬೇರೆ ಬೇರೆ ಇಲಾಖೆಗಳಲ್ಲಿಯೂ ಅಕ್ರಮಗಳು, ಹಣಕಾಸಿನ ಹಾಗೂ ಅಧಿಕಾರದ ದುರುಪಯೋಗ ನಡೆದಿರುವ ಬಗ್ಗೆ ಮಾಹಿತಿ ಕೋರಲಾಗಿದೆ.
ಶಾಸಕರ ಒತ್ತಡ:ನಾವು ಚುನಾವಣೆಯಲ್ಲಿ ಹಗರಣಗಳ ತನಿಖೆಯ ಭರವಸೆ ನೀಡಿ ಮತ ಪಡೆದಿದ್ದೇವೆ. ಮೊದಲು ತನಿಖೆಗೆ ಒಪ್ಪಿಸಿ ಎಂದು ಕಾಂಗ್ರೆಸ್​ನ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ತಂದಿದ್ದರ ಪರಿಣಾಮ ಯಾವ ಯಾವ ಸ್ವರೂಪದ ತನಿಖೆ ಮಾಡಬೇಕೆಂದು ನಿರ್ಧಾರವಾಗಿದೆ. ಅದನ್ನು ಅನುಷ್ಠಾನಗೊಳಿಸುವುದು ಮಾತ್ರ ಬಾಕಿ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ತನಿಖೆ ನಡೆದರೂ ಕೆಳಹಂತದ ಸಣ್ಣಪುಟ್ಟ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಮುಚ್ಚಿಹಾಕುವುದು ಮೊದಲಿನಿಂದಲೂ ಬೆಳೆದು ಬಂದಿದೆ. ಈಗ ಆ ರೀತಿ ಆಗದೆ ಪ್ರಕರಣದಲ್ಲಿರುವ ದೊಡ್ಡ ಅಧಿಕಾರಿಗಳು, ಮಧ್ಯವರ್ತಿಗಳು, ತಿಮಿಂಗಲಗಳನ್ನು ಬಲಿ ಹಾಕಲೇಬೇಕು. ಆ ಮಾತ್ರ ಚುನಾವಣೆಯಲ್ಲಿ ನಾವು ಮಾತನಾಡಿದ್ದಕ್ಕೂ ಬೆಲೆ ಬರುತ್ತದೆ ಎಂಬುದನ್ನು ಶಾಸಕರು ಆಗ್ರಹಿಸಿದ್ದಾರೆ.
ಮೂರು ತನಿಖೆಗೆ ಆದೇಶ:ಸರ್ಕಾರ ಈಗಾಗಲೇ ಮೂರು ಪ್ರಕರಣಗಳಲ್ಲಿ ತನಿಖೆಯ ನಿರ್ಧಾರವನ್ನು ಕೈಗೊಂಡಿದೆ. ಬಿಬಿಎಂಪಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ತನಿಖೆಗಳನ್ನು ನಡೆಸಲಾಗುತ್ತಿದೆ. ಘನತ್ಯಾಜ್ಯ ಘಟಕಗಳ ಹಗರಣದ ತನಿಖೆಗೆ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ವಹಿಸಲಾಗಿದೆ. ಬಿಬಿಎಂಪಿಯಲ್ಲಿನ ಬೇರೆ ಬೇರೆ ಅಕ್ರಮಗಳ ತನಿಖೆಯನ್ನು ಐಎಎಸ್ ಅಧಿಕಾರಿಗಳಾದ ರಶ್ಮಿ ಮಹೇಶ್ ಹಾಗೂ ಮೌನೀಶ್ ಮೌದ್ಗಿಲ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕೆಕೆಆರ್​ಡಿಬಿಯಲ್ಲಿನ ಅಕ್ರಮ ತನಿಖೆಯೂ ನಡೆಯುತ್ತಿದೆ.
ತನಿಖೆ ಏಕೆ?:ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಯತ್ನ ನಡೆಸಿವೆ. ಬಿಜೆಪಿ ಈಗಾಗಲೇ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಬಿಜೆಪಿಯನ್ನು ಈ ತನಿಖೆಯ ಮೂಲಕ ನಿಯಂತ್ರಿಸಬೇಕು ಹಾಗೂ ಕಟ್ಟಿ ಹಾಕಬಹುದು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ.
ಆ ‘ಜ್ಯೋತಿ’ ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..

ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
